ಕರ್ನಾಟಕ

karnataka

ETV Bharat / city

ಕಾಲುವೆ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಆರೋಪ: ಸಚಿವ ಆನಂದ ಸಿಂಗ್ ವಿರುದ್ಧ ದೂರು - ಆನಂದ ಸಿಂಗ್​ ಮನೆ

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ರಾಯ ಕಾಲುವೆಯ (ಎಸ್ಕೇಪ್ ) ಕಿರು ಕಾಲುವೆ ಸ್ಥಳ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಡಿ. ಅಬ್ದುಲ್ ಖದೀರ್, ಡಿ.ವೇಣುಗೋಪಾಲ್, ವಿ.ಚಿದಾನಂದ, ಎಂ. ಖಾಜಾ ಮೈನುದ್ದೀನ್, ಗುಜ್ಜಲ್ ಹುಲುಗಜ್ಜಪ್ಪ ಎಂಬುವರು ದೂರು ಸಲ್ಲಿಸಿದ್ದಾರೆ.

complaint-against-minister-anand-singh
ಸಚಿವ ಆನಂದ ಸಿಂಗ್

By

Published : Oct 22, 2021, 10:08 PM IST

ಹೊಸಪೇಟೆ(ವಿಜಯನಗರ): ರಾಯ ಕಾಲುವೆಯ (ಎಸ್ಕೇಪ್ ) ಕಿರು ಕಾಲುವೆ ಸ್ಥಳ ಒತ್ತುವರಿ ಮಾಡಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಬೃಹತ್ ಮನೆ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ತುಂಗಭದ್ರಾ ನೀರಾವರಿ ಇಲಾಖೆಗೆ ಸಂಬಂಧಿಸಿದ 0.30 ಎಕರೆ ಸ್ಥಳ ಒತ್ತುವರಿ ಮಾಡಲಾಗಿದ್ದು, ಸಚಿವ ಆನಂದ ಸಿಂಗ್ ಆಪ್ತರಾದ ಸುರಕ್ಷಾ ಎಂಟರ್ ಪ್ರಸೈಸ್ ನವರು ಲೇಔಟ್ ಅಭಿವೃದ್ಧಿ ಮಾಡುತ್ತಿದ್ದಾರೆ. ಕಾಲುವೆ ತೂಬುಗಳನ್ನು‌ ಮುಚ್ಚುವ ಮೂಲಕ ಸ್ಥಳ ಒತ್ತುವರಿ ಮಾಡಿ ಮನೆ ಮತ್ತು ಲೇಔಟ್ ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಗರದ ಸ್ಟೇಷನ್ ರಸ್ತೆಯಲ್ಲಿರೂ 25 ಎಕರೆ ಸ್ಥಳವನ್ನು ಆನಂದ ಸಿಂಗ್ ತಮ್ಮ ಕುಟುಂಬದ ಸದಸ್ಯರ ಹೆಸರಲ್ಲಿ 2007-08ರಲ್ಲಿ ಖರೀದಿ ಮಾಡಿದ್ರು. ನಂತರ ಎರಡು ಎಕರೆ ಪ್ರದೇಶದಲ್ಲಿ 2019 ಬೃಹತ್ ಬಂಗಲೇ ನಿರ್ಮಾಣ ಮಾಡಿದ್ದರು. ಉಳಿದ ಸ್ಥಳದಲ್ಲಿ ಅತ್ಯಾಧುನಿಕ ಲೇಔಟ್ ನಿರ್ಮಾಣ ಮಾಡಲಾಗಿದೆ.

ಈ‌ ಕುರಿತು ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ಡಿ. ಅಬ್ದುಲ್ ಖದೀರ್, ಡಿ.ವೇಣುಗೋಪಾಲ್, ವಿ.ಚಿದಾನಂದ, ಎಂ. ಖಾಜಾ ಮೈನುದ್ದೀನ್, ಗುಜ್ಜಲ್ ಹುಲುಗಜ್ಜಪ್ಪ ಎಂಬುವರು ದೂರು ಸಲ್ಲಿಸಿದ್ದಾರೆ.

ABOUT THE AUTHOR

...view details