ಕರ್ನಾಟಕ

karnataka

ETV Bharat / city

ವಿಭಜನೆಗೆ ಖಂಡನೆ, ಅಖಂಡ ಜಿಲ್ಲೆಗೆ ಒತ್ತಾಯಿಸಿ ಅ. 1ರಂದು ಬಳ್ಳಾರಿ ಬಂದ್​​ಗೆ ಕರೆ - ಅನರ್ಹ ಶಾಸಕ ಆನಂದ್ ಸಿಂಗ್

ವಿಜಯನಗರ ಜಿಲ್ಲೆ ರಚನೆಗೆ ವಿರೋಧಿಸಿ, ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಆಗ್ರಹಿಸಿ 15ಕ್ಕೂ ಹೆಚ್ಚು ಸಂಘಟನೆಗಳು ಅಕ್ಟೋಬರ್​ 1ರಂದು ಜಿಲ್ಲೆ ಬಂದ್​​ಗೆ ಕರೆ ಕೊಟ್ಟಿವೆ.

bellary-bandh-on-1st-october

By

Published : Sep 29, 2019, 7:17 PM IST

ಬಳ್ಳಾರಿ:ವಿಜಯನಗರಜಿಲ್ಲೆ ರಚನೆಗೆ ವಿರೋಧಿಸಿ, ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಆಗ್ರಹಿಸಿ 15ಕ್ಕೂ ಹೆಚ್ಚು ಸಂಘಟನೆಗಳು ಅಕ್ಟೋಬರ್​ 1ರಂದು ಜಿಲ್ಲೆ ಬಂದ್​​ಗೆ ಕರೆ ಕೊಟ್ಟಿವೆ.

ವಿವಿಧ ಸಂಘಟನೆಗಳು ಇಂದು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿವೆ. ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ನಾನಾ ಪ್ರಗತಿಪರ ಸಂಘಟನೆಗಳು ಈ ಬಂದ್​​ಗೆ ಬೆಂಬಲ ನೀಡಿವೆ.

ವಿವಿಧ ಸಂಘಟನೆಗಳ ಸಭೆ
ಕೆಲವರ ವಿರುದ್ಧ ಆಕ್ರೋಶ:ಬಳ್ಳಾರಿ ಜಿಲ್ಲೆ ವಿಭಜನೆಗೆ ರಾಜ್ಯ ಸರ್ಕಾರ ಮತ್ತು ಬಳ್ಳಾರಿಯ ಕೈ ಹಿರಿಯ ನಾಯಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅನರ್ಹ ಶಾಸಕ ಆನಂದ್ ಸಿಂಗ್ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ABOUT THE AUTHOR

...view details