ಕರ್ನಾಟಕ

karnataka

ETV Bharat / city

ಹಂಪಿ ಕನ್ನಡ ವಿವಿಯ ಕುಲಪತಿಗೆ ವೇದಿಕೆಯಲ್ಲೇ ಯೋಗ ಕಲಿಸಿದ ಬಾಬಾ ರಾಮ್​ದೇವ್​ - hospet news

ಕನ್ನಡ ವಿವಿಯ ಮಂಟಪ ಸಭಾದಲ್ಲಿ ಯೋಗ ಅಧ್ಯಯನ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಎರಡು ದಿನಗಳ ಕಾಲ ಭಾರತೀಯ ಪರಂಪರೆ ರಾಷ್ಟ್ರೀಯ ವಿಚಾರ ಸಂಕೀರ್ಣ ಆಯೋಜನೆ ಹಮ್ಮಿಕೊಳ್ಳಲಾಗಿದೆ. ಇಂದು ಕನ್ನಡ ವಿವಿ ಕುಲಪತಿಗೆ ಯೋಗ ಗುರು ಬಾಬಾ ರಾಮ್​ದೇವ್ ವೇದಿಕೆಯಲ್ಲೇ ಯೋಗ ಹೇಳಿಕೊಟ್ಟರು.

Baba Ram Deo taught yoga on stage to Kannada university Chancellor
ಕನ್ನಡ ವಿವಿಯ ಕುಲಪತಿಗೆ ವೇದಿಕೆಯಲ್ಲೆ ಯೋಗ ಕಲಿಸಿದ ಬಾಬಾ ರಾಮ್​ದೇವ್​

By

Published : Feb 6, 2020, 7:03 PM IST

ಹೊಸಪೇಟೆ:ಕನ್ನಡ ವಿವಿಯ ಮಂಟಪ ಸಭಾದಲ್ಲಿ ಯೋಗ ಅಧ್ಯಯನ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಎರಡು ದಿನಗಳ ಕಾಲ ಭಾರತೀಯ ಪರಂಪರೆ ರಾಷ್ಟ್ರೀಯ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ. ಕನ್ನಡ ವಿವಿ ಕುಲಪತಿಗೆ ಯೋಗ ಗುರು ಬಾಬಾ ರಾಮ್​ದೇವ್ ವೇದಿಕೆಯಲ್ಲೇ ಯೋಗ ಹೇಳಿಕೊಟ್ಟರು.

ಕನ್ನಡ ವಿವಿಯ ಕುಲಪತಿಗೆ ವೇದಿಕೆಯಲ್ಲೇ ಯೋಗ ಕಲಿಸಿದ ಬಾಬಾ ರಾಮ್​ದೇವ್​

ಕನ್ನಡ ವಿವಿಯ ಕುಲಪತಿ ಡಾ. ಸ.ಚಿ. ರಮೇಶ ಅಧ್ಯಕ್ಷೀಯ ಭಾಷಣ ಮಾಡುವ ಸಮಯದಲ್ಲಿ, ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನನಿತ್ಯ ಜೀವನದಲ್ಲಿ ಯೋಗ ಮಾಡುವುದರಿಂದ ಸಮಾಜದಲ್ಲಿ ಉತ್ತಮ ಮಾದರಿಯ ವ್ಯಕ್ತಿಯಾಗಿ ನಾವು ಕಾಣುತ್ತೇವೆ. ಹಿಂದೆ ಹಳ್ಳಿಯಲ್ಲಿ ಕೆಲಸ ಮಾಡುವ ಮೂಲಕ ಯೋಗವನ್ನು ತಾಯಂದಿರು ಅಭ್ಯಾಸ ಮಾಡುತ್ತಿದ್ದರು. ಆದರೆ, ಪ್ರಸಕ್ತ ವಾತಾವರಣ ಬದಲಾಗಿದೆ. ನನಗೆ ಯೋಗದ ಬಗ್ಗೆ ಅಷ್ಟೊಂದು ಮಾಹಿತಿ ಗೊತ್ತಿಲ್ಲ ಎಂದು ಮಾತನಾಡುವಾಗ, ಬಾಬಾ ರಾಮ್​ದೇವ್​ ಗುರೂಜಿ ಅವರು, ವೇದಿಕೆಯ ಮೇಲೆಯೇ ಯೋಗವನ್ನು ಕಲಿಸಿದರು.

ABOUT THE AUTHOR

...view details