ಕರ್ನಾಟಕ

karnataka

By

Published : Jan 22, 2020, 8:50 AM IST

ETV Bharat / city

ಬಿಸಿಲನ್ನೂ ಲೆಕ್ಕಿಸದೆ ಪಾದಯಾತ್ರೆಯಲ್ಲಿ ಭಾಗಿಯಾದ ಸಹಸ್ರಾರು ಭಕ್ತರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ನಡೆಯುತ್ತಿರುವ ಯಲ್ಲಾಲಿಂಗ ಮಹರಾಜರ 34ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವದ ಹಿನ್ನೆಲೆ 20ಕ್ಕೂ ಹೆಚ್ಚು ಕಿ.ಮೀ. ದೂರ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಪಾದಯಾತ್ರೆ ಮಾಡಿದರು.

Yallalinga Maharaja Fest
ಪಾದಯಾತ್ರೆಯಲ್ಲಿ ಭಾಗಿಯಾದ ಸಹಸ್ರಾರು ಭಕ್ತರು

ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ನಡೆಯುತ್ತಿರುವ ಯಲ್ಲಾಲಿಂಗ ಮಹರಾಜರ 34ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವದ ಹಿನ್ನೆಲೆ 20ಕ್ಕೂ ಹೆಚ್ಚು ಕಿ.ಮೀ. ದೂರ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಪಾದಯಾತ್ರೆ ಮಾಡಿದರು.

ಯಲ್ಲಾಲಿಂಗ ಮಹರಾಜರ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವ

ಮುಗಳಖೋಡ ಮಠಕ್ಕೆ ಸರ್ವ ಧರ್ಮೀಯರು ಮೊರೆ ಹೋಗುವುದು ವಿಶೇಷ. ಅದರಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪಾದಯಾತ್ರೆ ಮೂಲಕ ಕೋಳಿಗುಡ್ಡ ಶ್ರೀಮಠದಿಂದ ಮುಕ್ತಿ ಮಂದಿರ ಮುಗಳಖೋಡದವರೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆಯನ್ನು ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಕುಡಚಿ ಶಾಸಕ ಪಿ.ರಾಜೀವ್​ ಕೂಡಾ ಕಳೆದ 11 ವರ್ಷದಿಂದ ಪಾದಯಾತ್ರೆಯ ಮೂಲಕ ಅಜ್ಜನವರ ದರ್ಶನ ಪಡೆಯಲು ಬರುತ್ತಿದ್ದಾರಂತೆ.

ಪಾದಯಾತ್ರೆಗೆ ಪಾಲಭಾವಿ, ಹಿಡಕಲ, ಸಿದ್ದಾಪೂರ, ಹಾರೂಗೇರಿ ಹೀಗೆ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಜೊತೆಗೆ ಆಂಧ್ರ ಪ್ರದೇಶದ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಹೀಗೆ ಹಲವಾರು ರಾಜ್ಯಗಳ ಭಕ್ತರು ಯಲ್ಲಾಲಿಂಗ ಅಜ್ಜನವರ ಆಶೀರ್ವಾದ ಪಡೆಯಲು ಬರುವುದು ವಿಶೇಷ.

ABOUT THE AUTHOR

...view details