ಕರ್ನಾಟಕ

karnataka

ETV Bharat / city

ಅಥಣಿಯಲ್ಲಿ ಕೊರೊನಾ ವಾರಿಯರ್ಸ್​ಗೆ ಇಲ್ಲ ಸುರಕ್ಷತೆ - ಕ್ವಾರಂಟೈನ್

ಅಥಣಿ ತಾಲೂಕಿನಲ್ಲಿ ಕ್ವಾರಂಟೈನ್​ನಲ್ಲಿರುವವರ ಯೋಗಕ್ಷೇಮ ವಿಚಾರಿಸುತ್ತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಒಳ್ಳೆಯ ಮಾಸ್ಕ್, ಹ್ಯಾಂಡ್ ಗ್ಲೌಸ್​, ಸ್ಯಾನಿಟೈಸರ್ ಸಿಗದೇ ಆತಂಕದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.

no safety measures to corona warriors in Athani
ಅಥಣಿಯಲ್ಲಿ ಕೊರೊನಾ ವಾರಿಯರ್ಸ್​ಗೆ ಇಲ್ಲ ಸುರಕ್ಷತೆ

By

Published : Jun 1, 2020, 4:56 PM IST

ಅಥಣಿ:ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸುರಕ್ಷತೆಗೆ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಥಣಿಯಲ್ಲಿ ಕೊರೊನಾ ವಾರಿಯರ್ಸ್​ಗೆ ಇಲ್ಲ ಸುರಕ್ಷತೆ

ಜಾರ್ಖಂಡ್ ರಾಜ್ಯದ ಶಿಖರ್ಜಿ ಪ್ರವಾಸಿಗರ ನಂಟಿನಿಂದ ಅಥಣಿ ತಾಲೂಕಿನಲ್ಲಿ ಮೇ 26 ರಂದು 12 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ನಿರ್ದಿಷ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳಗಳಲ್ಲಿ ಕ್ವಾರಂಟೈನ್​​ ಮಾಡಲಾಗಿತ್ತು. ತಾಲೂಕಿನ ಝುಂಜರವಾಡ, ಕೊಕಟನೂರ, ನಂದಗಾವ, ಸವದಿ, ಗ್ರಾಮಗಳಲ್ಲಿ ಕ್ವಾರಂಟೈನ್​ನಲ್ಲಿರುವ ಇವರನ್ನು ನೋಡಿಕೊಳ್ಳಲು ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಆದರೆ, ತಾಲೂಕು ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ ಒಳ್ಳೆಯ ಮಾಸ್ಕ್, ಹ್ಯಾಂಡ್ ಗ್ಲೌಸ್​, ಸ್ಯಾನಿಟೈಸರ್ ಸಿಗದೇ ಆತಂಕದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾ.ಪಂ ಸಿಬ್ಬಂದಿಯೊಬ್ಬರು ಈಟಿವಿ ಭಾರತಕ್ಕೆ (ಆಪ್ ದಿ ರೆಕಾರ್ಡ್) ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ತಾಲೂಕು ವೈದ್ಯಾಧಿಕಾರಿ ಹೆಚ್​. ಕೊಪ್ಪದ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕೊರೊನಾ ತಡೆಗಟ್ಟುವ ಸಲಕರಣೆ ನೀಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details