ಕರ್ನಾಟಕ

karnataka

ETV Bharat / city

ಕೆಲ ತಿಂಗಳ ಹಿಂದಷ್ಟೇ ಪತಿ ಕಳೆದುಕೊಂಡ ಶಿಕ್ಷಕಿ ಅಪಘಾತದಲ್ಲಿ ಸಾವು, ಮಕ್ಕಳು ಅನಾಥ - ಅಪಘಾತ ನ್ಯೂಸ್

ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬೆಳಗಾವಿಯ ಕೊಲ್ಲಾಪುರ ಸರ್ಕಲ್ ಬಳಿ ನಡೆಯಿತು.

belagavi accident
belagavi accident

By

Published : Jun 26, 2022, 8:15 AM IST

ಬೆಳಗಾವಿ: ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಲ್ಲಿನ ಕೊಲ್ಲಾಪುರ ಸರ್ಕಲ್ ಸಮೀಪ ನಡೆದಿದೆ. ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ರೇಣುಕಾ ಭಾತಕಾಂಡೆ (30)‌ ಮೃತರು.

ಇವರು ಚನ್ನಮ್ಮ ವೃತ್ತದ ಕಡೆ ತಮ್ಮ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಶಿಕ್ಷಕಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಪತಿಯನ್ನು ಕಳೆದುಕೊಂಡಿದ್ದರು. ಈಗ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 3 ವರ್ಷದ ಬಾಲಕಿ ನಾಪತ್ತೆ.. ಮಗಳನ್ನು 500ರೂ.ಗೆ ಮಾರಾಟ ಮಾಡಿರುವ ಬಗ್ಗೆ ತಂದೆಯ ಆತಂಕ

ABOUT THE AUTHOR

...view details