ಕರ್ನಾಟಕ

karnataka

ETV Bharat / city

ಶತ ಕೋಟಿ ಒಡೆಯ ಸತೀಶ್​ ಜಾರಕಿಹೊಳಿ: ಮಂಗಳಾ ಅಂಗಡಿ ಎಷ್ಟು ಕೋಟಿ ಆಸ್ತಿ ಒಡತಿ?

ಬೆಳಗಾವಿ ‌ಲೋಕಸಭೆ ಉಪಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಚುನಾವಣೆ ‌ಆಯೋಗಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ‌ಜಾರಕಿಹೊಳಿ ಶತಕೋಟಿ ಒಡೆಯನಾದರೆ, ಬಿಜೆಪಿ ಅಭ್ಯರ್ಥಿ ‌ಮಂಗಳಾ ಅಂಗಡಿ 14.77 ಆಸ್ತಿ ‌ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

satish jarkiholi and mangala angadi
satish jarkiholi and mangala angadi

By

Published : Apr 1, 2021, 11:17 AM IST

ಬೆಳಗಾವಿ: ಬೆಳಗಾವಿ ‌ಲೋಕಸಭೆ ಕ್ಷೇತ್ರದ ಉಪಚುನಾವಣೆ ‌ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಚುನಾವಣೆ ‌ಆಯೋಗಕ್ಕೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ‌ಜಾರಕಿಹೊಳಿ ಶತಕೋಟಿ ಒಡೆಯನಾದರೆ, ಬಿಜೆಪಿ ಅಭ್ಯರ್ಥಿ ‌ಮಂಗಳಾ ಅಂಗಡಿ 14.77 ಆಸ್ತಿ ‌ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಉಭಯ ಅಭ್ಯರ್ಥಿಗಳ ಕುಟುಂಬದ ಆಸ್ತಿ ವಿವರ ಇಂತಿದೆ.

ಶತಕೋಟಿ ‌ಒಡೆಯ ಸತೀಶ್:

ಕಾಂಗ್ರೆಸ್ ಅಭ್ಯರ್ಥಿ ಸತೀಶ್​ ಜಾರಕಿಹೊಳಿ ನೂರು ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. 13.62 ಕೋಟಿ ರೂ. ಚರಾಸ್ತಿ ಹಾಗೂ 113 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರಲ್ಲಿ ಸ್ವಯಾರ್ಜಿತ ಆಸ್ತಿ ಮೌಲ್ಯವೇ 121 ಕೋಟಿ ಆಗುತ್ತದೆ. ಪಿಯುಸಿ ವ್ಯಾಸಂಗ ಮಾಡಿರುವ ಸತೀಶ್​ ಜಾರಕಿಹೊಳಿ, ತಮ್ಮದು ಹಾಗೂ ಪತ್ನಿಯದ್ದು ಕೃಷಿ ಮತ್ತು ವ್ಯವಹಾರ ವೃತ್ತಿ ಎಂದು ತಿಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಖಾತೆಗಳನ್ನು ಹೊಂದಿದ್ದಾರೆ.

ಇನ್ನು ಕೈಯಲ್ಲಿ 5.04 ಲಕ್ಷ ಇದೆ. ಪತ್ನಿ ಶಕುಂತಲಾ ಬಳಿ 90,889 ರೂ, ಪುತ್ರಿ ಪ್ರಿಯಾಂಕಾ ಅವರಲ್ಲಿ 9,465 ರೂ. ಮತ್ತು ‍ಪುತ್ರ ರಾಹುಲ್‌ ಬಳಿ 18,350 ರೂ. ಇದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ 31.74 ಲಕ್ಷ ರೂ, ಪತ್ನಿ ಬ್ಯಾಂಕ್ ಖಾತೆಯಲ್ಲಿ 36.47 ಲಕ್ಷ ರೂ., ಪುತ್ರಿ ಬ್ಯಾಂಕ್ ಖಾತೆಯಲ್ಲಿ 1.55 ಲಕ್ಷರೂ., ಪುತ್ರನ ಬ್ಯಾಂಕ್ ಖಾತೆಯಲ್ಲಿ 2.30 ಲಕ್ಷ ರೂ. ಇದೆ. ಜೊತೆಗೆ ಸತೀಶ್​ ಶುಗರ್ಸ್‌, ಘಟಪ್ರಭಾ ಶುಗರ್ಸ್‌, ವೆಸ್ಟರ್ನ್‌ ಘಾಟ್ ಇನ್ಫ್ರಾ, ಸುವರ್ಣ ಕರ್ನಾಟಕ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ ಮೊದಲಾದ ಕಡೆಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ.

ಪತ್ನಿಯಿಂದ 98.63 ಲಕ್ಷ ಸಾಲ ಪಡೆದಿದ್ದಾರೆ. 2 ಮಹಿಂದ್ರಾ ಸ್ಕಾರ್ಪಿಯೊ ವಾಹನಗಳಿವೆ. 25 ತೊಲ ಚಿನ್ನ ಹಾಗೂ 4 ಕೆ.ಜಿ. 563 ಗ್ರಾಂ ಬೆಳ್ಳಿ ಹೊಂದಿದ್ದಾರೆ. ಪತ್ನಿ ಬಳಿ 2,949 ಗ್ರಾಂ. ಚಿನ್ನ, 4.29 ಕೆ.ಜಿ ಬೆಳ್ಳಿ, ಪುತ್ರಿ ಬಳಿ 100 ಗ್ರಾಂ ಚಿನ್ನವಿದೆ. ಸ್ಥಿರಾಸ್ತಿಯಲ್ಲಿ ವಿವಿಧೆಡೆ ಹೊಂದಿರುವ ಕೃಷಿ ಭೂಮಿ, ವಾಣಿಜ್ಯ ನಿವೇಶನ, ನಿವೇಶನ, ಮನೆಗಳ ಮಾಹಿತಿ ನೀಡಿದ್ದಾರೆ. 6.75 ಕೋಟಿ ಸಾಲ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 4.48 ಕೋಟಿ ರೂ., ಪುತ್ರಿ ಹೆಸರಲ್ಲಿ 2.34 ಕೋಟಿ ರೂ. ಹಾಗೂ ಪುತ್ರನ ಹೆಸರಲ್ಲಿ 1.82 ಕೋಟಿ ಸಾಲವಿದೆ ಎಂದು‌ ಮಾಹಿತಿ ನೀಡಿದ್ದಾರೆ.

ಮಂಗಳಾ ಅಂಗಡಿ ಆಸ್ತಿ ವಿವರ:

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ತಮ್ಮ ಹೆಸರಿನಲ್ಲಿ ಒಟ್ಟು 14.77 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಈ ಪೈಕಿ 11.03 ಕೋಟಿ ಸ್ಥಿರಾಸ್ತಿ ಹಾಗೂ 3.74 ಕೋಟಿ ಚರಾಸ್ತಿ. ಇದರಲ್ಲಿ 60.23 ಲಕ್ಷ ಸಾಲ ಸೇರಿದೆ.

ಬಿ.ಎಸ್​ಸಿ ಪದವೀಧರೆ ಆಗಿರುವ ಮಂಗಳಾ ಅವರಿಗೆ 58 ವರ್ಷ. ಇವರು ಕೃಷಿ, ವ್ಯವಹಾರ ಹಾಗೂ ಸಮಾಜಸೇವೆ ತಮ್ಮ ವೃತ್ತಿ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದಾರೆ. ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ. ಪತಿ, ದಿವಂಗತ ಸುರೇಶ ಅಂಗಡಿ ಅವರ ಹೆಸರಿನಲ್ಲಿ 1.62 ಕೋಟಿ ರೂ. ಚರಾಸ್ತಿ ಮತ್ತು 14.32 ಕೋಟಿ ಸ್ಥಿರಾಸ್ತಿ ಸೇರಿ 15.94 ಕೋಟಿ ಆಸ್ತಿ ತೋರಿಸಿದ್ದಾರೆ. ಅವರ ಹೆಸರಲ್ಲಿ 6.95 ಕೋಟಿ ಸಾಲವಿದೆ. ಅಂಗಡಿ ಕುಟುಂಬ ನಡೆಸುವ ಕಂಪನಿ ಹಾಗೂ ಟ್ರಸ್ಟ್ ಹೆಸರಿನಲ್ಲಿ 11.05 ಕೋಟಿ ಚರಾಸ್ತಿ ಮತ್ತು 95.52 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ 106 ಕೋಟಿ ರೂ. ಆಗುತ್ತದೆ. ಜೊತೆಗೆ 91.98 ಕೋಟಿ ರೂ. ಸಾಲವಿದೆ. ಇವೆಲ್ಲಾ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನ, ವಿಜಯಲಕ್ಷ್ಮಿ ರಿಯಲ್ ಎಸ್ಟೇಟ್ ಪ್ರೈ.ಲಿ, ಅಂಗಡಿ ಶುಗರ್ಸ್‌ ಅಂಡ್ ಪ್ರೈ.ಲಿ ಗೆ ಸಂಬಂಧಿಸಿದ್ದಾಗಿದೆ.

ಚರಾಸ್ತಿ: ಮಂಗಲ ಅವರು ತಮ್ಮ ಕೈಯಲ್ಲಿ 81.35 ಲಕ್ಷ ರೂ. ಇರುವುದಾಗಿ ತಿಳಿಸಿದ್ದು, ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ 37.62 ಲಕ್ಷ, ಷೇರು, ಮ್ಯೂಚುವಲ್‌ ಫಂಡ್, ಬಾಂಡ್‌ಗಳಲ್ಲಿ 42.84 ಲಕ್ಷ ಮತ್ತು ವಿವಿಧ ಉಳಿತಾಯ ಖಾತೆಗಳಲ್ಲಿ 16.48 ಲಕ್ಷ ಹೂಡಿಕೆ ಮಾಡಿದ್ದಾರೆ. ಅವರ ಹೆಸರಿನಲ್ಲಿ 64.06 ಲಕ್ಷ ಮೌಲ್ಯದ ವಿವಿಧ ವಾಹನಗಳು, 64 ಲಕ್ಷ ಮೌಲ್ಯದ ಆಭರಣಗಳು ಮತ್ತು 67.98 ಲಕ್ಷದ ಇತರ ಆಸ್ತಿಗಳಿವೆ.

ABOUT THE AUTHOR

...view details