ಕರ್ನಾಟಕ

karnataka

ETV Bharat / city

ಲೋಕ ಸಮರದಲ್ಲಿ ತಟಸ್ಥವಾಗಿ ಉಳಿಯಲು ರಮೇಶ್​​ ಜಾರಕಿಹೊಳಿ ನಿರ್ಧಾರ - ಬಿಜೆಪಿ ಅಭ್ಯರ್ಥಿ

ರಮೇಶ್​​ ಜಾರಕಿಹೊಳಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವೂ ಪ್ರಚಾರ ಮಾಡದೆ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸದೇ ತಟಸ್ಥವಾಗಿ ಉಳಿಯಲಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜಕೀಯದ ಮುಂದಿನ ನಿರ್ಧಾರ ಪ್ರಟಿಸುವುದಾಗಿ ಕಾರ್ಯಕರ್ತರ ಮುಂದೆ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿದೆ.

ರಮೇಶ ಜಾರಕಿಹೊಳಿ

By

Published : Apr 17, 2019, 1:17 PM IST

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಲು ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್​ ಜಾರಕಿಹೊಳಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಗೋಕಾಕ್​ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವೂ ಪ್ರಚಾರ ಮಾಡದೇ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸದೇ ತಟಸ್ಥವಾಗಿ ಉಳಿಯಲಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಮುಂದಿನ ನಿರ್ಧಾರ ಪ್ರಟಿಸುವುದಾಗಿ ಕಾರ್ಯಕರ್ತರ ಮುಂದೆ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ರಮೇಶ ಜಾರಕಿಹೊಳಿ

ರಮೇಶ್​​ ಜಾರಕಿಹೊಳಿ ಅವರ ಈ ದಿಢೀರ್ ನಡೆಯಿಂದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿನ್ನಡೆ ಆಗಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಜತೆಗೆ ರಮೇಶ್​ ಜಾರಕಿಹೊಳಿ ಅಂತರ ಕಾಯ್ದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಅವರು ಇತ್ತೀಚೆಗೆ ಗೋಕಾಕದಲ್ಲಿ ಸಭೆ ನಡೆಸಿದ್ದರು. ಚುನಾವಣೆಯಲ್ಲಿ ಗೋಕಾಕ್ ಉಸ್ತುವಾರಿಯನ್ನು ಉದ್ಯಮಿ ಲಖನ್ ಜಾರಕಿಹೊಳಿ ಅವರಿಗೆ ವಹಿಸಲಾಗಿತ್ತು. ಈ ಎಲ್ಲ ಬೆಳವಣಿಗೆ ಮಧ್ಯೆ ರಮೇಶ್​ ಜಾರಕಿಹೊಳಿ ಅವರು ಇಂದು ಬೆಂಬಲಿಗರ ಸಭೆ ನಡೆಸಿ ತಟಸ್ಥವಾಗಿ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿವೆ.

ABOUT THE AUTHOR

...view details