ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ವರ್ಚಸ್ಸಿಗೆ ಕಳಂಕ ತರುವ ಯತ್ನವನ್ನು ಕಿಡಿಗೇಡಿಗಳು ಮಾಡಿದ್ದಾರೆ. ಖಾಸಗಿ ವೆಬ್‌ಸೈಟ್‌ಗಳಲ್ಲಿ ಸತೀಶ್ ಜಾರಕಿಹೊಳಿ ಹೆಸರನ್ನು ದುರ್ಬಳಕೆ ಮಾಡಿ ಪೋಸ್ಟ್ ಮಾಡಲಾಗಿದೆ ಎಂದು ಬೆಳಗಾವಿಯ ಸಿಇಎನ್ ಠಾಣೆಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿ ವಿಜಯ ತಳವಾರ ದೂರು ನೀಡಿದ್ದಾರೆ.
'ಕಿಡಿಗೇಡಿಗಳಿಂದ ಸತೀಶ್ ಜಾರಕಿಹೊಳಿ ಹೆಸರು ದುರ್ಬಳಕೆ ಯತ್ನ': ಪ್ರಕರಣ ದಾಖಲು
ಸಾಮಾಜಿಕ ಜಾಲತಾಣದಲ್ಲಿ ಸತೀಶ್ ಜಾರಕಿಹೊಳಿ ಹೆಸರನ್ನು ದುರ್ಬಳಕೆ ಮಾಡಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಬೆಳಗಾವಿಯ ಸಿಇಎನ್ ಠಾಣೆಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಯೊಬ್ಬರು ದೂರು ನೀಡಿದ್ದಾರೆ..
ಸತೀಶ್ ಜಾರಕಿಹೊಳಿ ಹೆಸರಿಗೆ ಕಳಂಕ ತರುವ ಯತ್ನ: ದೂರು ದಾಖಲು!
ಇದನ್ನೂ ಓದಿ:ಪಬ್ಲಿಕ್ ಟಾಯ್ಲೆಟ್ನಲ್ಲಿ ಮಹಿಳಾ ಪ್ರೊಫೆಸರ್ ಫೋನ್ ನಂಬರ್ ಬರೆದು ವಿಕೃತಿ : ಖಾಸಗಿ ಕಾಲೇಜಿನ ಮೂವರ ಸೆರೆ
ಸತೀಶ್ ಜಾರಕಿಹೊಳಿ ರಾಜಕೀಯದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ, ಕ್ರೀಡೆಗೆ ಆದ್ಯತೆ ನೀಡುವ ಜೊತೆಗೆ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ರಾಜಕಾರಣಕ್ಕೆ ಸಮಾನವಾಗಿ ಉದ್ಯಮ ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ. ಕಿಡಿಗೇಡಿಗಳು ಅವರ ಹೆಸರಿಗೆ ಕಳಂಕ ತರುವ ಯತ್ನ ಮಾಡುತ್ತಿದ್ದು, ಕ್ರಮಕ್ಕೆ ದೂರಿನಲ್ಲಿ ಆಗ್ರಹಿಸಿದ್ದಾರೆ.