ಕರ್ನಾಟಕ

karnataka

ETV Bharat / city

ಕುಡಿದು ವಾಹನ ಚಾಲನೆ.. ಬೆಳಗಾವಿ ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ - ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ

ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿಕೊಂಡು ಬಂದ ಚಾಲಕನೊಬ್ಬ ನಿಯಂತ್ರಣ ತಪ್ಪಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಯ ಕಟ್ಟೆಗೆ ಡಿಕ್ಕಿ ಹೊಡೆದಿದ್ದು, ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ.

Chennamma Statue
ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ

By

Published : Aug 17, 2022, 11:24 AM IST

ಬೆಳಗಾವಿ: ಕುಡಿದ ನಶೆಯಲ್ಲಿ ಲಾರಿ ಚಾಲಕನೊಬ್ಬ ನಿಯಂತ್ರಣ ತಪ್ಪಿ ನಗರದ ಹೃದಯ ಭಾಗದಲ್ಲಿರುವ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ತಡರಾತ್ರಿ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಚೆನ್ನಮ್ಮ ಮೂರ್ತಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ನಗರದ ಭೀಮ್ಸ್ ಆಸ್ಪತ್ರೆ ಬಳಿಯಿರುವ ಚೆನ್ನಮ್ಮ ವೃತ್ತದಲ್ಲಿ ಅಪಘಾತ ಸಂಭವಿಸಿದೆ. ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿಕೊಂಡು ಬಂದ ಚಾಲಕ ನಿಯಂತ್ರಣ ತಪ್ಪಿ ಚೆನ್ನಮ್ಮನ ಪ್ರತಿಮೆಗೆ ಡಿಕ್ಕಿ ಹೊಡೆದಿದ್ದಾನೆ. ಪುತ್ಥಳಿಯ ಸುತ್ತಲೂ ಕಬ್ಬಿಣದ ಸರಳು ಹಾಕಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ.

ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ

ಘಟನೆಯಿಂದ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಕೇವಲ 500 ರೂಗಾಗಿ ಸ್ನೇಹಿತನ ಶಿರಚ್ಛೇದ: ರುಂಡದೊಂದಿಗೆ ಠಾಣೆಗೆ ಬಂದ ವ್ಯಕ್ತಿ

ABOUT THE AUTHOR

...view details