ಕರ್ನಾಟಕ

karnataka

ETV Bharat / city

Council Election Counting: ಪರಿಷತ್​ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ - ಎಂಎಲ್​ಸಿ ಎಲೆಕ್ಷನ್​ ಕೌಂಟಿಂಗ್

ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ‌.

karnataka legislative council election vote counting begins
ಪರಿಷತ್​ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ

By

Published : Dec 14, 2021, 8:44 AM IST

ಬೆಳಗಾವಿ/ಮೈಸೂರು/ವಿಜಯಪುರ:ಡಿ.10ರಂದು ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆ 8ರಿಂದ ಆರಂಭವಾಗಿದೆ‌.

ಚಿಕ್ಕೋಡಿ:

ಡಿ.10ರಂದು ಬೆಳಗಾವಿಯಲ್ಲಿ ದ್ವಿ ಸದಸ್ಯ ಸ್ಥಾನಕ್ಕೆ ಶೇ.99.97 ರಷ್ಟು ಮತದಾನವಾಗಿತ್ತು. ಒಟ್ಟು 8,849 ಮತದಾರರ ಪೈಕಿ 8,846 ಜನರಿಂದ ಮತದಾನವಾಗಿತ್ತು. ಅಥಣಿ, ರಾಮದುರ್ಗ, ಬೆಳಗಾವಿ ತಾಲೂಕಿನಲ್ಲಿ ತಲಾ ಒಬ್ಬರು ಮತದಾರರಿಂದ ಹಕ್ಕು ಚಲಾವಣೆ ಆಗಿರಲಿಲ್ಲ. ಉಳಿದ 13 ತಾಲೂಕುಗಳಲ್ಲೂ ಶೇ.100ರಷ್ಟು ಮತದಾನ ನಡೆದಿತ್ತು. ಇಂದು ಎರಡು ಕೊಠಡಿಯಲ್ಲಿ 14 ಟೇಬಲ್​ಗಳಲ್ಲಿ ಒಟ್ಟು 37 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನ 12 ವೇಳೆಗೆ ಮೊದಲ ಪ್ರಾಶಸ್ತ್ಯದ ಮತದಾನದ ಫಲಿತಾಂಶ ಹೊರಬೀಳಲಿದೆ. ಸಂಜೆ 4 ಗಂಟೆ ವೇಳೆ ಎರಡನೇ ಪ್ರಾಶಸ್ತ್ಯ ಫಲಿತಾಂಶ ಬರಲಿದ್ದು ಮತ ಎಣಿಕೆ ಕೇಂದ್ರ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ‌.

ಪರಿಷತ್​ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ

ಬೆಳಗಾವಿಯಲ್ಲಿ ದ್ವಿಸದಸ್ಯ ಸ್ಥಾನಕ್ಕೆ ನಡೆದಿದ್ದ ಪರಿಷತ್ ಚುನಾವಣೆ ತೀವ್ರ ಪ್ರತಿಷ್ಠೆಯ ಹೋರಾಟವಾಗಿತ್ತು. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ‌ಕಾಂಗ್ರೆಸ್​​ನಿಂದ ಲಕ್ಷ್ಮಿ ಹೆಬ್ಬಾಳ್ಕರ್​ ಸಹೋದರ ಚೆನ್ನರಾಜ ಹಟ್ಟಿಹೋಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ‌ ಕಣಕ್ಕೆ ಇಳಿದಿದ್ದರು.

ಇದನ್ನೂ ಓದಿ:ಕೇವಲ ರಾಜಕೀಯ ನಾಯಕರ ಹಿಂಬಾಲಕರಿಗೆ ಬೆಳೆ ಪರಿಹಾರ ನೀಡಲಾಗಿದೆ: ರೈತರ ಆರೋಪ

ಚಿಕ್ಕೋಡಿ ಆರ್​ಡಿ ಪಿಯು ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು. ಮತಗಟ್ಟೆ ಸಂಖ್ಯೆ 1 ರಿಂದ 2,62ರವರೆಗಿನ ಮತಪೆಟ್ಟಿಗೆಗಳು ಇರುವ ಸ್ಟ್ರಾಂಗ್ ರೂಮ್​​ ಹಾಗೂ ಮತಗಟ್ಟೆ ಸಂಖ್ಯೆ 263ರಿಂದ 511ರ ಮತಪೆಟ್ಟಿಗೆಗಳು ಇರುವ ಎರಡನೇ ಸ್ಟ್ರಾಂಗ್ ರೂಮ್ ಅನ್ನು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಸಮ್ಮುಖದಲ್ಲಿ ತೆರೆಯಲಾಯಿತು‌. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಇತರ ಅಭ್ಯರ್ಥಿಗಳ ಏಜೆಂಟರು ಉಪಸ್ಥಿತರಿದ್ದರು.

ಮೈಸೂರು:

ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮತ ಎಣಿಕೆ ಹಿನ್ನಲೆ ಮೈಸೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ಓಪನ್‌ ಮಾಡಲಾಯಿತು‌. ಮೈಸೂರು ಡಿಸಿ ಡಾ. ಬಗಾದಿ ಗೌತಮ್, ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನೇತೃತ್ವದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿರುವ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಮ್ ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ಚುನಾವಣೆ ಅಭ್ಯರ್ಥಿಗಳು ಇದ್ದರು.

ವಿಜಯಪುರ:

ನಗರದ ದರಬಾರ್​ ಹೈಸ್ಕೂಲ್​ನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಚುನಾವಣಾಧಿಕಾರಿಗಳು ಸ್ಟ್ರಾಂಗ್​ ರೂಮ್​ ಓಪನ್​ ಮಾಡಿದ್ದಾರೆ. ಎರಡು ಕೊಠಡಿಗಳಲ್ಲಿ ಮತ ಎಣಿಕೆಗೆ ಒಟ್ಟು 14 ಟೇಬಲ್​​ಗಳನ್ನು ನಿಯೋಜನೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 7 ಟೇಬಲ್ ಹಾಕಲಾಗಿದೆ. ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

ABOUT THE AUTHOR

...view details