ಕರ್ನಾಟಕ

karnataka

ETV Bharat / city

ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ: ಗಡಿಭಾಗದಲ್ಲಿ ಅಂತಾರಾಜ್ಯ ವಾಹನ ತಪಾಸಣೆ

ಕೋವಿಡ್​ ನಿಯಂತ್ರಣ ನಿಟ್ಟಿನಲ್ಲಿ ಮಹಾರಾಷ್ಟ್ರ-ಬೆಳಗಾವಿ ಗಡಿಪ್ರದೇಶದಲ್ಲಿ ವಾಹನಗಳನ್ನು ತಡೆದು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಆರ್​ಟಿ-ಪಿಸಿಆರ್​ ನೆಗೆಟಿವ್ ವರದಿ ಹೊಂದಿದವರಿಗಷ್ಟೇ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದೆ.

Inspection at the Belagavi border to control corona
ಬೆಳಗಾವಿ ಗಡಿಭಾಗದಲ್ಲಿ ತೀವ್ರ ತಪಾಸಣೆ

By

Published : Jan 6, 2022, 3:24 PM IST

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳಗೊಂಡಿದ್ದು ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಇದೆ. ಪೊಲೀಸರು ಪ್ರತಿ ವಾಹನವನ್ನೂ ತಪಾಸಣೆಗೆ ಒಳಪಡಿಸಿದ ನಂತರವೇ ರಾಜ್ಯ ಪ್ರವೇಶಿಸಲು ಅನುವು ಮಾಡಿಕೊಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ, ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಚೆಕ್​ಪೋಸ್ಟ್​ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.


ಮಹಾರಾಷ್ಟ್ರ, ಗೋವಾದಿಂದ ಆಗಮಿಸುವ ಪ್ರತಿಯೋರ್ವ ಪ್ರಯಾಣಿಕರಿಗೆ ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದುಕೊಂಡಿದ್ದರೂ ಕೂಡ ಆರ್​ಟಿ-ಪಿಸಿಆರ್​ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ನೆಗೆಟಿವ್ ವರದಿ ಇಲ್ಲದವರನ್ನು ವಾಪಸ್ ಕಳುಹಿಸಲಾಗುತ್ತಿದೆ‌.

ಇತ್ತ ಬೆಳಗಾವಿ ತಾಲೂಕಿನ ಕುದ್ರೇಮನಿ ಗ್ರಾಮಕ್ಕೆ ತೆರಳಲು ಕರ್ನಾಟಕ-ಮಹಾರಾಷ್ಟ್ರ ಗಡಿದಾಟಿ ಹೋಗುವ ಅವಶ್ಯಕತೆ ಇದೆ. ಹೀಗಾಗಿ ಕುದ್ರೇಮನಿ ಗ್ರಾಮಸ್ಥರ ಐಡಿ ಕಾರ್ಡ್​ಗಳನ್ನು ಪರಿಶೀಲನೆ‌ ಮಾಡಿ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ:ಎಂಇಎಸ್ ವಿರುದ್ಧ ಶಾಸಕಿ ಅಂಜಲಿ‌ ನಿಂಬಾಳ್ಕರ್ ವಾಗ್ದಾಳಿ: ವಿಡಿಯೋ ವೈರಲ್

ABOUT THE AUTHOR

...view details