ಚಿಕ್ಕೋಡಿ: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜವನ್ನು ಬದಲಾವಣೆ ಮಾಡಬೇಕಿದ್ದ ಶಿಕ್ಷಕರೊಬ್ಬರು ಏನೂ ಅರಿಯದ ಮುಗ್ಧ ಮಕ್ಕಳೊಂದಿಗೆ ಜಾತೀಯತೆ ಮಾಡುತ್ತಿದ್ದಾರೆ. ಅಂತಹವರನ್ನು ವರ್ಗಾವಣೆ ಮಾಡುವ ಮೂಲಕ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಒತ್ತಾಯಿಸಿದ ಪೋಷಕರು, ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಲಿಗೆ ಬಿದ್ದು ತಮ್ಮ ಅಸಮಾಧಾನ ಹೊರ ಹಾಕಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನುಪಮಾ ಎಂ ಟಿ ಎಂಬುವರ ವಿರುದ್ಧ ಮಕ್ಕಳೊಂದಿಗೆ ಜಾತಿ ತಾರತಮ್ಯ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಪೋಷಕರು ಹೇಳುವ ಪ್ರಕಾರ, ಶಿಕ್ಷಕಿ ಅನುಪಮಾ ನಮ್ಮ ಗ್ರಾಮದ ಶಾಲೆಗೆ ಬಂದಾಗಿನಿಂದಲೂ ದಲಿತ ಮಕ್ಕಳಿಗೆ ಜಾತೀಯತೆಯ ಬೀಜ ಬಿತ್ತುತ್ತಿರೋದ್ದಲ್ಲದೇ, ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ.