ಬೆಳಗಾವಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪುತ್ರಿಯ ಆರತಕ್ಷತೆಯಲ್ಲಿ ಭಾಗವಹಿಸಲು ಬಂದಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿರುವ ತಿನಿಸುಕಟ್ಟೆಗೆ ಭೇಟಿ ನೀಡಿ, ದೇಸಿ ಖಾದ್ಯಗಳನ್ನು ಸವಿದರು.
ಬೆಳಗಾವಿಯಲ್ಲಿ ದೇಸಿ ಖಾದ್ಯ ಸವಿದು ಖುಷಿಪಟ್ಟ ಗೋವಾ ಸಿಎಂ ಸಾವಂತ್ - ಪ್ರಮೋದ್ ಸಾವಂತ್
ಬೆಳಗಾವಿಗೆ ಭೇಟಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇಲ್ಲಿನ ತಿನಿಸು ಕಟ್ಟೆಯಲ್ಲಿನ ದೇಸಿ ಖಾದ್ಯ ಸವಿದರು.
ಬೆಳಗಾವಿಯ ತಿನಿಸು ಕಟ್ಟೆಗೆ ಗೋವಾ ಸಿಎಂ ಭೇಟಿ; ದೇಸಿ ಖಾದ್ಯಕ್ಕೆ ಸಾಂವತ್ ಫಿದಾ!
ಶಾಸಕ ಅಭಯ ಪಾಟೀಲ ಬಳಿ ದೇಸಿ ತಿನಿಸುಗಳ ಮಾಹಿತಿ ಪಡೆದ ಸಾವಂತ್, ಗೋವಾದಲ್ಲೂ ಬೆಳಗಾವಿ ಮಾದರಿಯ ತಿನಿಸು ಕಟ್ಟೆ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದ ಬಳಿಕ, ಮಲಬಾರ್ ಗೋಲ್ಡ್ ಮಳಿಗೆಗೆ ಭೇಟಿ ನೀಡಿದರು. ಇದಾದ ಬಳಿಕ ಕೆಲಹೊತ್ತು ಬೆಳಗಾವಿಯಲ್ಲಿದ್ದು, ರಸ್ತೆ ಮಾರ್ಗವಾಗಿ ಗೋವಾಗೆ ಮರಳಿದರು.
ಇದಕ್ಕೂ ಮೊದಲು ಸಾವಂತ್ ಅವರನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಸ್ವಾಗತಿಸಿದರು.