ಕರ್ನಾಟಕ

karnataka

ETV Bharat / city

ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ನನ್ನ ವಿರೋಧವಿದೆ: ಸಿ.ಟಿ ರವಿ - ಪಣಜಿಯಲ್ಲಿ ಸಿಟಿ ರವಿ

ಕೋವಿಡ್ ಮೂರನೇ ಅಲೆ ಎಫೆಕ್ಟ್ ಬಹಳ ಕಡಿಮೆ ಇದೆ. ಎಚ್ಚರಿಕೆ ಅಗತ್ಯ. ಆದ್ರೆ ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ನನ್ನ ವಿರೋಧವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿ.ಟಿ ರವಿ
ಸಿ.ಟಿ ರವಿ

By

Published : Jan 18, 2022, 10:41 AM IST

Updated : Jan 18, 2022, 12:01 PM IST

ಬೆಳಗಾವಿ: ಮೂರನೇ ಅಲೆ ಬಗ್ಗೆ ಜನರು ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಗೋವಾದ ಪಣಜಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ನನ್ನ ವಿರೋಧವಿದೆ. ಕರ್ನಾಟಕ ಅಷ್ಟೇ ಅಲ್ಲ ಮಹಾರಾಷ್ಟ್ರ, ದೆಹಲಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ದಿನೇದಿನೇ ಕೋವಿಡ್ ಜಾಸ್ತಿಯಾಗ್ತಿದೆ. ಸುದೈವವಶಾತ್ ಮೂರನೇ ಅಲೆಯಲ್ಲಿ ಪ್ರಾಣಾಪಾಯ ಕಡಿಮೆ ಇದೆ.

ಐಸಿಯು ವೆಂಟಿಲೇಟರ್​‌ಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಇದೆ. ವೇಗವಾಗಿ ಹಬ್ಬುತ್ತಿದೆ ಆದರೆ ಯಾವುದೇ ಪ್ರಾಣಾಪಾಯ ಮಾಡಿಲ್ಲ. ಹೀಗಾಗಿ ಬಹಳ ಆತಂಕ ಪಡುವ ಅಗತ್ಯವಿಲ್ಲ, ಆದರೆ ಎಚ್ಚರದಿಂದ ಇರಬೇಕು.

ಲಾಕ್‌ಡೌನ್‌‌, ಕರ್ಫ್ಯೂ ಹೇರುವುದಕ್ಕಿಂತ ಕೆಲವು ನಿಯಮ ಹಾಕಬೇಕು. ಜನರನ್ನು ಎಚ್ಚರ ವಹಿಸುವಂತೆ ನೋಡಿಕೊಂಡು ಕೋವಿಡ್ ನಿಯಂತ್ರಿಸಬಹುದು. ಮೂರನೇ ಅಲೆಯಲ್ಲಿ ಹಾನಿ ಪ್ರಮಾಣ ಕಡಿಮೆ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದರು.

ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ನನ್ನ ವಿರೋಧವಿದೆ: ಸಿ.ಟಿ ರವಿ

ಕೋವಿಡ್ ಮೂರನೇ ಅಲೆ ಎಫೆಕ್ಟ್ ಬಹಳ ಕಡಿಮೆ ಇದೆ. ಲಾಕ್‌ಡೌನ್‌ ಮಾಡಿ ಜೀವನ ಏಕೆ ಸಂಕಷ್ಟಕ್ಕೆ ದೂಡಬೇಕು? 3ನೇ ಅಲೆ ಕೇಸ್ ರೆಕಾರ್ಡ್ ತಗೆದು ನೋಡಿದಾಗ ಜೀವಕ್ಕೆ ಹಾನಿ ಪರ್ಸೆಂಟೇಜ್ ಕಡಿಮೆಯಿದೆ. ಹೀಗಿರುವಾಗ ಆತಂಕ ಪಡುವುದು ಏಕೆ. ಯಾರು ಎರಡು‌ ಡೋಸ್ ಲಸಿಕೆ ಪಡೆದಿದ್ದಾರೆ ಅವರಿಗೆ ಕಡಿಮೆ ಹಾನಿ ಆಗಿದೆ. ಯಾರಿಗೂ ಜೀವಹಾನಿ ಏನೂ ಆಗಿಲ್ಲ.

ಐಸಿಯುಗೆ ಹೋಗುವಂತಹ ಗಂಭೀರ ಸ್ಥಿತಿ ಬಂದಿಲ್ಲ. ಎರಡು ವರ್ಷ ಸಂಕಷ್ಟದಲ್ಲಿದ್ದು ಜೀವನ ಕಟ್ಟಿಕೊಂಡಿದ್ದಾರೆ. ಅವರನ್ನೇಕೆ ಸಂಕಷ್ಟಕ್ಕೆ ದೂಡಬೇಕು? ಪರಿಸ್ಥಿತಿ ಕಾದು ನೋಡಬೇಕು, ಕರ್ಫ್ಯೂ, ಲಾಕ್‌ಡೌನ್‌ ಹೇರಬಾರದು. ಇದು ನನ್ನ ಅಭಿಪ್ರಾಯ, ವೈದ್ಯರು ಅಭಿಪ್ರಾಯ ಇದೇ ರೀತಿಯಿದೆ. ವೇಗವಾಗಿ ಸ್ಪ್ರೆಡ್ ಆಗುತ್ತೆ ಆದರೆ ಹಾನಿ ಹೆಚ್ಚು ಮಾಡಲ್ಲ ಎಂದು ತಜ್ಞರು ಹೇಳಿದ್ದಾರೆ.

ಅನಗತ್ಯವಾಗಿ ಭಯಕ್ಕೆ ದೂಡುವ ಅವಶ್ಯಕತೆ ಇಲ್ಲ, ಆದ್ರೆ ಎಚ್ಚರ ವಹಿಸಬೇಕು. ಕಠಿಣ ನಿಯಮ ಹೇರಬೇಕು. ಕರ್ಫ್ಯೂ, ಲಾಕ್‌ಡೌನ್‌ ನಿಂದ ಜೀವನ ಕಟ್ಟಿಕೊಂಡವರನ್ನು ಮತ್ತಷ್ಟು ದುಸ್ತರಗೊಳಿಸುತ್ತದೆ. ಎಚ್ಚರ ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

(ಇದನ್ನೂ ಓದಿ: 18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಧನುಷ್!​)

Last Updated : Jan 18, 2022, 12:01 PM IST

ABOUT THE AUTHOR

...view details