ಅಥಣಿ:ರಾಜಕೀಯ ಜೀವನದಲ್ಲಿ ಸಿ.ಸಿ ಪಾಟೀಲ್ ಅವರು ನನಗೆ ಸ್ವಂತ ಸಹೋದರನಿಗಿಂತ ಹೆಚ್ಚು ಮಾರ್ಗದರ್ಶನ ಮಾಡಿದ್ದಾರೆ. ನನ್ನ ರಾಜಕೀಯ ಏರಿಳಿತದ ಪ್ರತಿಯೊಂದು ಹಂತದಲ್ಲೂ ನನ್ನ ಬೆನ್ನೆಲುಬಾಗಿದ್ದವರು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಈ ವೇಳೆ ಸಚಿವ ಸಿ.ಸಿ ಪಾಟೀಲ್ ಕಣ್ಣೀರು ಹಾಕಿದ ಪ್ರಸಂಗವೂ ಜರುಗಿತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಜರುಗಿದ ನಿಪ್ಪಾಣಿ ಕೊಟ್ಟಲಗಿ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮದ ಉದ್ದಕ್ಕೂ ಭಾವನಾತ್ಮಕ ಭಾಷಣ ಮಾಡುತ್ತಾ ತಮಗೂ ಸಿ.ಸಿ ಪಾಟೀಲ್ ಅವರಿಗೂ ಇರುವ ಸಂಬಂಧಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತಂದರು. ಈ ವೇಳೆ ಸಿ.ಸಿ ಪಾಟೀಲ್ ಭಾವುಕರಾದರು. ಅವರನ್ನು ನೋಡಿ ಸವದಿ ಕೂಡ ಕಣ್ಣೀರು ಹಾಕಿ ನೆರೆದ ಪ್ರೇಕ್ಷಕರನ್ನು ಭಾವಪರವಶವಾಗಿಸಿದರು.