ಕರ್ನಾಟಕ

karnataka

ETV Bharat / city

ಚಿಕ್ಕೋಡಿಯಲ್ಲಿ ಐಪಿಎಲ್​​ ಅನ್ನೇ ನಾಚಿಸುವ ಕ್ರಿಕೆಟಿಗರ ಹರಾಜು!

ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಯುವಕರು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದು, ಐಪಿಎಲ್ ಸ್ಟೈಲ್​ನಂತೆಯೇ ಆಟಗಾರರ ಹರಾಜು ಪ್ರಕ್ರಿಯೆ ನಡೆಸಿದ್ದಾರೆ.

IPL-like tournament taking place in chikodi
ಐಪಿಎಲ್ ಮಾದರಿಯಂತೇ ನಡೆಯುತ್ತೆ ಕ್ರಿಕೇಟಿಗರ ಹರಾಜು

By

Published : Jan 9, 2021, 2:41 PM IST

Updated : Jan 10, 2021, 8:18 AM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಯುವಕರು ಕೆಪಿಎಲ್(ಕುಲಗೋಡ ಪ್ರೀಮಿಯರ್ ಲೀಗ್) ಆಯೋಜನೆ ಮಾಡಿದ್ದು, ಈ ಟೂರ್ನಿಯನ್ನು ಐಪಿಎಲ್ ಮಾದರಿಯಲ್ಲೇ ನಡೆಸಲಿದ್ದಾರೆ.

ಕೆಪಿಎಲ್ ಹೆಸರಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಗ್ರಾಮದ ಬೆಸ್ಟ್ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕವೇ‌ ತಂಡಗಳು ಖರೀದಿಸಿವೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಾಗಿ ಹರಾಜು ಪ್ರಕ್ರಿಯೆಯ ಮೂಲಕ ಆಟಗಾರರನ್ನ ಕೊಂಡುಕೊಳ್ಳೋದು ಕಾಮನ್. ಅದರಂತೆಯೇ ಎಲ್​ಇಡಿ ಸ್ಕ್ರೀನ್, ತಂಡಕ್ಕೊಂದು ವಿಐಪಿ ಲೆವೆಲ್ ರೌಂಡ್ ಚೇರ್ ಸೇರಿದಂತೆ​ ಥೇಟ್ ಐಪಿಎಲ್ ಶೈಲಿಯಲ್ಲೇ ಹರಾಜು ಪ್ರಕ್ರಿಯೆ ನಡೆಸುತ್ತಾರೆ.

ಐಪಿಎಲ್ ಮಾದರಿಯಂತೇ ನಡೆಯುತ್ತೆ ಕ್ರಿಕೇಟಿಗರ ಹರಾಜು

​ಈ ಕುಲಗೋಡ ಪ್ರೀಮಿಯರ್ ಲೀಗ್ ಅಂದ್ರೆ ಯುವಕರಿಗೆ ಸಖತ್ ಕ್ರೇಜ್ ಇದೆ. ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಂಡ ಮಾಲೀಕರು ಇವರಿಗೆ ಹಣ ನೀಡಿದರೆ, ಒಂದು ರೂಪಾಯಿ ಮುಟ್ಟದೇ ಈ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾಗಿರುವ ಶ್ರೀರಾಮ ಸ್ಪೊರ್ಟ್ಸ್ ಕ್ಲಬ್​ಗೆ ನೀಡುತ್ತಾರೆ. ಈ ಹಣವನ್ನು ಆಯೋಜಕರು ಸಮಾಜ ಸೇವೆಗೆ ಬಳಸುತ್ತಾರಂತೆ. ಶೈಕ್ಷಣಿಕ ಕಾರ್ಯಾಗಾರ ಹಾಗೂ ಸೈನಿಕ ತರಬೇತಿ ಕೇಂದ್ರಗಳಿಗೆ ಈ ಹಣ ಮೀಸಲಿಡುತ್ತೇವೆ ಎಂದು ಹೇಳಿದ್ದಾರೆ.

Last Updated : Jan 10, 2021, 8:18 AM IST

ABOUT THE AUTHOR

...view details