ಬೆಳಗಾವಿ : ಎಂಇಎಸ್ ಅನ್ನು ಬೆಳಗಾವಿ ಜನರೇ ಬ್ಯಾನ್ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಎಂಇಎಸ್ ಬ್ಯಾನ್ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿರುವುದು.. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಳಗಾವಿ ಶಾಂತವಾಗಿದೆ. ಕನ್ನಡಿಗರು, ಮರಾಠಿಗರು ಅತ್ಯಂತ ಸೌಹಾರ್ದಯುತವಾಗಿದ್ದಾರೆ. ಸಣ್ಣ ಘಟನೆಗಳಿಂದಾಗಿ ಕನ್ನಡ ಪರ ಸಂಘಟನೆಗಳು ಇಂದು ಪ್ರತಿಭಟನೆಗೆ ಕರೆ ನೀಡಿವೆ.
ಶಾಂತಿಯುತವಾಗಿ ಪ್ರತಿಭಟಿಸಲಿ ಎಂದು ಮನವಿ ಮಾಡಿದರು. ಎಂಇಎಸ್ ಬ್ಯಾನ್ ಬಗ್ಗೆ ಚರ್ಚೆ ಮಾಡಬೇಕು. ಸಿಎಂ ಇದರ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ನಾನು ಸಂಪೂರ್ಣವಾಗಿ ಸದನದಲ್ಲಿ ಮಾಹಿತಿ ನೀಡುತ್ತೇನೆ ಎಂದರು.
ಇದನ್ನೂ ಓದಿ: ಮುಂದಿನ ಹೋರಾಟಕ್ಕೆ ತಂತ್ರ: ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ