ಕರ್ನಾಟಕ

karnataka

ETV Bharat / city

ಅಥಣಿ ದೂರದರ್ಶನ ಕೇಂದ್ರ ಘಟಕದ ಕಾರ್ಯ ಸ್ಥಗಿತ - Athani Television Center work shutdown

ಅಥಣಿ ದೂರದರ್ಶನದ ಕೇಂದ್ರ ಘಟಕ ಕಳೆದ ಡಿಸೆಂಬರ್ 31ರಿಂದ ತನ್ನ ಸೇವೆಯನ್ನು ನಿಲ್ಲಿಸಿದೆ.

Athani Television Center work shutdown
ಅಥಣಿ ದೂರದರ್ಶನ ಕೇಂದ್ರ ಘಟಕದ ಕಾರ್ಯ ಸ್ಥಗಿತ

By

Published : Jan 4, 2022, 1:27 PM IST

ಅಥಣಿ: ಸುದೀರ್ಘವಾಗಿ ಹಲವು ವರ್ಷಗಳ ಕಾಲ ಜನರಿಗೆ ಮನರಂಜನೆ, ಸಂಸ್ಕೃತಿ, ಸುದ್ದಿ ಹಾಗೂ ಜಗತ್ತಿನ ಆಗು ಹೋಗುಗಳ ಬಗ್ಗೆ ಹಲವು ವಿಷಯಗಳನ್ನು ಜನರಿಗೆ ತಲುಪಿಸಿದ ಅಥಣಿ ದೂರದರ್ಶನದ ಕೇಂದ್ರ ಘಟಕ ಕಳೆದ ಡಿಸೆಂಬರ್ 31ರಿಂದ ತನ್ನ ಸೇವೆ ನಿಲ್ಲಿಸಿದೆ.

ಅಥಣಿ ದೂರದರ್ಶನ ಕೇಂದ್ರ ಘಟಕದ ಕಾರ್ಯ ಸ್ಥಗಿತ

ಆಂಟೇನಾ ಸಿಗ್ನಲ್ ಮೂಲಕ​ ಸೇವೆಗಳನ್ನು ಪೂರೈಸಿದ ದೂರದರ್ಶನ ಕೇಂದ್ರ ಮುಚ್ಚಲಾಗಿದೆ. ಸದ್ಯ ಡಿಜಿಟಲ್ ಕ್ಷೇತ್ರದಲ್ಲಿರುವುದರಿಂದ ತನ್ನ ಹಳೇ ಕೇಂದ್ರ ಘಟಕಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಬಂದ್ ಮಾಡಿದ್ದು, ಅಥಣಿ ಘಟಕವನ್ನು ಕಳೆದ ಡಿಸೆಂಬರ್ 31ರಂದು ಸ್ಥಗಿತ ಮಾಡಲಾಗಿದೆ.

ಇದನ್ನೂ ಓದಿ:ಬಂಟ್ವಾಳ : ನೇಣು ಬಿಗಿದುಕೊಂಡು ಎಸ್​ಎಸ್​ಎಲ್​ಸಿ ಬಾಲಕ ಆತ್ಮಹತ್ಯೆ

ಕೊನೆ ಹಂತವಾಗಿ ಅಥಣಿ ಸೇರಿದಂತೆ ಗೋಕಾಕ್, ವಿಜಯಪುರ, ಮುಧೋಳ, ಮಹಾರಾಷ್ಟ್ರದ ಜತ್ತ, ಸಾಂಗ್ಲಿ, ದೂರದರ್ಶನ ಕೇಂದ್ರಗಳನ್ನು ಕಳೆದ ಡಿಸೆಂಬರ್ 31ರಂದು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಅಥಣಿಯಲ್ಲಿ ದೂರದರ್ಶನ ಕೇಂದ್ರ 1989ರಲ್ಲಿ ಪ್ರಾರಂಭವಾಗಿ 34 ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿ ತನ್ನ ಸೇವೆಯನ್ನು 2021ನೇ ವರ್ಷದ ಕಡೆಯಲ್ಲಿ ಬಂದ್ ಮಾಡಿದೆ. ಇದರಿಂದ ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಬೇಸರವಾಗಿದೆ..

ABOUT THE AUTHOR

...view details