- ಕರ್ನಾಟಕದ ಪ್ರಗತಿ ಕೇವಲ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ
- ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ
- ಕೇವಲ ಈ ಡಬಲ್ ಇಂಜಿನ್ ಸರ್ಕಾರ ಮಾತ್ರ ಪ್ರಗತಿ ನೀಡಲು ಸಾಧ್ಯ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
ಕರ್ನಾಟಕದ ಪ್ರಗತಿ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ - ಕೇಂದ್ರ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸ
17:23 January 17
ಕರ್ನಾಟಕದ ಪ್ರಗತಿ ಕೇವಲ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ
17:18 January 17
ನಿಮ್ಮ ಸರ್ಕಾರವಿದ್ದಾಗ ನೀವು ಕರ್ನಾಟಕಕ್ಕೆ ಏನು ಸಿಕ್ಕಿತು-ಶಾ
- ಭಾರತದ ಮೊದಲ ಟಾಯ್ ಕ್ಲಸ್ಟರ್ ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿದೆ
- ಕೊಪ್ಪಳದ ಆಟಿಕೆಗಳನ್ನು ನಮ್ಮ ದೇಶದ ಮಕ್ಕಳು ಆಡಲಿದ್ದಾರೆ
- ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ
- ನಿಮ್ಮ ಸರ್ಕಾರವಿದ್ದಾಗ ನೀವು ಕರ್ನಾಟಕಕ್ಕೆ ಏನು ಸಿಕ್ಕಿತು
- ಕಾಂಗ್ರೆಸ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನೆ
- ಸಮಾರಂಭದಲ್ಲಿ ಅಮಿತ್ ಶಾ ಮಾತು
17:15 January 17
5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದ್ದೇವೆ - ಶಾ
- ಆತ್ಮ ನಿರ್ಭರ ಭಾರತ ಯೋಜನೆಯನ್ನು ಮೋದಿ ಸರ್ಕಾರ ತಂದಿದೆ
- ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಬಳಸುವ ಸಂಕಲ್ಪ ಮಾಡಬೇಕು
- ಇದರಿಂದ ಭಾರತ ಆರ್ಥಿಕವಾಗಿ ಮೇಲೇಳಲಿದೆ
- ಆರ್ಥಿಕತೆಯಲ್ಲಿ ವಿಶ್ವದಲ್ಲಿ ನಂ.1 ಆಗಲಿದ್ದೇವೆ
- 5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದ್ದೇವೆ
- ಸಮಾರಂಭದಲ್ಲಿ ಅಮಿತ್ ಶಾ ಮಾತು
17:08 January 17
ಸಮಾರಂಭದಲ್ಲಿ ಅಮಿತ್ ಶಾ ಮಾತು
- ಪಂಡಿತ್ ನೆಹರೂ ಹಿಡಿದು ಮನಮೋಹನ್ ಸಿಂಗ್ ವರೆಗೂ ಕಾಶ್ಮೀರದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ
- ಯಾರೂ ಮಾಡದ ಐತಿಹಾಸಿಕ ನಿರ್ಣಯವನ್ನು ಮೋದಿ ಸರ್ಕಾರ ತೆಗೆದುಕೊಂಡಿತು
- ರಾಮ ಜನ್ಮಭೂಮಿ ಶಿಲಾನ್ಯಾಸ ನಮ್ಮ ಸರ್ಕಾರದ ಸಾಧನೆ
- ಕಾಂಗ್ರೆಸ್ ನಾಯಕರು, ಪ್ರತಿಪಕ್ಷಗಳು ಸಾಧ್ಯವಾದಷ್ಟು ವಿರೋಧಿಸಿದವು
- ಆದರೆ ಕೆಲವೇ ದಿನಗಳಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಲೆದೆ
- ಮೋದಿ ತ್ರಿವಳಿ ತಲಾಖ್ಗೆ ಕಿತ್ತೆಸೆದರು
- ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಪಾಕ್ಗೆ ತಕ್ಕ ಪ್ರತ್ಯುತ್ತರ
- ಸಮಾರಂಭದಲ್ಲಿ ಅಮಿತ್ ಶಾ ಮಾತು
17:02 January 17
ಬೆಳವಡಿ ಮಲ್ಲಮ್ಮನನ್ನು ನೆನೆದ ಅಮಿತ್ ಶಾ
- ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯ
- ಸೂರ್ಯ ನಾರಾಯಣ ನಮ್ಮ ದೇಶದ ರೈತರಿಗೆ ಉನ್ನತಿ, ಉಲ್ಲಾಸ ನೀಡಲಿ
- ಬೆಳವಡಿ ಮಲ್ಲಮ್ಮನನ್ನು ನೆನೆದ ಅಮಿತ್ ಶಾ
- ರಾಣಿ ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸ್ಮರಿಸಿದ ಅಮಿತ್ ಶಾ
- ಸಂಗೊಳ್ಳಿ ರಾಯಣ್ಣನ ಜನನ ಆ.15, ಮರಣ ಜ.26
- ರಾಯಣ್ಣನ ಜನನ, ಮರಣ ಎರಡೂ ದೇಶದ ಮಹತ್ವದ ದಿನಗಳಂದು ನಡೆದಿದೆ
16:56 January 17
ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
- ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
- ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಅಮಿತ್ ಶಾ
- ‘ಭಾರತ್ ಮಾತಾ ಕಿ ಜೈ’ ಘೋಷಣೆ ಮೂಲಕ ಮಾತು ಆರಂಭಿಸಿದ ಶಾ
16:54 January 17
ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಂಬಲಿಗರ ಜಯ - ಸಿಎಂ ಬಿಎಸ್ವೈ
- ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಂಬಲಿಗರ ಜಯ
- ಹಣ ಬಲ, ಹೆಂಡ ಹಂಚಿ ಕಾಂಗ್ರೆಸ್ ಗೆಲ್ಲುತ್ತಿತ್ತು
- ಆದರೆ ಈಗ ಅಂತಹ ಪರಿಸ್ಥಿತಿ ರಾಜ್ಯದಲ್ಲಿಲ್ಲ
- ಪಕ್ಷ ಸಂಘಟನೆಗೆ ನಾವೆಲ್ಲ ಶ್ರಮಿಸಬೇಕು
- ಲೋಕಸಭೆ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿತಯಾದರೂ ಅವರನ್ನು ಗೆಲ್ಲಿಸಬೇಕು
- ಈ ಮೂಲಕ ದಿ.ಸುರೇಶ್ ಅಂಗಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ
- ಸಂಘಟನೆಯನ್ನು ಬಲಪಡಿಸಲು ಅವಿರತ ಶ್ರಮಿಸಬೇಕು
- ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಭಾಷಣ
16:29 January 17
ಬಿಜೆಪಿ ಜನಸೇವಕ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
- ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶ
- ಬಿಜೆಪಿ ಜನಸೇವಕ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
- ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವರು ಭಾಗಿ
- ಬಿಜೆಪಿ ಕಾರ್ಯಕರ್ತರಿಂದ ಅಮಿತ್ ಶಾಗೆ ಅದ್ಧೂರಿ ಸ್ವಾಗತ
- ಅಮಿತ್ ಶಾಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ, ಕೇಸರಿ ಪೇಟ ತೊಡಿಸಿ ಸ್ವಾಗತ
16:02 January 17
ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್ ಶಾ ಭೇಟಿ
- ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್ ಶಾ ಭೇಟಿ
- ವಿಶ್ವೇಶ್ವರಯ್ಯ ನಗರದಲ್ಲಿರುವ ದಿ.ಸುರೇಶ್ ಅಂಗಡಿ ನಿವಾಸ
- ಕೊರೊನಾದಿಂದ ಮೃತಪಟ್ಟ ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ
- ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಕೇಂದ್ರ ಗೃಹ ಸಚಿವರಿಂದ ಸಾಂತ್ವನ
- ಅಮಿತ್ ಶಾ ಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್
- ಸುರೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅಮಿತ್ ಶಾ
- ಅಮಿತ್ ಶಾಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್
- ಅಮಿತ್ ಶಾ ಬರಮಾಡಿಕೊಂಡ ಸಚಿವ ಜಗದೀಶ್ ಶೆಟ್ಟರ್
- ಸುರೇಶ ಅಂಗಡಿ ಪತ್ನಿ ಮಂಗಲಾ, ಪುತ್ರಿ ಸ್ಪೂರ್ತಿ, ಶ್ರದ್ಧಾಗೆ ಸಾಂತ್ವನ
15:46 January 17
ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸದತ್ತ ಹೊರಟ ಅಮಿತ್ ಶಾ
- ಬೆಳಗಾವಿ ಸರ್ಕ್ಯೂಟ್ ಹೌಸ್ನಿಂದ ತೆರಳಿದ ಅಮಿತ್ ಶಾ
- ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸದತ್ತ ಹೊರಟ ಅಮಿತ್ ಶಾ
- ವಿಶ್ವೇಶ್ವರಯ್ಯ ನಗರದಲ್ಲಿರುವ ದಿ.ಸುರೇಶ್ ಅಂಗಡಿ ನಿವಾಸ
- ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್
15:39 January 17
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುತ್ತಿರುವ ರಾಜ್ಯ ಬಿಜೆಪಿ ನಾಯಕರು
- ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುತ್ತಿರುವ ರಾಜ್ಯ ಬಿಜೆಪಿ ನಾಯಕರು
- ಒಬ್ಬರ ಬಳಿಕ ಒಬ್ಬರಂತೆ ಹೋಗಿ ಅಮಿತ್ ಶಾ ಭೇಟಿ
- ಬೆಳಗಾವಿಯ ಸರ್ಕ್ಯೂಟ್ ಹೌಸ್ನಲ್ಲಿರುವ ಅಮಿತ್ ಶಾ
- ಅರವಿಂದ ಬೆಲ್ಲದ ಬೆನ್ನಲ್ಲೇ ಅಮಿತ್ ಶಾ ಭೇಟಿಯಾದ ಪ್ರಭಾಕರ ಕೋರೆ
- ಅಮಿತ್ ಶಾ ಭೇಟಿಗೆ ಕಾಯುತ್ತಿರುವ ಸಚಿವ ಉಮೇಶ್ ಕತ್ತಿ,
- ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ
15:28 January 17
ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ, ದೆಹಲಿಗೆ ಬರುವಂತೆ ಶಾ ಸೂಚನೆ
- ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ
- ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಶಾ ಭೇಟಿಯಾದ ಅರವಿಂದ ಬೆಲ್ಲದ
- ಅಮಿತ್ ಶಾ ಅವರಿಗೆ ಹಾರ ಹಾಕಿ, ಸನ್ಮಾನಿಸಿದ ಶಾಸಕ ಅರವಿಂದ ಬೆಲ್ಲದ
- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆಗೆ ಶಾ ಭೇಟಿಯಾದ ಬೆಲ್ಲದ
- ಸಂಪುಟ ವಿಸ್ತರಣೆ ವೇಳೆ ಕಡೆಗಣಿಸಿರುವ ಸಂಬಂಧ ಅಳಲು ಹೇಳಿಕೊಳ್ಳುತ್ತಿದ್ದಂತೆ ದೆಹಲಿಗೆ ಬರುವಂತೆ ಶಾ ಸೂಚನೆ
- ದೆಹಲಿಯಲ್ಲಿ ಸಮಯಾವಕಾಶ ನೀಡುತ್ತಿದ್ದಂತೆ ಖುಷಿಯಾದ ಅರವಿಂದ ಬೆಲ್ಲದ
- ಅಸಮಾಧಾನ ಶಾಸಕರ ಪ್ರತಿನಿಧಿಯಾಗಿ ಅಮಿತ್ ಶಾ ಭೇಟಿಯಾಗಿದ್ದ ಶಾಸಕ ಅರವಿಂದ್ ಬೆಲ್ಲದ
- ದೆಹಲಿಗೆ ಬನ್ನಿ ಮಾತಾಡೋಣ ಎಂದು ಭರವಸೆ ನೀಡಿದ ಅಮಿತ್ ಶಾ
15:02 January 17
ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಭೂರಿ ಭೋಜನ ಸವಿಯಲಿರುವ ಅಮಿತ್ ಶಾ
- ಬೆಳಗಾವಿಯ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ ಅಮಿತ್ ಶಾ
- ಕೇಸರಿ ಶಾಲು ಹೊದಿಸಿ ಅಮಿತ್ ಶಾಗೆ ಸ್ವಾಗತಿಸಿದ ಬಿಜೆಪಿ ನಾಯಕರು
- ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಭೋಜನ ಸವಿಯಲಿರುವ ಅಮಿತ್ ಶಾ
- ಉತ್ತರ ಕರ್ನಾಟಕಕ್ಕೆ ಬಂದರೂ ಗುಜರಾತ್ ಶೈಲಿಯ ಊಟ ಮಾಡಲಿರುವ ಕೇಂದ್ರ ಗೃಹ ಸಚಿವ
- ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಿದ್ಧಪಡಿಸಿರುವ ಗುಜರಾತ್ ಶೈಲಿಯ ಭೂರಿ ಭೋಜನ
- ಖಾಮನ್ ಡೋಕ್ಲಾ, ದಹಿ ವಡಾ, ಉಂದಿಯಾ ಸಬ್ಜಿ, ಕಡಲೆ ಕಾಳು ಪಲ್ಯ
- ಪನ್ನೀರ್ ಮಖ್ನಿ, ಆಲೂ ರಸವಾಲಾ, ಕಿಚಡಿ ಕಡಿ, ರೈಸ್ ದಾಲ್, ಫುಲ್ಕಾ
- ಪರೋಟಾ, ರಾಗಿ ರೊಟ್ಟಿ, ಹಪ್ಪಳ, ಉಪ್ಪಿನಕಾಯಿ, ಮೊಸರು ಸಲಾಡ್
- ಗುಜರಾತ್‌ನ ಉಂದಿಯಾ ಸಬ್ಜಿ ಮಿಕ್ಸ್ ವೆಜಿಟೆಬಲ್ ಬಾಜಿ ಊಟದ ವ್ಯವಸ್ಥೆ
- ಆಹಾರ ಗುಣಮಟ್ಟ ಪರಿಶೀಲನೆ ನಡೆಸಿರುವ ಆರೋಗ್ಯ ಇಲಾಖೆಯ ತಂಡ
- ಸರ್ಕ್ಯೂಟ್ ಹೌಸ್ನ ಕೊಠಡಿ ಸಂಖ್ಯೆ 1 ರಲ್ಲಿ ಅಮಿತ್ ಶಾ
- ಕೊಠಡಿ ಸಂಖ್ಯೆ 5 ರಲ್ಲಿ ಸಿಎಂ ಯಡಿಯೂರಪ್ಪ
- ಉಳಿದ ಸಚಿವರು ಮತ್ತು ಶಾಸಕರಿಗೆ ಕೊಠಡಿ ಸಂಖ್ಯೆ 2 ರಲ್ಲಿ ವ್ಯವಸ್ಥೆ
14:48 January 17
ಇಲ್ಲಿ ಅಸಮಾಧಾನದ ಬಗ್ಗೆ ಚರ್ಚೆ ಮಾಡಲ್ಲ - ಶಾಸಕ ಅರವಿಂದ ಬೆಲ್ಲದ
- ಇಲ್ಲಿ ಅಸಮಾಧಾನದ ಬಗ್ಗೆ ಚರ್ಚೆ ಮಾಡಲ್ಲ
- ಜನಸೇವಕ ಸಮಾರೋಪದಲ್ಲಿ ಪಾಲ್ಗೊಳ್ಳಲು ಬಂದಿದ್ದೇವೆ
- ದೆಹಲಿಗೆ ಹೋಗಿ ವರಿಷ್ಠರ ಗಮನಕ್ಕೆ ತರುತ್ತೇವೆ
- ಅಸಮಾಧಾನಿತ ಶಾಸಕರು ಈ ಬಗ್ಗೆ ಚರ್ಚೆ ಮಾಡಿದ್ದೇವೆ
- ಬೆಳಗಾವಿಯಲ್ಲಿ ಶಾಸಕ ಅರವಿಂದ ಬೆಲ್ಲದ ಹೇಳಿಕೆ
14:32 January 17
ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ಶಾಸಕರ ದೌಡು
- ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಆಗಮಿಸಲಿರುವ ಅಮಿತ್ ಶಾ
- ಬೆಳಗಾವಿ ಪ್ರವಾಸಿ ಮಂದಿರಕ್ಕೆ ಅತೃಪ್ತ ಶಾಸಕರ ದೌಡು
- ಅಮಿತ್ ಶಾ ಆಗಮನಕ್ಕೂ ಮುನ್ನವೇ ಬಂದ ಕೆಲ ಅತೃಪ್ತ ಶಾಸಕರು
- ಡಿಸಿಎಂಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ,
- ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿರಾದ ಜಗದೀಶ್ ಶೆಟ್ಟರ್, ಸಿಟಿ ರವಿ,
- ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ
- ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ನೂತನ ಸಚಿವ ಸಿ.ಪಿ ಯೋಗೇಶ್ವರ ಆಗಮನ
- ಅತೃಪ್ತ ಶಾಸಕರಾದ ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ಅನಿಲ್ ಬೆನಕೆ ಆಗಮನ
14:22 January 17
ಉದ್ಧಟತನ ತೋರಲು ಮುಂದಾದ ಎಂಇಎಸ್: ಬೆಳಗಾವಿಗೆ ಬರುತ್ತಿದ್ದ ಮಹಾರಾಷ್ಟ್ರ ಸಚಿವರನ್ನು ತಡೆದ ಪೊಲೀಸರು
- ಅಮಿತ್ ಶಾ ಬೆಳಗಾವಿ ಆಗಮನ ಹಿನ್ನೆಲೆ
- ಉದ್ಧಟತನ ತೋರಲು ಮುಂದಾದ ಎಂಇಎಸ್
- ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಹುತಾತ್ಮ ದಿನಾಚರಣೆಗೆ ಸಿದ್ಧತೆ
- ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಯಡ್ರಾಂಕರ್
- ಬೆಳಗಾವಿಗೆ ಬರುತ್ತಿದ್ದ ಸಚಿವ ರಾಜೇಂದ್ರ ಯಡ್ರಾಂಕರ್ನನ್ನು ತಡೆದ ಪೊಲೀಸರು
- ನಿಪ್ಪಾಣಿ ತಾಲೂಕಿನ ಕೊಗನೊಳಿ ರಾಷ್ಟ್ರೀಯ ಹೆದ್ದಾರಿ-4 ರ ಟೋಲ್‌ನಲ್ಲಿ ತಡೆಯೊಡ್ಡಿದ ಪೊಲೀಸರು
- ಸಚಿವರಿಗೆ ತಡೆಯೊಡ್ಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಂಇಎಸ್ ಕಾರ್ಯಕರ್ತರು
- ‘ಬೆಳಗಾವಿ ನಮ್ಮದು’ ಎಂದು ಘೋಷಣೆ ಕೂಗಿ ಉದ್ಧಟತನ ಮೆರೆದ ಶಿವಸೇನೆ ಕಾರ್ಯಕರ್ತರು
14:04 January 17
ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಅಮಿತ್ ಶಾ ಆಗಮನ
- ಬಾಗಲಕೋಟೆಯಿಂದ ಬೆಳಗಾವಿಗೆ ಮರಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
- ಅಮಿತ್ ಶಾಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್
- ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಅಮಿತ್ ಶಾ ಆಗಮನ
- ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲಿರುವ ಕೇಂದ್ರ ಗೃಹ ಸಚಿವ
13:23 January 17
ಮೋದಿ ಕನಸನ್ನ ನಿರಾಣಿ ನನಸಾಗಿಸಿದ್ದಾರೆ - ಅಮಿತ್ ಶಾ
- ಮೋದಿ ಕನಸನ್ನ ನಿರಾಣಿ ನನಸಾಗಿಸಿದ್ದಾರೆ
- ಎಥೆನಾಲ್ನಿಂದ ವಿದೇಶದಿಂದ ಇಂಧನ ಆಮದಿನಲ್ಲಿ ಇಳಿಕೆ
13:22 January 17
‘ಕೇಂದ್ರ ಜಾರಿಗೆ ತಂದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ’
- ರೈತರಿಗಾಗಿ ಮೋದಿ ಹಲವು ಯೋಜನೆ ಜಾರಿಗೆ ತಂದಿದೆ
- ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ
- ಸಾವಿರಕ್ಕೂ ಹೆಚ್ಚು ಮಂಡಿಗಳಲ್ಲಿ ಆನ್ಲೈನ್ ವ್ಯವಸ್ಥೆ
- ಕರ್ನಾಟಕದ ಸಿಎಂ ಯಡಿಯೂರಪ್ಪನವರಿಗೆ ಅಭಿನಂದನೆ
- ಕೇಂದ್ರ ಜಾರಿಗೆ ತಂದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ
13:19 January 17
ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡಿದ್ದೇವೆ - ಅಮಿತ್ ಶಾ
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ನಾವು ಜಾರಿಗೆ ತಂದೆವು
- ಈ ಯೋಜನೆ ಮೂಲಕ ರೈತರ ಖಾತೆಗೆ ಹಣ
- 9 ಕೋಟಿ ಜನ ಬ್ಯಾಂಕ್ ಖಾತೆಗ ಹಣ ಹಾಕಿದ್ದೇವೆ
- ಇದುವರೆಗೆ ಒಂದು ಲಕ್ಷ ಕೋಟಿಗೂ ಅಧಿಕ ಹಣ ಹಾಕಿದ್ದೇವೆ
- ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡಿದ್ದೇವೆ
13:13 January 17
ಎಥೆನಾಲ್ ಘಟಕಕ್ಕಿದ್ದ ಜಿಎಸ್ಟಿ ಕಡಿತಗೊಳಿಸಿದ್ದೇವೆ- ಅಮಿತ್ ಶಾ
- ರೈತರಿಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ ಅಮಿತ್ ಶಾ
- ಮೋದಿ ಪ್ರಧಾನಿಯಾಗಿರುವುದರಲ್ಲಿ ಕರ್ನಾಟಕ ಜನರ ಕೊಡುಗೆ ಅಪಾರ
- ಮೋದಿ ಪೂರ್ಣ ಬಹುಮತದಿಂದ ಆಡಳಿತ ನಡೆಸುತ್ತಿದ್ದಾರೆ
- ರಾಜ್ಯದ ಜನರು ಮೋದಿ ಜೋಳಿಗೆಗೆ ಮತಗಳನ್ನು ತುಂಬಿದ್ದಾರೆ
- ಎಥೆನಾಲ್ನಿಂದ ಇಂಧನ ಸಮಸ್ಯೆಗೆ ಪರಿಹಾರ ಸಿಗುತ್ತದೆ
- ಎಥೆನಾಲ್ ಘಟಕಕ್ಕಿದ್ದ ಜಿಎಸ್ಟಿ ಕಡಿತಗೊಳಿಸಿದ್ದೇವೆ
13:08 January 17
ಶಂಕುಸ್ಥಾಪನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
- ಶಂಕುಸ್ಥಾಪನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
- ಬಾಗಲಕೋಟೆ ಜಿಲ್ಲೆಯ ಭೂಮಿಗೆ ನಾನು ನಮಿಸುವೆ
- ಈ ಕ್ಷೇತ್ರ ಕೃಷಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ
- ಘಟಪ್ರಭಾ ನದಿಯ ನೀರಿನಿಂದ ಕೃಷಿಯಲ್ಲಿ ಹೆಸರುವಾಸಿ
13:02 January 17
ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮ
- ಸಮಾರೋಪ ಸಮಾವೇಶಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ
- ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮ
- ಸಮಾರೋಪಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ
- ನಗರದ ಫಿನಿಕ್ಸ್ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಿದ ಬಿಜೆಪಿ ನಾಯಕರು
- 2 ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನ ಮಾಡಿರುವ ಬಿಜೆಪಿ ನಾಯಕರು
12:53 January 17
ಗೃಹ ಸಚಿವ ಅಮಿತ್ ಶಾ ಜತೆ ಇಂದು ಪಕ್ಷದ ಸಮಾಲೋಚನೆ ಸಭೆ: ಡಿಸಿಎಂ ಸವದಿ
- ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಹಿನ್ನೆಲೆ
- ಗೃಹ ಸಚಿವ ಅಮಿತ್ ಶಾ ಜತೆ ಇಂದು ಪಕ್ಷದ ಸಮಾಲೋಚನೆ ಸಭೆ
- ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ
12:32 January 17
ಎಥೆನಾಲ್ ಘಟಕಕ್ಕೆ ಕೇಂದ್ರ ಗೃಹ ಸಚಿವರಿಂದ ಶಂಕುಸ್ಥಾಪನೆ
- ಎಥೆನಾಲ್ ಘಟಕಕ್ಕೆ ಕೇಂದ್ರ ಗೃಹ ಸಚಿವರಿಂದ ಶಂಕುಸ್ಥಾಪನೆ
- ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಗೆ ಅಮಿತ್ ಶಾ ಆಗಮನ
- ಇದೇ ವೇಳೆ ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಉದ್ಘಾಟನೆ
12:11 January 17
ಬಿಜೆಪಿ ಜನಸೇವಕ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ
- ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮನ
- ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ ಕೇಂದ್ರ ಗೃಹ ಸಚಿವ
- ಸಿಎಂ ಯಡಿಯೂರಪ್ಪ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
- ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿಯಿಂದ ಸ್ವಾಗತ
- ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ,
- ಶಾಸಕ ಅಭಯ್ ಪಾಟೀಲ, ಮಹೇಶ್ ಕುಮಟಳ್ಳಿ, ಅನಿಲ್ ಬೆನಕೆ,
- ಮಹಾದೇವಪ್ಪ ಯಾದವಾಡ ಮತ್ತಿತರರು ಉಪಸ್ಥೀತಿ
- ವಿಶೇಷ ವಿಮಾನದಲ್ಲಿ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ
- ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳಿದ ಅಮಿತ್ ಶಾ