ಕರ್ನಾಟಕ

karnataka

By

Published : Oct 18, 2022, 3:16 PM IST

Updated : Oct 18, 2022, 3:46 PM IST

ETV Bharat / business

ವಿನಯದಿಂದ ಚಹಾ ಕೇಳಿದ್ರೆ ರಿಯಾಯಿತಿ.. ಪ್ರೆಸ್ಟನ್‌ ಕೆಫೆ ಮೆನು ವೈರಲ್​

ಯುಕೆಯ ಪ್ರೆಸ್ಟನ್‌ನ 'ದೇಸಿ ಚಾಯ್' ಕೆಫೆ ಒಂದು ಮೆನು ಸಿದ್ಧಪಡಿಸಿದೆ. ಇಲ್ಲಿ ಚಹಾ ಸವಿಯಲು ಆರ್ಡರ್ ಮಾಡುವ ವೇಳೆ ವಿನಯದಿಂದ ವರ್ತಿಸಿದರೆ ಸಾಕು.. ನಿಮಗೆ ಬಿಲ್‌ನಲ್ಲಿ ರಿಯಾಯಿತಿ ಖಚಿತ. ಹೀಗಾಗಿ ಈ ಕೆಫೆಯ ಮೆನು ಕಾರ್ಡ್‌ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಭಾರಿ ವೈರಲ್ ಆಗಿದೆ.

UK cafe charges money
ಯುಕೆಯ ಪ್ರೆಸ್ಟನ್‌ನ ಕೆಫೆ ಮೆನು

ಲಂಡನ್ :ದಯೆ ತೋರಿದರೆ ಖಂಡಿತ ಲಾಭ ಸಿಗಲಿದೆ. ದಯವೇ ಧರ್ಮದ ಮೂಲವಯ್ಯ ಎಂಬ ಜಗಜ್ಯೋತಿ ಬಸವಣ್ಣನವರ ಲೋಕೋಕ್ತಿಯೂ ಈ ಯುಕೆ ಕೆಫೆಯಲ್ಲಿ ನಿಜ ಅನಿಸುತ್ತಿದೆ. ಯುಕೆಯ ಪ್ರೆಸ್ಟನ್‌ನ 'ದೇಸಿ ಚಾಯ್' ಕೆಫೆ ಒಂದು ಮೆನು ಸಿದ್ಧಪಡಿಸಿದೆ. ಈ ಕೆಫೆಯಲ್ಲಿ ಚಹಾ ಸವಿಯಲು ಆರ್ಡರ್ ಮಾಡುವ ವೇಳೆ ಗ್ರಾಹಕರು ವಿನಯದಿಂದ ವರ್ತಿಸಿದರೆ ಸಾಕು, ನಿಮಗೆ ಬಿಲ್‌ನಲ್ಲಿ ರಿಯಾಯಿತಿ ಖಚಿತ. ಹೀಗಾಗಿ ಈ ಕೆಫೆಯ ಮೆನು ಕಾರ್ಡ್‌ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಭಾರಿ ವೈರಲ್ ಆಗುತ್ತಿದೆ.

'ವಿನಯತೆ(kindness) ಖಂಡಿತ ನಿಮಗೆ ದಾರಿ ಮಾಡಿಕೊಡುತ್ತದೆ’ ಎಂದು ಯುಕೆ ಪ್ರೆಸ್ಟನನ್ ಕೆಫೆ ತನ್ನ ಫೋಟೋ ಶೀರ್ಷಿಕೆಯಲ್ಲಿ ಬರೆದುಕೊಂಡಿದೆ. ಹೀಗಾಗಿ ಈ ಕೆಫೆಯ ಕೊಡುಗೆಗೆ ಅಂತರ್ಜಾಲದಲ್ಲಿ ವ್ಯಾಪಕ ಪ್ರಶಂಸೆ ಸಿಕ್ಕಿದ್ದು, ಹಲವರು ಶ್ಲಾಘಿಸಿದ್ದಾರೆ.

ಪ್ರೆಸ್ಟನ್‌ನ 'ಟೀ ಸ್ಟಾಪ್'ಗೆ ಆರ್ಡರ್ ಮಾಡುವ ವೇಳೆ ಯಾರಾದರೂ ಅಸಭ್ಯವಾಗಿ ವರ್ತನೆ ತೋರಿದರೆ ಅಂಥವರಿಗೆ ಹೆಚ್ಚು ಶುಲ್ಕದ ಹೊರೆ ಬಿಸಿ ತಟ್ಟುವುದಂತೂ ಸತ್ಯ. ಆದರೆ ನಯವಾಗಿ ಆರ್ಡರ್ ಪಡೆಯುವ ಗ್ರಾಹಕರಿಗೆ ರಿಯಾಯಿತಿ ಅಷ್ಟೇ ಖುಷಿಯಾಗಿ ನೀಡುತ್ತದೆ. ಗ್ರಾಹಕರು ಚಹಾ ಹೇಗೆ ಆರ್ಡರ್ ಮಾಡ್ತಾರೆ ಎಂಬುದರ ಮೇಲೆ ಬೆಲೆಯನ್ನು ಇಲ್ಲಿ ನಿರ್ಧರಿಸಲಾಗುತ್ತಿದೆ. ಯುಕೆಯ ಪ್ರೆಸ್ಟನ್‌ನ ಕೆಫೆ ಈ ಹೊಸ ‘ಚಿಂತನೆ’ ತನ್ನ ಮೆನುವಿನಲ್ಲಿ ‘ದಯೆ’ ಪ್ರಚಾರಕ್ಕಾಗಿ ಬಳಸಿಕೊಂಡಿದೆ. ಆದರೆ ಗ್ರಾಹಕರು, ದಯೆಯಿಂದ ವರ್ತಿಸಿದರೆ ಹೆಚ್ಚು ಲಾಭ ಸಿಗುವುದು ನಿಶ್ಚಿತ.

ಇನ್‌ಸ್ಟಾಗ್ರಾಮ್ ದಲ್ಲಿ 'ಸೌಜನ್ಯಕ್ಕೆ ಏನೂ ವೆಚ್ಚವಾಗುವುದಿಲ್ಲ! ಇಷ್ಟ ಪಡುತ್ತೇನೆ!' ಎಂದು ಒಬ್ಬರು ಬರೆದುಕೊಂಡ್ರೆ, ಇನ್ನೊಬ್ಬ ಬಳಕೆದಾರರು ಇದೊಂದು ಜಗತ್ತಿಗೆ 'ಉತ್ತಮ ಸಂದೇಶ!' ಎಂದು ತಿಳಿಸಿದ್ದಾರೆ. ಆದರೆ ಹೋಟೆಲ್ ನ ಮಾಲೀಕರು, ಸಾಮಾನ್ಯವಾಗಿ ಹೋಟೆಲ್‌ಗೆ ಬರುವ ಗ್ರಾಹಕರು ಆರಂಭದಲ್ಲಿ ತುಂಬಾ ನಯವಾಗಿ ಆರ್ಡರ್ ಕೇಳ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಅವರ ನಡವಳಿಕೆ ಬದಲಾಗಲಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನು ಓದಿ..ಹಸಿರು ಪಟಾಕಿಗಷ್ಟೇ ಅವಕಾಶ: ಆದೇಶ ಮೀರಿದ್ರೆ ಮುಲಾಜಿಲ್ಲದೆ ಜಪ್ತಿ

Last Updated : Oct 18, 2022, 3:46 PM IST

ABOUT THE AUTHOR

...view details