ಸ್ಯಾನ್ ಫ್ರಾನ್ಸಿಸ್ಕೋ:ಟೆಸ್ಲಾದ ಫುಲ್ ಸೆಲ್ಫ್ ಡ್ರೈವಿಂಗ್(ಎಫ್‌ಎಸ್‌ಡಿ) ಬೀಟಾ ಈಗ ಉತ್ತರ ಅಮೆರಿಕದಲ್ಲಿ ಯಾರಿಗೆ ಬೇಕಾದ್ರೂ ಸಿಗಲಿದೆ ಎಂದು ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಗುರುವಾರ ಹೇಳಿದ್ದಾರೆ.
ಟೆಸ್ಲಾ ಫುಲ್ ಸೆಲ್ಫ್ ಡ್ರೈವಿಂಗ್ ಬೀಟಾ ಈಗ ಉತ್ತರ ಅಮೆರಿಕದಲ್ಲಿ ಯಾರಿಗಾದರೂ ಲಭ್ಯವಾಗಲಿದೆ. ಕಾರಿನಲ್ಲಿರುವ ಸ್ಕ್ರೀನ್ ಮೂಲಕ ಇದನ್ನು ಪಡೆಯಬಹುದಾಗಿದೆ. ನೀವು ಒಂದು ವೇಳೆ ಈ ಆಯ್ಕೆಯನ್ನು ಖರೀದಿಸಿದ್ರೆ, ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ ಟೆಸ್ಲಾ ಆಟೋಪೈಲಟ್/AI ತಂಡಕ್ಕೆ ಅಭಿನಂದನೆಗಳು ಎಂದು ಟೆಸ್ಲಾ ಸಿಇಒ ಟ್ವೀಟ್ ಮಾಡಿದ್ದಾರೆ.
ಕಂಪನಿಯ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯಾದ ಆಟೋಪೈಲಟ್‌ಗೆ ಸಂಬಂಧಿಸಿದ ಕ್ರಿಮಿನಲ್ ತನಿಖೆಯನ್ನು ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್‌ನಿಂದ ಟೆಸ್ಲಾ ಎದುರಿಸುತ್ತಿರುವ ಸಮಯದಲ್ಲಿ, FSD ರೋಲ್‌ಔಟ್ ಬರುತ್ತದೆ. ಸೆಪ್ಟೆಂಬರ್‌ನಲ್ಲಿ, ಟೆಸ್ಲಾ ಮಾಲೀಕರು ಎಲೆಕ್ಟ್ರಿಕ್ ಕಾರು ತಯಾರಕರ ವಿರುದ್ಧ ಮೊಕದ್ದಮೆ ಹೂಡಿದ್ದರು. ಕಂಪನಿ ಮತ್ತು ಅದರ CEO "ಮೋಸಗೊಳಿಸುವ ಹಾಗೂ ತಪ್ಪುದಾರಿಗೆಳೆಯುವ" ಆಟೋಪೈಲಟ್ ಅಥವಾ ಪೂರ್ಣ ಸ್ವಯಂ-ಚಾಲನೆ ಸಾಫ್ಟ್‌ವೇರ್ ಅನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.