ಕರ್ನಾಟಕ

karnataka

ETV Bharat / business

ವಿದೇಶಿ ಮಾರುಕಟ್ಟೆಗಳ ಪ್ರಭಾವ: ಸೆನ್ಸೆಕ್ಸ್​, ನಿಫ್ಟಿ ಭಾರಿ ಕುಸಿತ! - ಭಾರತದ ರೂಪಾಯಿ ಬೆಲೆ

ಗುರುವಾರದ ಬೆಳಗಿನ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಸೆನ್ಸೆಕ್ಸ್ 985 ಪಾಯಿಂಟ್ ಮತ್ತು ನಿಫ್ಟಿ 287 ಪಾಯಿಂಟ್ ಇಳಿಕೆ ಕಂಡಿದೆ.

Sensex 985 points down, trading at 53,102; Nifty declines 287 points to 15,879
ವಿದೇಶಿ ಮಾರುಕಟ್ಟೆಗಳ ಪ್ರಭಾವ: ಸೆನ್ಸೆಕ್ಸ್​, ನಿಫ್ಟಿಯಲ್ಲಿ ಭಾರಿ ಕುಸಿತ

By

Published : May 12, 2022, 10:34 AM IST

ಮುಂಬೈ:ಜಾಗತಿಕ ಮಾರುಕಟ್ಟೆಗಳ ಪರಿಣಾಮ ದೇಶಿಯ ಷೇರು ಮಾರುಕಟ್ಟೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಗುರುವಾರದ ಬೆಳಗಿನ ವಹಿವಾಟಿನಲ್ಲೇ ಮುಂಬೈ ಷೇರು ಮಾರುಕಟ್ಟೆ ನೀರಸವಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 985 ಪಾಯಿಂಟ್‌ಗಳನ್ನು ಕಳೆದುಕೊಂಡು 53,250ಕ್ಕೆ ತಲುಪಿದೆ ಮತ್ತು ಎನ್‌ಎಸ್‌ಇ ನಿಫ್ಟಿ 287 ಪಾಯಿಂಟ್‌ಗಳನ್ನು ಕುಸಿದು 15,879ರಲ್ಲಿ ವಹಿವಾಟು ನಡೆಸುತ್ತಿದೆ.

ಸೆನ್ಸೆಕ್ಸ್-30 ಷೇರುಗಳ ಪೈಕಿ ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್ & ಟಿ, ಟೈಟಾನ್, ಏಷ್ಯನ್ ಪೇಂಟ್ಸ್, ಮಾರುತಿ ನಷ್ಟ ಅನುಭವಿಸಿದ ಕಂಪನಿಗಳಾಗಿವೆ. ಇದರ ಜೊತೆಗೆ, ಬ್ರಿಟಾನಿಯಾ, ಅಪೊಲೊ ಹಾಸ್ಪಿಟಲ್ಸ್ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳ ನಿಫ್ಟಿಯಲ್ಲಿ ಕುಸಿದಿವೆ. ಎನ್‌ಟಿಪಿಸಿ, ಒಎನ್‌ಜಿಸಿ ಮತ್ತು ಬಜಾಜ್ ಆಟೋ ಲಾಭ ಗಳಿಸಿವೆ.

ಇದನ್ನೂ ಓದಿ:ಬ್ಲಾಕ್ ಮಾಡಿದ ಜಿಎಸ್‌ಟಿ ಸಂಖ್ಯೆ ‘ಅನ್ ಬ್ಲಾಕ್’ ಹೇಗೆಂದು ತಿಳಿಯದ ಇಲಾಖೆ! ಉದ್ಯಮಿಯ ವ್ಯವಹಾರಕ್ಕೆ ಧಕ್ಕೆ

ABOUT THE AUTHOR

...view details