ಹೈದರಾಬಾದ್: ಮಕ್ಕಳ ಭವಿಷ್ಯವನ್ನು ಸುರಕ್ಷವಾಗಿರುವುದು ಅನೇಕ ಪೋಷಕರ ಕನಸು. ಇದರಲ್ಲಿ ವಿಮೆ ಮತ್ತು ಹೂಡಿಕೆ ಜೊತೆಯಲ್ಲಿ ಮಕ್ಕಳ ವಿಮೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಬುದ್ದಿವಂತಿಕೆಯಿಂದ ಆರಿಸಿದಾಗ, ಮಕ್ಕಳ ಶೈಕ್ಷಣಿಕ ಆರ್ಥಿಕ ಅವಶ್ಯಕತೆ ಪೂರ್ವ ಹಾಗೂ ನಂತರ ಕೂಡ ಇದು ಭರಿಸುವಂತೆ ಕಾಪಾಡಿಕೊಳ್ಳಬಹುದು.
ಶೈಕ್ಷಣಿಕ ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಕ್ಕಳ ಹುಟ್ಟಿನಿಂದಲೇ ಅವರ 21 ವರ್ಷದವರೆಗಿನ ಶಿಕ್ಷಣದ ವೆಚ್ಚ ಭರಿಸಲು ಆರ್ಥಿಕ ಸುಭದ್ರತೆ ಯೋಜನೆ ರೂಪಿಸಬೇಕು. ಇಂದಿನ ಶಿಕ್ಷಣ ಸಂಸ್ಥೆಗಳ ವೆಚ್ಚ ಎಷ್ಟು ಎಂಬುದನ್ನು ಅಂದಾಜಿಸಿ ಮುಂದಿನ 15 ವರ್ಷದ ಲೆಕ್ಕಾಚಾರ ನಡೆಸಬೇಕು. ಅದರ ಅನುಸಾರವಾಗಿ ಹಣವನ್ನು ಹೂಡಿಕೆ ಮಾಡಬೇಕು.
ನಮ್ಮ ಹೂಡಿಕೆಗಳಯ ಹೆಚ್ಚಿನ ರಿಟರ್ನ್ ನೀಡುವಂತೆ ಇರಬೇಕು. ಇಕ್ವಿಟಿ ಮ್ಯೂಚುಯಲ್ ಫಂಡ್, ಸ್ಥಿರ ಠೇವಣಿ ಮತ್ತು ವಿಮೆ ಪಾಲಿಸಿ ಅಂತಹವುಗಳಲ್ಲಿ ಇದು ಸಾಧ್ಯ. ಮಕ್ಕಳ ಉನ್ನತ ಶಿಕ್ಷಣಕ್ಕೆ ಪೋಷಕರು ಅವರನ್ನು ವಿದೇಶಕ್ಕೆ ಕಳುಹಿಸುತ್ತಾರೆ. ಈ ಭವಿಷ್ಯದ ಖರ್ಚುವೆಚ್ಚದ ಬಗ್ಗೆ ಕೂಡ ಸಿದ್ದರಾಗಿರಬೇಕು. ಅದರ ಅನುಸಾರ ಆದಾಯ ಬರುವಂತೆ ಹೂಡಿಕೆ ಮಾಡಬೇಕು.
ಈ ಯೋಜನೆಗಳಲ್ಲಿ ಹೂಡಿಕೆ ಉತ್ತಮ:ಹೂಡಿಕೆಗಳು ಧೀರ್ಘಕಾಲವಾಗಿದ್ದಾಗ ಅದು ಆದಾಯ ಮೂಲವಾಗುತ್ತದೆ. ಪಿಪಿಎಫ್, ಮ್ಯೂಚುಯಲ್ ಫಂಡ್, ಷೇರ್, ಬಂಗಾರ, ರಿಯಲ್ ಎಸ್ಟೇಟ್ ನಂತಹ ಹೂಡಿಕೆ ಉತ್ತಮವಾಗಿದೆ. ಮಕ್ಕಳ ವಿಮೆ ಕುಟುಂಬ ಸದಸ್ಯರ ಗಳಿಕೆ ಮತ್ತು ಕುಟುಂಬಸ್ಥರ ಅನುಪಸ್ತಿತಿಯಲ್ಲಿಯೂ ಅವರಿಗೆ ಸಿಗುವಂತೆ ಇರಬೇಕು. ಕಂಪನಿಗಳು ಪ್ರೀಮಿಯಂ ಅನ್ನು ಮನ್ನಾ ಮಾಡುವುದರಿಂದ ವಿಮೆದಾರರ ಮರಣದ ನಂತರವೂ ಮಕ್ಕಳ ಪಾಲಿಸಿಗಳು ಮುಂದುವರೆಯುತ್ತವೆ. ಅದು ಮಕ್ಕಳ ಉನ್ನತ ಶಿಕ್ಷಣ ಮತ್ತು ಇತರ ವೆಚ್ಚಗಳಿಗೆ ಮಾತ್ರ ಪರಿಹಾರವನ್ನು ಬಳಸಲು ಅನುಮತಿಸುತ್ತದೆ ಎಂಬ ಷರತ್ತು ಹೊಂದಿರುತ್ತದೆ.