ಕರ್ನಾಟಕ

karnataka

ETV Bharat / business

ಎನ್​ಪಿಎಸ್​ ಅಡಿ ಬರುವ ಉದ್ಯೋಗಿಗಳಿಗೆ ಗುಡ್​​ನ್ಯೂಸ್​: ಹೊಸ ನಿಯಮದಡಿ ಪಡೆಯಲಿದ್ದಾರೆ ಅನೇಕ ಪ್ರಯೋಜನ

ತಮ್ಮ ಹೂಡಿಕೆಯಿಂದ ಹಣವನ್ನು ಒಂದೇ ಬಾರಿಗೆ ಹಿಂಪಡೆಯುವ ಬದಲಾಗಿ, ನಿಯಮಿತವಾಗಿ ಪಡೆಯಲು ಅವಕಾಶ ನೀಡಿದ್ದು, ಇದರಿಂದ ಉದ್ಯೋಗಿಗಳು ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಎನ್​ಪಿಎಸ್​ ಹೊಸ ನಿಯಮ
ಎನ್​ಪಿಎಸ್​ ಹೊಸ ನಿಯಮ

By ETV Bharat Karnataka Team

Published : Nov 6, 2023, 4:28 PM IST

ಹೈದರಾಬಾದ್​: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್​ಆರ್​ಡಿಎ) ಇತ್ತೀಚೆಗೆ ರಾಷ್ಟ್ರೀಯ ಪಿಂಚಣಿ ನಿಧಿಯಲ್ಲಿ ಹೊಸ ನಿಯಮಗಳನ್ನು ಘೋಷಿಸಿದೆ. ಈ ಹೊಸ ನಿಯಮದಡಿ (ಪಿಎಫ್​ಆರ್​ಡಿಎ) ತನ್ನ ಗ್ರಾಹಕರಿಗೆ ವ್ಯವಸ್ಥಿತ ಹಿಂದೆಗೆದುಕೊಳ್ಳುವ (ಎಸ್​ಎಲ್​ ಡಬ್ಲ್ಯೂ) ಸೌಲಭ್ಯವನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ. ಇದು ಗ್ರಾಹಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ತಮ್ಮ ಹೂಡಿಕೆಯಿಂದ ಹಣವನ್ನು ಒಂದೇ ಬಾರಿಗೆ ಹಿಂಪಡೆಯುವ ಬದಲಾಗಿ, ನಿಯಮಿತವಾಗಿ ಪಡೆಯಲು ಅವಕಾಶ ನೀಡಿದ್ದು, ಇದರಿಂದ ಉದ್ಯೋಗಿಗಳು ಪ್ರಯೋಜನ ಪಡೆಯುತ್ತಾರೆ. ಪರಿಷ್ಕೃತ ನಿಯಮದ ಅನುಸಾರ, ಚಂದಾದಾರರು ಅವರ ಎನ್​ಪಿಎಸ್​​ ಮೆಚ್ಯೂರಿಟಿ ಹಣದಲ್ಲಿ ಶೇ 60ರಷ್ಟು ಹಣವನ್ನು ಕಂತುಗಳ ಮೂಲಕ ಹಿಂತೆಗೆದುಕೊಳ್ಳಬಹುದಾಗಿದೆ.

ಹೊಸ ನಿಯಮ: ನಿಯಮಿತ ವ್ಯವಸ್ಥಿತ ಲಂಪ್ಸಮ್​ ಹಿಂದೆಗೆದುಕೊಳ್ಳುವಿಕೆ ಮೂಲಕ ಗ್ರಾಹಕರು ಮಾಸಿಕ, ತ್ರೈಮಾಸಿಕ, ಅರ್ಧ- ವಾರ್ಷಿಕ ಮತ್ತು ವಾರ್ಷಿಕ ಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎನ್​ಪಿಎಸ್​ ವಾಪಸಾತಿಗಳನ್ನು ಪಡೆಯುವ ಸಂಬಂಧ ಅದನ್ನು ಪಾವತಿಯ ಆಯ್ಕೆ ಮಾಡುವ ಸಂದರ್ಭದಲ್ಲಿ ಅಧಿಕೃತ ಮಾಡಬೇಕಿದೆ. ಈ ಹಿಂದೆ ನೀಡಿದ ನಿಯಮಕ್ಕೆ ಕೊಂಚ ವಿನಾಯಿತಿ ನೀಡಿ ಶೇ 60ರಷ್ಟು ಹಣವನ್ನು ಹೊಸ ವ್ಯವಸ್ಥಿತ ಮೊತ್ತದ ಮೂಲಕ ಪಡೆಯಬಹುದು. 40ರಷ್ಟು ಕಾರ್ಪಸ್​ ಅನ್ನು ವರ್ಷಾಶನ ಪಡೆಯಬಹುದಾಗಿದೆ. ಈ ಹೊಸ ವ್ಯವಸ್ಥೆಯನ್ನು ನವೀಕರಣ ಮಾಡಲು ಎನ್​ಪಿಎಸ್​ ಹೂಡಿಕೆಗಳಿಗೆ ಕೆವೈಸಿ ಸಂಬಂಧಿತ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಪಿಎಫ್​ಆರ್​ಡಿಎ ಕೇಂದ್ರಿಯ ದಾಖಲೆ ಕೀಪಿಂಗ್​ ಏಜೆನ್ಸಿಗಳಿಗೆ ಕೋರಿದೆ.

ಪಿಎಫ್​ಆರ್​ಡಿಎ ಅಕ್ಟೋಬರ್​ 27, 2023ರಲ್ಲಿ ಹೊರಡಿಸಿದ ಹೊಸ ಸುತ್ತೋಲೆ ಅನುಸಾರ, ಒಟ್ಟು ಮೊತ್ತವನ್ನು ಹಿಂಪಡೆಯುವ ಆಯ್ಕೆಯ ವಿವರಗಳನ್ನು ಕೇಳಲಾಗಿದೆ. ಜೊತೆಗೆ ಹೂಡಿಕೆದಾರರಿಗೆ ಎನ್​ಪಿಎಸ್​ ಕಾರ್ಪಸ್​ ಫಂಡ್​ನ ಶೇ 60ರಷ್ಟು ಮುಕ್ತಾಯದ ಮೊತ್ತದ ಮೇಲೆ ಹಿಂಪಡೆಯಬಹುದಾಗಿದೆ.

ಎಸ್​ಎಲ್​ಡಬ್ಲ್ಯೂ ಪ್ರಯೋಜನ:ಎಸ್​ಎಲ್​ಡಬ್ಲ್ಯೂ ಹಣದ ನಿರಂತರ ಹರಿವನ್ನು ಮಾಡುವಲ್ಲಿ ಹಲವು ಪ್ರಯೋಜನವನ್ನು ಹೊಂದಿದೆ. ಇದು ವಾರ್ಷಿಕದ ಮೇಲೆ ಹೆಚ್ಚುವರಿ ಆದಾಯವನ್ನು ತರುತ್ತದೆ. ವಿತ್​ಡ್ರಾ ಸೇರಿದಂತೆ ಸಂಪತ್ತಿನ ಸೃಷ್ಟಿ ಮತ್ತು ತೆರಿಗೆ ಪ್ರಯೋಜನವನ್ನೂ ಕೂಡಾ ಹೊಂದಿದೆ. ಎನ್​ಪಿಎಸ್​ ಚಂದದಾರಿಕೆಯು ಮುಕ್ತ ಲಂಪ್ಸಮ್​ ಜೊತೆಗೆ ವ್ಯವಸ್ಥಿತ ವಿತ್​​ಡ್ರಾ ಹೊಂದಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಡೆವಲಪ್​ಮೆಂಟ್​ ​ ಅಧಾರಿಟಿ (ಪಿಎಫ್​ಆರ್​ಡಿಎ)ಯ ವಾರ್ಷಿಕ ನಿಯಮದಲ್ಲಿ ಯಾವುದೇ ವ್ಯತ್ಯಾಸ ಇಲ್ಲ.

ಪರಿಶೀಲನೆ ಕಡ್ಡಾಯ:ಪಿಎಫ್​ಆರ್​ಡಿಎ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿ ಹಣವನ್ನು ಹಿಂಪಡೆಯಲು ಷೇರುದಾರರಿಗೆ ಪೆನ್ನಿ ಡ್ರಾಪ್ ಪರಿಶೀಲನೆ ಕಡ್ಡಾಯವಾಗಿದೆ. ಇದು ಷೇರುದಾರರಿಂದ ಹಣವನ್ನು ಸರಿಯಾದ ಸಮಯಕ್ಕೆ ವರ್ಗಾವಣೆಯ ಭರವಸೆಯನ್ನು ನೀಡುತ್ತದೆ. ಈ ಪೆನ್ನಿ ಡ್ರಾಪ್​ ಪ್ರಕ್ರಿಯೆ, ಬ್ಯಾಂಕ್​ ಉಳಿತಾಯ ಖಾತೆ ವ್ಯವಸ್ಥೆಯನ್ನು ಸಿಆರ್​ಎ ಗಮನಿಸಲಿದೆ. ಎನ್​ಪಿಎಸ್​ ಸರ್ಕಾರ ಬೆಂಬಲಿತ ಪಿಂಚಣಿ ವ್ಯವಸ್ಥೆಯಾಗಿದ್ದು, ಇದನ್ನು ಜನವರಿ 2004ರಲ್ಲಿ ಸರ್ಕಾರದ ಉದ್ಯೋಗಿಗಳಿಗೆ ಶುರುಮಾಡಿದ ಯೋಜನೆಯಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಪ್ರಮುಖ ಹಣದುಬ್ಬರ ಶೇ 4.5ಕ್ಕೆ ಇಳಿಕೆ; ಹಣಕಾಸು ಸಚಿವಾಲಯ ಹೇಳಿಕೆ

ABOUT THE AUTHOR

...view details