ಹೈದರಾಬಾದ್: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಕೇಂದ್ರ ಬಜೆಟ್ ಭಾಷಣದಲ್ಲಿ ವೈಯಕ್ತಿಕ ತೆರಿಗೆ ವಿಚಾರವು ತುಂಬಾ ಪ್ರಮುಖವಾಗಿದೆ. ತೆರಿಗೆ ಪಾವತಿದಾರರು ಈ ವಿಷಯದ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಕೂಡ ತೆರಿಗೆದಾರರಿಗೆ ನಿರಾಸೆಯಾಗದಂತೆ ಈ ನಿಟ್ಟಿನಲ್ಲಿ ದೊಡ್ಡ ಘೋಷಣೆ ಕೂಡಾ ಮಾಡಿದ್ದಾರೆ.
ಹೊಸ ತೆರಿಗೆ ಪದ್ಧತಿಯಲ್ಲಿ (ಎನ್ಟಿಆರ್) 7 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಹಳೆಯ ತೆರಿಗೆ ಪದ್ಧತಿಯಲ್ಲಿ (ಓಟಿಆರ್) 5 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯದ ಮೇಲೆ ತೆರಿಗೆ ಪಾವತಿಸುವ ಅವಶ್ಯಕತೆ ಇರಲಿಲ್ಲ. ಆದರೆ, ಹೊಸ ತೆರಿಗೆ ಪದ್ಧತಿ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವ ಅಂಶಗಳು ಉತ್ತಮವಾಗಿವೆ ಎಂಬ ಪ್ರಶ್ನೆಗಳು ಪ್ರಸ್ತುತ ಉದ್ಭವವಾಗಿವೆ?
ಹೊಸ ತೆರಿಗೆ ಪದ್ಧತಿಯ ಮಾಹಿತಿ: ಹೊಸ ತೆರಿಗೆ ಪದ್ಧತಿಯಲ್ಲಿ ಹೊಸ ತೆರಿಗೆ ಮಿತಿಗಳನ್ನು ಜಿರೋದಿಂದ 3 ಲಕ್ಷ (ತೆರಿಗೆ ಇಲ್ಲ), 3ರಿಂದ 6 ಲಕ್ಷ ರೂ. (ಶೇ. 5ರಷ್ಟು ತೆರಿಗೆ), 6 ರಿಂದ 9 ಲಕ್ಷ ರೂ. (ಶೇ.10), 9 ರಿಂದ 12 ಲಕ್ಷ (ಶೇ.15ರಷ್ಟು), 12-15 ಲಕ್ಷ (ಶೇ.20 ರಷ್ಟು) ಮತ್ತು 15 ಲಕ್ಷಕ್ಕಿಂತ ಹೆಚ್ಚಿನ (ಶೇ.30ರಷ್ಟು) ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 50,000 ರೂ. ಸ್ಟ್ಯಾಂಡರ್ಡ್ ಡಿಡೆಕ್ಷನ್ ಹೊರತುಪಡಿಸಿ, ಎನ್ಟಿಆರ್ ಯಾವುದೇ ವಿನಾಯಿತಿಗಳು ಮತ್ತು ಕಡಿತಗಳಿಗೆ ಅವಕಾಶ ನೀಡಿಲ್ಲ. ಎರಡೂ ಆಡಳಿತಗಳ ಅಡಿ, 50,000 ರೂ. ಪ್ರಮಾಣಿತ ಕಡಿತವು ಸಂಬಳದ ಆದಾಯದ ಮೇಲೆ ಮಾತ್ರ ಅನ್ವಯಿಸುತ್ತದೆ. ಆದರೆ, ಯಾವುದೇ ಮೂಲದಿಂದಲ್ಲ ಎಂಬುದನ್ನು ಗಮನಿಸಬೇಕು.
ಶೇ.4ರಷ್ಟು ಶಿಕ್ಷಣದ ಸೆಸ್ ವಿಧಿಸಲಾಗುವುದು: ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದು ಉತ್ತಮ ಎನ್ನುವುದನ್ನು ಅರಿತುಕೊಳಬೇಕಿದೆ. ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು 10 ಲಕ್ಷ ರೂ ಆಗಿದ್ದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಅವನು 60,000 ರೂ. ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹಳೆಯ ತೆರಿಗೆ ಪದ್ಧತಿ ವ್ಯಾಪ್ತಿಗೆ ಬರುವ ತೆರಿಗೆದಾರರು 1,12,500 ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಶೇ.4ರಷ್ಟು ಶಿಕ್ಷಣದ ಸೆಸ್ ಅನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಈ ರೀತಿಯಾಗಿ ಹೊಸ ತೆರಿಗೆ ಪದ್ಧತಿಯಲ್ಲಿ 10 ಲಕ್ಷ ರೂ.ವರೆಗಿನ ಆದಾಯದ ಮೇಲೆ 52,500 ರೂ.ಗಳ ತೆರಿಗೆ ಉಳಿತಾಯವಾಗಲಿದೆ.