ಕರ್ನಾಟಕ

karnataka

ETV Bharat / business

ಆಸ್ತಿ ಉತ್ತರಾಧಿಕಾರಿಗೆ ವರ್ಗಾಯಿಸುವುದು ಹೇಗೆ?; ನಾಮಿನಿ ಪ್ರಕ್ರಿಯೆ ವಿಧಾನದ ಅರಿವು ಅತ್ಯವಶ್ಯಕ - ನಾಮಿನಿಗೆ ಸಂಪೂರ್ಣ ಹಕ್ಕು ಇರುವುದಿಲ್ಲ

ಜೀವ ವಿಮೆ ಪಾಲಿಸಿ, ಬ್ಯಾಂಕ್​ಗಳಲ್ಲಿ ಸ್ಥಿರ ಠೇವಣಿ, ಷೇರುಗಳಲ್ಲಿನ ಡಿಮ್ಯಾಟ್​​​, ಮ್ಯೂಚಯಲ್​ ಫಂಡ್​​ ಸೇರಿದಂತೆ ಅನೇಕ ಆಸ್ತಿಗಳಿಗೆ ನಾಮಿನಿ ಮಾಡುವ ಸೌಲಭ್ಯವಿದೆ. ಇದರಲ್ಲಿ ನೀವು ನಾಮಿನಿ ಮಾಡುತ್ತಿರುವವರ ವಿವರವನ್ನು ನೀಡುವುದು ಕಡ್ಡಾಯವಾಗಿದೆ. ಈ ರೀತಿ ನಾಮಿನಿ ಮಾಡಲು ಇರುವ ನಿಯಮಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕಾಗಿದೆ.

ಆಸ್ತಿಯನ್ನು ಉತ್ತರಾಧಿಕಾರಿಗೆ ವರ್ಗಾಯಿಸುವುದು ಹೇಗೆ?; ನಾಮಿನಿ ಪ್ರಕ್ರಿಯೆ ವಿಧಾನದ ಅರಿವು ಅವಶ್ಯ
how-to-adequately-transfer-property-to-an-heir-learn-how-to-process-the-nominee

By

Published : Nov 22, 2022, 5:02 PM IST

ಹೈದರಾಬಾದ್​: ಆಸ್ತಿ ಸಂಪಾದನೆ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದೇ ರೀತಿ ಸಂಪತ್ತನ್ನು ಯಾವುದೇ ತೊಂದರೆಗಳಿಲ್ಲದೇ ಸರಿಯಾದ ಉತ್ತರಾಧಿಕಾರಿಗಳಿಗೆ ವರ್ಗಾಯಿಸುವುದು ಮುಖ್ಯ. ಕಷ್ಟಪಟ್ಟು ದುಡಿದ ಆಸ್ತಿಯನ್ನು ಅವರ ಅಗಲಿಕೆ ನಂತರ ಕುಟುಂಬದಲ್ಲಿನ ಜನರಿಗೆ ತಲುಪುವಂತೆ ಮಾಡುವುದಕ್ಕೆ ಇರುವ ಏಕೈಕ ಮಾರ್ಗ ನಾಮಿನೇಷನ್​. ನಾಮಿನಿಯು ಉತ್ತರಾಧಿಕಾರಿ ಆಗದಿರಬಹುದು.

ಆದರೆ, ನಾಮಿನಿಗಳು ಸ್ವತ್ತುಗಳನ್ನು ಹೊಂದಲು ಮತ್ತು ಅವುಗಳನ್ನು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಬದ್ಧರಾಗಿರುತ್ತಾರೆ. ಆಸ್ತಿ ನಿಯಮ ಅನುಸಾರ ಈ ಆಸ್ತಿಯನ್ನು ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚಿನ ಜನರಿಗೆ ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ.

ಜೀವ ವಿಮೆ ಪಾಲಿಸಿ, ಬ್ಯಾಂಕ್​ಗಳಲ್ಲಿ ಸ್ಥಿರ ಠೇವಣಿ, ಷೇರುಗಳಲ್ಲಿನ ಡಿಮ್ಯಾಟ್​​​, ಮ್ಯೂಚಯಲ್​ ಫಂಡ್​​ ಸೇರಿದಂತೆ ಅನೇಕ ಆಸ್ತಿಗಳಿಗೆ ನಾಮಿನಿ ಮಾಡುವ ಸೌಲಭ್ಯವಿದೆ. ಇದರಲ್ಲಿ ನೀವು ನಾಮಿನಿ ಮಾಡುತ್ತಿರುವವರ ವಿವರವನ್ನು ನೀಡುವುದು ಕಡ್ಡಾಯವಾಗಿದೆ. ಈ ರೀತಿ ನಾಮಿನಿ ಮಾಡಲು ಇರುವ ನಿಯಮಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕಾಗಿದೆ.

ವಿಭಿನ್ನ ನಾಮಿನಿ ಸೌಲಭ್ಯ:ಮಾಲೀಕರು ಅಗಲಿಕೆ ಬಳಿಕ ಅವರ ಆಸ್ತಿಗೆ ನಾಮಿನಿಗಳು ಟ್ರಸ್ಟಿಗಳಾಗುತ್ತಾರೆ. ಅದರ ಅರ್ಥ ಈ ಆಸ್ತಿಗಳೆಲ್ಲದರ ಮೇಲೆ ನಾಮಿನಿಗೆ ಸಂಪೂರ್ಣ ಹಕ್ಕು ಇರುವುದಿಲ್ಲ. ಕಾನೂನು ಉತ್ತರಾಧಿಕಾರಿ ನಿರ್ಮಾಣವಾಗುವವರೆಗೂ ನಾಮಿನಿ ಅವರ ಸಂಪೂರ್ಣ ಆಸ್ತಿಗಳ ರಕ್ಷಕರಾಗಿರುತ್ತಾರೆ. ವಿವಿಧ ರೀತಿಯ ಆಸ್ತಿ ಮತ್ತು ಖಾತೆಗೆ ಸಂಬಂಧಿಸಿದಂತೆ ವಿಭಿನ್ನ ರೀತಿಯ ನಾಮಿನಿ ಸೌಲಭ್ಯ ಇದೆ.

ಸ್ಥಿರ ಠೇವಣಿ, ಮ್ಯೂಚುವಲ್​ ಫಂಡ್​ ಮತ್ತು ಉಳಿತಾಯ ಖಾತೆಗೆ ಸಂಬಂಧಿಸಿದಂತೆ ಬೇರೆ ಬೇರೆ ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡಬಹುದು. ಜೀವ ವಿಮೆಗೆ ಇಬ್ಬರು ಮತ್ತು ಅದಕ್ಕಿಂತ ಹೆಚ್ಚಿನ ಜನರನ್ನು ನಾಮ ನಿರ್ದೇಶನ ಆಸ್ತಿಗೆ ಅನುಗುಣವಾಗಿ ಕೂಡ ಒಬ್ಬರಿಗಿಂತ ಹೆಚ್ಚಿನ ಜನರನ್ನು ನಾಮ ನಿರ್ದೇಶನ ಮಾಡಬಹುದು.

ಆಸ್ತಿ ಮಾಲೀಕರು ನಾಮ ನಿರ್ದೇಶನದಲ್ಲಿ ಶೇಕಡಾವಾರಿನಲ್ಲಿ ಕೂಡ ವಿಂಗಡನೆ ಮಾಡಬಹುದು. ಬ್ಯಾಕ್​ ಖಾತೆಗೆ ಒಬ್ಬರೇ ನಾಮ ನಿರ್ದೇಶನ ಮಾಡಬಹುದು. ಮ್ಯೂಚುವಲ್​ ಫಂಡ್​ನಲ್ಲಿ ಮೂವರನ್ನು ನಾಮ ನಿರ್ದೇಶನ ಮಾಡಬಹುದು. ಈ ನಾಮನಿರ್ದೇಶನವು ಆ ಪೋಲಿಯೊದಲ್ಲಿನ ಎಲ್ಲಾ ನೀತಿಗಳಿಗೆ ಅನ್ವಯಿಸುತ್ತದೆ. ನಾಮ ನಿರ್ದೇಶಕರಿಗೆ ಕಾನೂನಾತ್ಮಕ ಉತ್ತರಾಧಿಕಾರಿಗಳು ಅವಶ್ಯ. ನಾಮಿನಿಗಳು ಕಾನೂನುಬದ್ಧ ಉತ್ತರಾಧಿಕಾರಿಗಳಾಗಿದ್ದರೆ, ಅವರು ಆಸ್ತಿಯನ್ನು ಕಾನೂನುಬದ್ಧವಾಗಿ ಹಿಂಪಡೆಯಬಹುದು

ವಿಲ್​ ಇಲ್ಲದಿದ್ದರೆ ಭಾರಿ ಸಂಕಷ್ಟ:ನಾಮಿನಿ ಗೈರಿನಲ್ಲಿ ಆಸ್ತಿಯ ಹಕನ್ನು ತಕ್ಷಣಕ್ಕೆ ಪಡೆಯುವುದು ಅಸಾಧ್ಯ. ವಿಲ್​ ಇಲ್ಲದಿದ್ದರೆ, ಇದು ಭಾರೀ ಕಷ್ಟವಾಗಿರಲಿದೆ. ಜೀವ ವಿಮೆ ಪಾಲಿಸಿಯಲ್ಲಿ ನಾಮಿನಿಯ ಮಾಹಿತಿ ನೀಡುವುದು ಕೂಡ ಕಡ್ಡಾಯವಾಗಿದೆ. ಇಲ್ಲದೇ ಹೋದಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಪತ್ತೆ ಮಾಡಿ, ಪರಿಹಾರ ನೀಡುವುದು ವಿಳಂಬು ಆಗುತ್ತದೆ. ಈ ಹಿನ್ನಲೆ ವಿಶ್ವಾಸಾರ್ಹ ವ್ಯಕ್ತಿಯನ್ನು ಮಾತ್ರ ನಾಮಿನಿಯಾಗಿ ಮಾಡಬೇಕು.

ನಿಮ್ಮ ಒಟ್ಟಾರೆ ಹೂಡಿಕೆಯಲ್ಲಿ ಬ್ಯಾಂಕ್​ ಉಳಿತಾಯ ಖಾತೆ, ಎಫ್​ಡಿ, ಡಿಮ್ಯಾಟ್​ ಅಕೌಂಟ್​​, ಜೀವ ವಿಮೆ, ಸಣ್ಣ ಉಳಿತಾಯದಲ್ಲಿ ನಾಮಿನಿಯಲ್ಲಿ ಹೆಸರಿಸಿದ್ದಾರಾ ಎಂಬುದನ್ನು ಚೆಕ್​ ಮಾಡಬೇಕು. ಅವಶ್ಯಕತೆ ಇದ್ದರೆ ಮತ್ತೊಮ್ಮೆ ನಾಮಿನಿಯನ್ನು ಗುರುತಿಸಿ. ಭವಿಷ್ಯದಲ್ಲಿ ಆಗುವ ತೊಂದರೆಗಳನ್ನು ತಪ್ಪಿಸಲು ನಾಮಿನೇಷನ್​ ಅವಶ್ಯಕವಾಗಿದೆ.

ಇದನ್ನೂ ಓದಿ: ವಿಮೆ ವಂಚನೆ ತಡೆಗೆ ಮುಂಜಾಗ್ರತಾ ಕ್ರಮ ಅಗತ್ಯ... ಇಲ್ಲಿವೆ ಕೆಲ ಸಲಹೆಗಳು

ABOUT THE AUTHOR

...view details