ತೈಲ ಬೆಲೆ ಬಹುತೇಕ ಯಥಾಸ್ಥಿತಿ.. ಹೀಗಿದೆ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ - ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ
ಹಲವು ದಿನಗಳ ಕಾಲ ಏರಿಕೆ ಕಂಡಿದ್ದ ಇಂಧನ ಬೆಲೆಗಳಲ್ಲಿ ಏಳನೇ ದಿನ ಯಥಾಸ್ಥಿತಿ ಮುಂದುವರೆದಿದೆ. ಆದರೆ, ಮಂಗಳೂರಿನಲ್ಲಿ ಪೆಟ್ರೋಲ್ ದರ ಕೆಲವು ಪೈಸೆಗಳಷ್ಟು ಏರಿಕೆ ಕಂಡಿದೆ..
ತೈಲ ಬೆಲೆ ಬಹುತೇಕ ಯಥಾಸ್ಥಿತಿ.. ಹೀಗಿದೆ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ
By
Published : Apr 15, 2022, 10:10 AM IST
ಬೆಂಗಳೂರು :ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಹಲವು ದಿನಗಳ ಕಾಲ ಏರಿಕೆ ಕಂಡಿದ್ದ ಇಂಧನ ಬೆಲೆಗಳಲ್ಲಿ ಏಳನೇ ದಿನವೂ ವ್ಯತ್ಯಾಸವಾಗಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಒಂದು ಲೀಟರ್‌ಗೆ 111.11 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆಗೆ ಸ್ಪೀಡ್ ಪೆಟ್ರೋಲ್ಗೆ ರಾಜಧಾನಿಯಲ್ಲಿ 114.08 ರೂಪಾಯಿ ದರ ನಿಗದಿಯಾಗಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೋಡುವುದಾದರೆ ಮಂಗಳೂರಿನಲ್ಲಿ ಕೆಲವು ಪೈಸೆಗಳಷ್ಟು ಪೆಟ್ರೋಲ್ ದರ ಏರಿಕೆ ಕಂಡಿದೆ. ಈಗ ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.90 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್‌ಗೆ 94.59 ರೂಪಾಯಿಯಿದೆ.
ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.85 ರೂಪಾಯಿ ಮತ್ತು ಡೀಸೆಲ್ ದರ ಒಂದು ಲೀಟರ್‌ಗೆ 94.59 ರೂಪಾಯಿ ಇದೆ. ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.59 ರೂಪಾಯಿ, ಡೀಸೆಲ್ ದರ ಒಂದು ಲೀಟರ್‌ಗೆ 94.34 ರೂಪಾಯಿ ಇದೆ. ಬೆಳಗಾವಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 111 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್‌ಗೆ 96 ರೂಪಾಯಿಯಿದೆ.
ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೀಗಿದೆ. (ಒಂದು ಲೀಟರ್‌ಗೆ.. ರೂಪಾಯಿಗಳಲ್ಲಿ..)