ಕರ್ನಾಟಕ

karnataka

ETV Bharat / business

ಏಪ್ರಿಲ್​ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ - ಹ್ಯಾಚ್‌ಬ್ಯಾಕ್‌ಗಳಾದ ಮಾರುತಿ ಸುಜುಕಿ ವ್ಯಾಗನ್‌ಆರ್

ಮಾರುತಿ ಸುಜುಕಿ ತನ್ನ ಪ್ರಯಾಣಿಕ ಹಾಗೂ ಎಸ್​ಯುವಿ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ನಿಯಂತ್ರಕ ಫೈಲಿಂಗ್​ನಲ್ಲಿ ಕಂಪನಿ ಈ ಮಾಹಿತಿ ನೀಡಿದೆ. ಮಾರುತಿ ಕಾರು ಬೆಲೆ ಹೆಚ್ಚಾದರೆ ದೇಶದ ಇತರ ಕಂಪನಿ ಕಾರುಗಳ ಬೆಲೆಗಳು ಕೂಡ ಹೆಚ್ಚಾಗಬಹುದು.

Explained: Maruti Suzuki cars will cost more from April
Explained: Maruti Suzuki cars will cost more from April

By

Published : Mar 31, 2023, 4:57 PM IST

ನವದೆಹಲಿ :ಮಾರಾಟ ಮೌಲ್ಯದ ದೃಷ್ಟಿಯಿಂದ ಭಾರತದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಏಪ್ರಿಲ್‌ನಿಂದ ತನ್ನ ಎಲ್ಲ ಶ್ರೇಣಿಯ ಪ್ರಯಾಣಿಕ ಕಾರುಗಳು ಮತ್ತು ಕ್ರೀಡಾ ಬಳಕೆಯ ವಾಹನಗಳ ಬೆಲೆಗಳನ್ನು ಹೆಚ್ಚಿಸಲಿದೆ. ಜಪಾನಿನ ವಾಹನ ತಯಾರಕ ಕಂಪನಿ ಸುಜುಕಿ ಕಾರ್ಪೊರೇಶನ್‌ನ ಅಂಗಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ, ತನ್ನ ಸಂಪೂರ್ಣ ಕಾರುಗಳ ಶ್ರೇಣಿಯಾದ್ಯಂತ ಬೆಲೆಗಳನ್ನು ಹೆಚ್ಚಿಸುವುದಾಗಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್‌ಗಳಾದ ಮಾರುತಿ ಸುಜುಕಿ ವ್ಯಾಗನ್‌ಆರ್, ಸೆಲೆರಿಯೊ, ಆಲ್ಟೊ, ಸ್ವಿಫ್ಟ್ ಮತ್ತು ಬಲೆನೊ ಸೇರಿದಂತೆ ದೇಶದಲ್ಲಿ ಕೆಲವು ಜನಪ್ರಿಯ ಕಾರು ಮಾದರಿಗಳನ್ನು ಉತ್ಪಾದಿಸುತ್ತದೆ. ಕಂಪನಿಯು ತನ್ನ ಮೂಲ ಸೆಡಾನ್ ಕಾರು ಮಾರುತಿ ಸುಜುಕಿ ಡಿಜೈರ್ ಮತ್ತು ಪ್ರೀಮಿಯಂ ಸೆಡಾನ್ ಸಿಯಾಜ್‌ನ ಪೆಟ್ರೋಲ್ ಮತ್ತು ಸಿಎನ್‌ಜಿ ರೂಪಾಂತರಗಳನ್ನು ಸಹ ಮಾರಾಟ ಮಾಡುತ್ತದೆ. ಮಾರುತಿ ಸುಜುಕಿಯು ಏಳು ಆಸನಗಳ ಮಲ್ಟಿ-ಯುಟಿಲಿಟಿ ವೆಹಿಕಲ್ ಎರ್ಟಿಗಾ, ಐದು ಆಸನಗಳ ಮಾರುತಿ ಸುಜುಕಿ ಬ್ರೆಝಾ ಮತ್ತು ಎಕೋ ಇತರವುಗಳನ್ನು ಉತ್ಪಾದಿಸುತ್ತದೆ.

ಪ್ರಯಾಣಿಕ ವಾಹನಗಳ ಜೊತೆಗೆ, ಕಂಪನಿಯು ಸಿಎನ್‌ಜಿ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ಲಘು ವಾಣಿಜ್ಯ ವಾಹನಗಳನ್ನು ಸಹ ತಯಾರಿಸುತ್ತದೆ. ಭಾರತದ ದೇಶೀಯ ಕಾರು ಉತ್ಪಾದಕ ಸಂಸ್ಥೆ ಟಾಟಾ ಮೋಟಾರ್ಸ್ ಮತ್ತು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ತಯಾರಕರಾದ ಮಹೀಂದ್ರಾ ಗ್ರೂಪ್‌ನಂತಹ ವಾಹನ ತಯಾರಕರು ಕೂಡ ತಮ್ಮ ವಾಹನಗಳ ಬೆಲೆಗಳನ್ನು ಹೆಚ್ಚಿಸಿವೆ ಅಥವಾ ಶೀಘ್ರದಲ್ಲೇ ಬೆಲೆಗಳನ್ನು ಪರಿಷ್ಕರಿಸಲು ಯೋಜಿಸಿವೆ.

ಮಹೀಂದ್ರಾ ಗ್ರೂಪ್ ಕಳೆದ ತಿಂಗಳು ತನ್ನ XUV700 ಮತ್ತು ಮಹೀಂದ್ರ ಥಾರ್ ಪ್ರೀಮಿಯಂ SUV ಗಳ ಬೆಲೆಗಳನ್ನು ಮಾಡೆಲ್‌ಗಳಾದ್ಯಂತ 50,000 ರಿಂದ 60,000 ವರೆಗೆ ಹೆಚ್ಚಿಸಿದೆ. ಮಹೀಂದ್ರಾ ಗ್ರೂಪ್ ಈ ಹಿಂದೆ ತನ್ನ ಸ್ಕಾರ್ಪಿಯೋ ಎಸ್‌ಯುವಿಗಳ ಬೆಲೆಯನ್ನು ಹೆಚ್ಚಿಸಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು, ಲಾಜಿಸ್ಟಿಕ್ ವೆಚ್ಚಗಳು ಮತ್ತು ಸೆಮಿಕಂಡಕ್ಟರ್​ಗಳ ಕೊರತೆಯಂಥ ಸಮಸ್ಯೆಗಳಿಂದಾಗಿ ಕಾರು ತಯಾರಕರು ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ.

ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿಯಂತಹ ಹಲವಾರು ಕಾರು ತಯಾರಕರು ಕಳೆದ ವರ್ಷವೂ ತಮ್ಮ ಕಾರುಗಳ ಬೆಲೆಗಳನ್ನು ಹೆಚ್ಚಿಸಿದ್ದವು. ಬಿಡುಗಡೆಯಾದ 40 ವರ್ಷಗಳ ನಂತರ ಈ ವರ್ಷ 25 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದ ಭಾರತದ ಮೊದಲ ಕಾರು ತಯಾರಕ ಎಂಬ ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವ ಮಾರುತಿ ಸುಜುಕಿ, ವೆಚ್ಚವನ್ನು ಕಡಿಮೆ ಮಾಡಲು ಮತ್ತು ವೆಚ್ಚದ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಹೀಗಾಗಿ ಬೆಲೆ ಏರಿಕೆಯ ಮೂಲಕ ಒಂದಿಷ್ಟು ಭಾರವನ್ನು ಕಂಪನಿ ಪ್ರಯಾಣಿಕರಿಗೆ ವರ್ಗಾಯಿಸಲಿದೆ.

ಮಾರುತಿ ಸುಜುಕಿ ತನ್ನ ಭಾರತೀಯ ಕಾರ್ಖಾನೆಯಿಂದ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ರಫ್ತು ಮಾಡುತ್ತದೆ ಮತ್ತು ಈ ವಾರ ಲ್ಯಾಟಿನ್ ಅಮೇರಿಕಾಕ್ಕೆ ತನ್ನ 2,50,000 ನೇ ಕಾರಾದ ಬಲೆನೊವನ್ನು ರಫ್ತು ಮಾಡಿದೆ. ಮಾರುತಿ ಸುಜುಕಿ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 40 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಮತ್ತು ಇದು ದೇಶದಲ್ಲಿ ಸಣ್ಣ ಕಾರುಗಳ ಅತಿದೊಡ್ಡ ಉತ್ಪಾದಕ ಕಂಪನಿಯಾಗಿದೆ. ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಾದಲ್ಲಿ ಇತರ ಕಾರು ಕಂಪನಿಗಳು ಸಹ ಅದನ್ನೇ ಅನುಸರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಕಿಂಗ್​ ಖಾನ್​ ಮನೆಗೆ ಬಂತು ಐಷಾರಾಮಿ ಕಾರು: ಬೆಲೆ ಎಷ್ಟು ಗೊತ್ತಾ?

ABOUT THE AUTHOR

...view details