ಜೀವನಮಟ್ಟ ಏರಿಕೆಯಾದಂತೆ ಶಿಕ್ಷಣ ವ್ಯವಸ್ಥೆಯಲ್ಲಿನ ವೆಚ್ಚಗಳೂ ಏರಿಕೆಯಾಗುತ್ತವೆ. ವರ್ಷದಿಂದ ವರ್ಷಕ್ಕೆ ಕಾಲೇಜು ಮತ್ತು ಉನ್ನತ ಶಿಕ್ಷಣದ ಖರ್ಚುಗಳು ಏರುಗತಿಯಲ್ಲಿಯೇ ಸಾಗುತ್ತಿವೆ. ಮಕ್ಕಳ ಶಿಕ್ಷಣವನ್ನು ಗಮನದಲ್ಲಿರಿಸಿ, ಮುಂಚಿತವಾಗಿಯೇ ಈ ವೆಚ್ಚಗಳನ್ನು ಭರಿಸಲು ಯೋಜನೆ ರೂಪಿಸಬೇಕು. ಮಗು ಕಾಲೇಜು ಶಿಕ್ಷಣಕ್ಕೆ ಬರುವ ಮುನ್ನವೇ ನಡೆಸುವ ಈ ಬುದ್ದಿವಂತಿಕೆಯ ಹೂಡಿಕೆ ಯೋಜನೆಗಳು ಭವಿಷ್ಯತ್ತಿನಲ್ಲಿ ಸಹಾಯ ಮಾಡುತ್ತದೆ. ಇದಕ್ಕಾಗಿ ಕೆಲವು ಹೂಡಿಕೆ ಮಾರ್ಗವನ್ನು ಅರಿತಿರುವುದು ಅವಶ್ಯಕ.
ಚಿನ್ನದ ಮೇಲೆ ಹೂಡಿಕೆ: ಚಿನ್ನ ಅಥವಾ ಬೆಳ್ಳಿಯ ಇಟಿಎಫ್ (ವಿನಿಮಯ ವ್ಯಾಪಾರ ನಿಧಿಗಳು) ತೆಗೆದುಕೊಳ್ಳುವುದರಿಂದ ಭವಿಷ್ಯವನ್ನು ಸುರಕ್ಷಿತವಾಗಿರಿಸಿ. ಗೋಲ್ಡ್ ಮ್ಯೂಚುವಲ್ ಫಂಡ್ಗಳು ಲಭ್ಯವಿವೆ. ಹೂಡಿಕೆ ವಿಷಯದಲ್ಲಿ ಇವು ಸಾಕಷ್ಟು ಪ್ರಯೋಜನ ನೀಡುತ್ತವೆ. ಇದರ ಜೊತೆಗೆ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಮತ್ತು ಹೈಬ್ರಿಡ್ ಇಕ್ವಿಟಿ ಫಂಡ್ಗಳನ್ನು ಪರಿಗಣಿಸಬಹುದು. ಇವುಗಳು 8 ವರ್ಷದ ಅವಧಿ ಹೊಂದಿದ್ದು, ಉತ್ತಮ ರಿಟರ್ನ್ಸ್ ನೀಡುತ್ತವೆ. ಪ್ರತಿ ತಿಂಗಳು 10 ಸಾವಿರದಂತೆ 8 ವರ್ಷ ಹೂಡಿಕೆ ಮಾಡಿದರೆ, ಶೇ 10ರಷ್ಟು ಆದಾಯದೊಂದಿಗೆ 13,72,300 ರೂ ಪಡೆಯಬಹುದು.
ಹಣದುಬ್ಬರ ಮೀರಿದ ಆದಾಯ ಸಿಗಲಿ: ಅನೇಕ ದಂಪತಿಗಳು ಮಗಳ ಭವಿಷ್ಯಕ್ಕೆ ಹೆಚ್ಚುವರಿ ಸುರಕ್ಷತೆ ನೀಡುತ್ತಾರೆ. ಇದಕ್ಕಾಗಿ ಜೀವ ವಿಮೆ ಮಾಡುತ್ತಾರೆ. ಪ್ರಸ್ತುತ, ಶಿಕ್ಷಣದ ಹಣದುಬ್ಬರ ಹೆಚ್ಚಿದೆ. ಇದು ಭವಿಷ್ಯದಲ್ಲಿ ಇನ್ನೂ ಹೆಚ್ಚಳವಾಗಬಹುದು. ನೀವು ಹೂಡಿಕೆ ಮಾಡಿದ ಹಣ ಶಿಕ್ಷಣದ ಹಣದುಬ್ಬರವನ್ನು ಮೀರಿ ಪ್ರಯೋಜನ ನೀಡುವಂತಿರಲಿ.