ಹೈದರಾಬಾದ್: ಹಿಂಡನ್ ಬರ್ಗ್ ವರದಿ ಬಳಿಕ ದೇಶದ ಶ್ರೀಮಂತ ಉದ್ಯಮಿ ಅದಾನಿ ಒಡೆತನ ಸಂಪತ್ತಿನಲ್ಲಿ ಕುಸಿತ ಕಂಡಿದೆ. ಕಳೆದ ಐದು ವಹಿವಾಟು ಅವಧಿಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಲ್ಲಿ ಇಳಿಕೆ ಕಂಡಿದೆ. ಅವರ ಸಂಪತ್ತಿನ ಮಾರುಕಟ್ಟೆ ಬಂಡವಾಳೀಕರಣದ ರೂ. 7 ಲಕ್ಷ ಕೋಟಿಗಿಂತ ಹೆಚ್ಚು ನಷ್ಟವನ್ನು ಕಂಡಿದೆ. ಬುಧವಾರ ಷೇರು ಮಾರುಕಟ್ಟೆ ಅಂತ್ಯದ ಹೊತ್ತಿಗೆ ಅದಾನಿ ಸಮೂಹ ಸಂಸ್ಥೆಯ ಎಲ್ಲಾ ಷೇರುಗಳು ಕಡಿಮೆ ಮೌಲ್ಯಗಳನ್ನು ಹೊಂದಿರುವ ಮೂಲಕ ನಕಾರಾತ್ಮಕ ಪರಿಣಾಮ ಕಂಡಿವೆ. ಅದಾನಿ ಎಂಟರ್ಪ್ರೈಸಸ್ನ ಷೇರುಗಳು ಸಾಕಷ್ಟು ನಷ್ಟ ಅನುಭವಿಸಿವೆ. ಬಿಎಸ್‌ಇಯಲ್ಲಿ ಶೇ.28.45ರಷ್ಟು ಕುಸಿತ ಕಾಣುವ ಮೂಲಕ 2,128.70 ರೂ.ಗೆ ಅಂತ್ಯ ಕಂಡಿದೆ.
ಎಫ್ಪಿಒ ಹಿಂಪಡೆತ: ಅದಾನಿ ಎಂಟರ್ಪ್ರೈಸಸ್ ಷೇರು ವಿಕ್ರಯ ರದ್ದು (ಎಫ್ಪಿಒ) ಅನ್ನು 20,000 ಕೋಟಿಯನ್ನು ಮಂಗಳವಾರ ಆಫರ್ ಮಾಡಿದ್ದ ಚಂದಾದಾರಿಕೆಯನ್ನು ಬುಧವಾರ ರಾತ್ರಿ ಸಂಪೂರ್ಣವಾಗಿ ಹಿಂಪಡೆದಿದೆ. ಚಿಲ್ಲರೆ ಮಾರಾಟಗಾರರಲ್ಲದ ಹೂಡಿಕೆದಾರರು ಬಿಡ್ ಮಾಡುವ ಮೂಲಕ ಚಂದಾದಾರಿಕೆ ನಡೆಯಿತು. ಜನವರಿ 24ರಿಂದ ಎಫ್ಪಿಒ ಹೂಡಿಕೆ ಆರಂಭವಾಗಿತ್ತು. ಆದ್ರೆ ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿ ಕುಸಿತ ಕಾಣಲಾರಂಭಿಸಿದೆ.
ಗ್ರೂಪ್ ಷೇರು ಕುಸಿತ: ಅದಾನಿ ಪೋರ್ಟ್ ಮತ್ತು ವಿಶೇಷ ಆರ್ಥಿಕ ವಲಯ ಶೇ 19.69ಕ್ಕೆ ಕುಸಿತ ಕಂಡರೆ, ಅಂಬುಜಾ ಸಿಮೆಂಟ್ ಶೇ 16.56ರಷ್ಟು ಮತ್ತು ಎಸಿಸಿ ಸಿಮೆಂಟ್ ಶೇ 6.34ರಷ್ಟು, ಅದಾನಿ ಟೋಟಲ್ ಗ್ಯಾ ಶೇ 10ರಷ್ಟು ಇಳಿಕೆ ಕಂಡಿತು. ಜೊತೆಗೆ ಅದಾನಿ ಗ್ರೀನ್ ಎನರ್ಜಿ 5.78ರಷ್ಟು, ಅದಾನಿ ವಿಲ್ಮರ್ 4.99ರಷ್ಟು, ಎನ್ಡಿಟಿವಿ ಶೇ 4.98 ರಷ್ಟು, ಅದಾನಿ ಪವರ್ ಶೇ 4. 98ರಷ್ಟು ಮತ್ತು ಅದಾನಿ ಟ್ರಾನ್ಸ್ಮಿಷನ್ ಶೇ 2.46ರಷ್ಟು ಇಳಿಕೆ ಕಂಡಿದೆ.
ಶೇ 38ರಷ್ಟು ಇಳಿಕೆ: ಅದಾನಿ ಸಮೂಹ ಸಂಸ್ಥೆಗಳ ಕುರಿತು ಹಿಂಡನ್ಬರ್ಗ್ ಸಂಶೋಧನಾ ವರದಿ ಪ್ರಕಟವಾದ ಬಳಿಕ ಜನವರಿ 24ರ ಮಾರುಕಟ್ಟೆ ವಹಿವಾಟಿನಲ್ಲಿ ಶೇ 38ರಷ್ಟು ಕುಸಿತ ಕಂಡಿದೆ. ದಿ ಅದಾನಿ ಗ್ರೂಪ್ ಸ್ಟಾಫ್ ಅಂಬುಜಾ, ಎಸಿಸಿ ಮತ್ತು ಎನ್ಡಿಟಿವಿ ಸೇರಿದಂತೆ ಒಟ್ಟಾರೆ 7 ಲಕ್ಷ ಕೋಟಿ ಅಂದರೆ ಸರಿ ಸುಮಾರು ಶೇ 38ರಷ್ಟು ಪ್ರಮಾಣದ ನಷ್ಟವನ್ನು ಕಳೆದ ಐದು ವಾಹಿವಾಟಿನಲ್ಲಿ ಕಂಡಿದೆ ಎಂದು ಪಿಟಿಐ ಸ್ಟೊಕ್ಸ್ಬಾಕ್ಸ್ ಸಂಶೋಧನಾ ಮುಖ್ಯಸ್ಥ ಮನಿಷ್ ಚೌಧರಿ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.
ನಿನ್ನೆ ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ಯಶಸ್ವಿಯಾಗಿ ಮುಚ್ಚಿದ ವೇಳೆ ಹೂಡಿಕೆದಾರರು ಕೊಂಚ ಉಸಿರಾಡಬಹುದು ಎಂಬ ಭರವಸೆ ಹೊಂದಿದ್ದರು. ಆದರೆ, ಕ್ರೆಡಿಟ್ ಸೂಯಿಸ್ ತನ್ನ ಖಾಸಗಿ ಬ್ಯಾಂಕಿಂಗ್ ಕ್ಲೈಂಟ್‌ಗಳಿಗೆ ಮಾರ್ಜಿನ್ ಲೋನ್‌ಗಳಿಗಾಗಿ ಅದಾನಿ ಗುಂಪಿನ ಬಾಂಡ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಎಂಬ ಮಾಹಿತಿ ಹೂಡಿಕೆದಾರರಿಗೆ ಶಾಕ್ ಮೂಡಿಸಿತು. ಗ್ರೂಪ್ ಸಂಬಂಧ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಕಂಪನಿಯ ವಾಹಿವಾಟು ಯಥಾಸ್ಥಿತಿ ಕಾಪಾಡಿಕೊಳ್ಳುವವರೆಗೆ ಇದರಿಂದ ದೂರ ಇರುವುದು ಉತ್ತಮ ಎಂಬುದಾಗಿ ಮನಿಷ್ ತಿಳಿಸಿದ್ದಾರೆ.
ಅದಾನಿ ಸಂಸ್ಥೆ ಮೇಲೆ ಹಿಂಡನ್ಬರ್ಗ್ ಗಂಭೀರ ಆರೋಪದ ವರದಿ ಬಳಿಕ ಅದಾನಿ ಸಂಸ್ಥೆಯ ಷೇರುಗಳು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗೌತಮ್ ಅದಾನಿ ಒಡೆತನದ ಸಂಸ್ಥೆಯು ತಮ್ಮ ಷೇರುಗಳಲ್ಲಿ ಉದ್ದೇಶ ಪೂರ್ವಕವಾಗಿ ದರ ಏರಿಳಿತ ಮತ್ತು ಕೃತಕ ವ್ಯವಹಾರ ನಡೆಸಿದೆ ಎಂದು ಹಿಂಡನ್ಬರ್ಗ್ ಆರೋಪಿಸಿತ್ತು. ಆದರೆ, ಅದಾನಿ ಸಂಸ್ಥೆ ಈ ಆರೋಪವನ್ನು ಸುಳ್ಳು ಎಂದು ತಳ್ಳಿ ಹಾಕಿದ್ದು, ತಮ್ಮ ಸಂಸ್ಥೆ ಕಾನೂನು ಬದ್ಧವಾಗಿ ಕಾರ್ಯ ನಿರ್ವಹಿಸಿದೆ ಎಂದಿದೆ. ಅಲ್ಲದೆ, ಹಿಂಡನ್ ಬರ್ಗ್ ವರದಿ ಆಧಾರರಹಿತವಾಗಿದೆ ಎಂದಿದೆ.
ಇದನ್ನೂ ಓದಿ: ಷೇರುಗಳ ಏರಿಳಿತ, ಅದಾನಿ ಎಫ್ಪಿಒ ರದ್ದು: ಹೂಡಿಕೆದಾರರಿಗೆ ₹20 ಸಾವಿರ ಕೋಟಿ ವಾಪಸ್