ಹೈದರಾಬಾದ್:ಕ್ರೆಡಿಟ್ ಸ್ಕೋರ್ ಎಂಬುದು ನಿಮ್ಮ ಮೂಲ ಹಣಕಾಸು ವಿಶ್ವಾಸಾರ್ಹತೆಯ ಪ್ರೊಫೈಲ್ ಅನ್ನು ತೋರಿಸುತ್ತದೆ. ಹೊಸ ಸಾಲ ಪಡೆಯಲು ನಿಮ್ಮ ಅರ್ಹತೆಯನ್ನು ಮಾತ್ರವಲ್ಲದೇ ನೀವು ಎಷ್ಟು ಆರ್ಥಿಕವಾಗಿ ಶಿಸ್ತುಬದ್ಧರಾಗಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ ಸಾಲಗಳ ಇಎಂಐಗಳನ್ನು (ಸಮಾನ ಮಾಸಿಕ ಕಂತುಗಳು) ನೀವು ಸರಿಯಾಗಿ ಪಾವತಿಸುತ್ತಿದ್ದೀರಾ ಅಥವಾ ಇಲ್ಲ ಎಂಬುದನ್ನು ಕೂಡ ಇದು ಹೇಳುತ್ತದೆ.
ಇನ್ನು ನೀವು ಸಾಲ ಪಡೆಯಲು ಅರ್ಹರಾಗಿದ್ದೀರಾ ಎಂಬುದನ್ನು ಸೇರಿದಂತೆ ನಿಮ್ಮ ಈ ಎಲ್ಲ ವಿವರಗಳನ್ನು ಕ್ರೆಡಿಟ್ ವರದಿಯಲ್ಲಿ ಪಡೆಯಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಎಲ್ಲ ಹಣಕಾಸು ವ್ಯವಹಾರಗಳನ್ನು ಬಹಿರಂಗಪಡಿಸುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಅದನ್ನು ಸುಧಾರಿಸಲು ಅತ್ಯಂತ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಪರಿಹಾರ ಕ್ರಮಗಳನ್ನು ನೀವು ಅನುಸರಿಸಬೇಕಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಸಾಲವನ್ನು ತೆಗೆದುಕೊಳ್ಳುವ ನಿಮ್ಮ ಅರ್ಹತೆ ಮಾತ್ರವಲ್ಲದೇ ನಿಮ್ಮ ಒಟ್ಟಾರೆ ಆರ್ಥಿಕ ಶಿಸ್ತನ್ನೂ ಸೂಚಿಸುತ್ತದೆ. ಹೊಸ ಸಾಲವನ್ನು ತೆಗೆದುಕೊಳ್ಳುವಾಗ, ಸಾಲದಾತರು ನಿಮ್ಮ CIBIL (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್) ಸ್ಕೋರ್ ಅನ್ನು ನೋಡುತ್ತಾರೆ.
ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಿ:ನಿಮ್ಮ ಸಾಲದ ಅರ್ಜಿ ಅನುಮೋದಿಸಿದರೆ, ಸಂಬಂಧಿಸಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ನಿಮ್ಮ ಹಣಕಾಸಿನ ಪ್ರೊಫೈಲ್‌ನಲ್ಲಿ ನಂಬಿಕೆಯನ್ನು ಹೊಂದಿದೆ ಎಂದರ್ಥ. ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸುತ್ತಿದ್ದರೆ ನಿಮಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಹಬ್ಬಗಳ ಸಮಯದಲ್ಲಿ, ದೊಡ್ಡ ಮಟ್ಟದ ಖರೀದಿಗಳನ್ನು ಮಾಡಲು ನೀವು ಸಾಲ ತೆಗೆದುಕೊಂಡಿರಬಹುದು.
ಇದನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕು. ಮರುಪಾವತಿಯಲ್ಲಿ ಯಾವುದೇ ವಿಳಂಬದಿಂದ ಭವಿಷ್ಯದಲ್ಲಿ ಸಾಲ ತೆಗೆದುಕೊಳ್ಳಲು ನಿಮಗೆ ಕಷ್ಟವಾಗುತ್ತದೆ. ಸಾಲಗಳು ಮತ್ತು ಮರುಪಾವತಿಗಳೊಂದಿಗೆ ವ್ಯವಹರಿಸುವಾಗ ನೀವು ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಬಜೆಟ್‌ಗೆ ಅಂಟಿಕೊಳ್ಳಬೇಕು.
ಮೊದಲನೆಯದಾಗಿ, ಸಾಲ ಮರುಪಾವತಿಯಲ್ಲಿ ಯಾವುದೇ ಗೊಂದಲ ಇರಬಾರದು. EMIಗಳು ನಿಮ್ಮ ಆದಾಯದ 40 ಪ್ರತಿಶತಕ್ಕಿಂತ ಹೆಚ್ಚಿರಬಾರದು. ಇದರಿಂದ ಇಎಂಐಗಳನ್ನು ನಿಯಮಿತವಾಗಿ ಪಾವತಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಿಮ್ಮ EMI ಗಳ ಎರಡು ತಿಂಗಳಿಗೆ ಸಮನಾದ ಮೊತ್ತವನ್ನು ನೀವು ಬ್ಯಾಂಕ್‌ನಲ್ಲಿ ಇಟ್ಟಿರಬೇಕು. ಸಾಲದ ಕಂತುಗಳ ಪಾವತಿಯಲ್ಲಿ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.