ಕರ್ನಾಟಕ

karnataka

ETV Bharat / business

ಸೈಬರ್ ದಾಳಿಯಿಂದ ವಂಚನೆಗೊಳಗಾದ ವ್ಯಕ್ತಿ: ಪರಿಹಾರ ನೀಡುವಂತೆ ಎಸ್‌ಬಿಐಗೆ ಸೂಚಿಸಿದ ಗ್ರಾಹಕ ಆಯೋಗ

ಸೈಬರ್ ದಾಳಿಕೋರರನ್ನು ಪತ್ತೆಹಚ್ಚುವ ಬದಲು ಎಸ್​ಬಿಐ ಅದನ್ನು ನಿರ್ಲಕ್ಷಿಸಿದೆ. ಎಸ್‌ಬಿಐನ ಕಡೆಯಿಂದ ಸರಿಯಾದ ಕಣ್ಗಾವಲು ಇಲ್ಲದಿರುವುದೇ ವಂಚನೆಗೆ ಕಾರಣ ಎಂದು ಆಯೋಗ ಹೇಳುವ ಮೂಲಕ, ವಂಚನೆಗೊಳಗಾದ ವ್ಯಕ್ತಿಗೆ ಪರಿಹಾರ ನೀಡುವಂತೆ ಎಸ್‌ಬಿಐಗೆ ಗ್ರಾಹಕರ ಆಯೋಗ ಸೂಚಿಸಿದೆ.

ಪರಿಹಾರ ನೀಡುವಂತೆ ಎಸ್‌ಬಿಐಗೆ ಸೂಚಿಸಿದ ಗ್ರಾಹಕ ಆಯೋಗ
ಪರಿಹಾರ ನೀಡುವಂತೆ ಎಸ್‌ಬಿಐಗೆ ಸೂಚಿಸಿದ ಗ್ರಾಹಕ ಆಯೋಗ

By

Published : May 18, 2022, 5:31 PM IST

ಹೈದರಾಬಾದ್(ತೆಲಂಗಾಣ)​: ಒಂಬತ್ತು ವರ್ಷಗಳ ಹಿಂದೆ ಸೈಬರ್ ದಾಳಿಯಿಂದ ವಂಚನೆಗೊಳಗಾದ ಗ್ರಾಹಕನಿಗೆ ಬಡ್ಡಿಯೊಂದಿಗೆ 1.46 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧಿಕಾರಿಗಳಿಗೆ ತೆಲಂಗಾಣ ಗ್ರಾಹಕರ ಆಯೋಗವು ಸೂಚಿಸಿದೆ. ಸೈಬರಾಬಾದ್‌ನ ಚೆರ್ಲಪಲ್ಲಿ ನಿವಾಸಿಯಾಗಿರುವ ಸಂತ್ರಸ್ತ ಎಂ.ಕೆ. ಮಿಶ್ರಾ 2013ರಲ್ಲಿ ಎಸ್‌ಬಿಐನಿಂದ 3 ಲಕ್ಷ ರೂಪಾಯಿ ವೈಯಕ್ತಿಕ ಸಾಲ ಮತ್ತು ಬ್ಯಾಂಕ್‌ನಿಂದ ಡೆಬಿಟ್ ಕಾರ್ಡ್ ಪಡೆದಿದ್ದರು.

2013ರ ಮೇ. 5-7ರ ನಡುವೆ ಸೈಬರ್‌ ದಾಳಿಕೋರರು ಮಿಶ್ರಾ ಅವರ ಡೆಬಿಟ್‌ ಕಾರ್ಡ್‌ ಮೂಲಕ 1.46 ರೂ.ಗಳನ್ನು ಲಪಟಾಯಿಸಿದ್ದರು ಎಂದು ತಿಳಿದು ಬಂದಿದೆ. ಬಳಿಕ ಮಿಶ್ರಾ ಅವರು ಎಸ್‌ಬಿಐ ಅಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದ್ದಾರೆ. ಆದ್ರೆ ಅದಕ್ಕೆ ಅಧಿಕಾರಿಗಳು ಸ್ಪಂದಿಸದ ಕಾರಣ ಜಿಲ್ಲಾ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು. ಆಗ ಮಿಶ್ರಾ ಅವರಿಗೆ ಬಡ್ಡಿ ಸಹಿತ ಮೊತ್ತವನ್ನು ಎಸ್‌ಬಿಐ ಪಾವತಿಸಬೇಕು ಎಂದು ವೇದಿಕೆ ಆದೇಶಿಸಿತ್ತು.

ಇದನ್ನೂ ಓದಿ:ರಾಜ್ಯದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ..

ಆದರೆ, ಈ ತೀರ್ಪಿನ ವಿರುದ್ಧ ಎಸ್‌ಬಿಐ ಅಧಿಕಾರಿಗಳು ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಎಸ್‌ಬಿಐ ಅರ್ಜಿಯನ್ನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಂಎಸ್‌ಕೆ ಜೈಸ್ವಾಲ್, ಸದಸ್ಯರಾದ ಮೀನಾ ರಾಮನಾಥನ್ ಮತ್ತು ಕೆ ರಂಗ ರಾವ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ. ಅಲ್ಲದೇ 2013 ರಿಂದ 9 ಪ್ರತಿಶತ ಬಡ್ಡಿಯಲ್ಲಿ ದೂರುದಾರರಿಗೆ ರೂ. 1.46 ಲಕ್ಷ ಪಾವತಿಸುವಂತೆ ಬ್ಯಾಂಕ್​ಗೆ ಸೂಚಿಸಲಾಗಿದೆ.

ABOUT THE AUTHOR

...view details