ಕರ್ನಾಟಕ

karnataka

ETV Bharat / business

ಆರ್​ಬಿಐನಿಂದ ರೆಪೊ ದರ ಹೆಚ್ಚಳ ಹಿನ್ನೆಲೆ: ಸಾಲದ ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್​ಗಳು

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ರೆಪೊ ದರದಲ್ಲಿ 40 ಬೇಸಿಸ್ ಪಾಯಿಂಟ್‌ ಹೆಚ್ಚಳ ಮಾಡಿದ ಹಿನ್ನೆಲೆ ಬುಧವಾರ, ಸಾಲ ನೀಡುವ ಪ್ರಮುಖ ಎಚ್‌ಡಿಎಫ್‌ಸಿ ಮತ್ತು ಪಿಎನ್‌ಬಿ ಬ್ಯಾಂಕ್ ತಮ್ಮ ಸಾಲದ ದರಗಳನ್ನು ಕ್ರಮವಾಗಿ 5 ಬೇಸಿಸ್ ಪಾಯಿಂಟ್‌ಗಳು ಮತ್ತು 15 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿವೆ.

ಆರ್​ಬಿಐನಿಂದ ರೆಪೊ ದರ ಹೆಚ್ಚಳ
ಆರ್​ಬಿಐನಿಂದ ರೆಪೊ ದರ ಹೆಚ್ಚಳ

By

Published : Jun 2, 2022, 8:07 PM IST

ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತ್ತು. ಇದರ ಬೆನ್ನಲೇ ಬುಧವಾರ, ಸಾಲ ನೀಡುವ ಪ್ರಮುಖ ಬ್ಯಾಂಕ್​ಗಳಾದ ಎಚ್‌ಡಿಎಫ್‌ಸಿ ಮತ್ತು ಪಿಎನ್‌ಬಿ ತಮ್ಮ ಸಾಲದ ದರವನ್ನು ಕ್ರಮವಾಗಿ 5 ಬೇಸಿಸ್ ಪಾಯಿಂಟ್‌ ಮತ್ತು 15 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿವೆ.

ಸಾಲದ ದರದಲ್ಲಿ ಹೆಚ್ಚಳ ಮಾಡಿದ ಪರಿಣಾಮ, EMI ಕಟ್ಟುವವರ ಹಣ ಸಹ ಹೆಚ್ಚಳವಾಗಲಿದೆ. ಇತ್ತೀಚೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಬ್ಯಾಂಕ್ ಆಫ್ ಬರೋಡಾ ಕೂಡ ತಮ್ಮ ಸಾಲದ ದರಗಳನ್ನು ವಿವಿಧ ಅವಧಿಗಳಲ್ಲಿ ಹೆಚ್ಚಿಸಿವೆ ಎಂದು ವರದಿಗಳು ತಿಳಿಸಿವೆ. ಅದೇ ಸಮಯದಲ್ಲಿ, ಉಕ್ಕಿನ ಉದ್ಯಮವು ಬಳಸುವ ಕೋಕಿಂಗ್ ಕಲ್ಲಿದ್ದಲು ಮತ್ತು ಫೆರೋನಿಕಲ್ ಸೇರಿದಂತೆ ಕೆಲವು ಕಚ್ಚಾ ವಸ್ತುಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಸರ್ಕಾರ ಮನ್ನಾ ಮಾಡಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸ್ಟೀಲ್ ಪ್ರಮುಖ ಇನ್ಪುಟ್ ಆಗಿದೆ.

ಗೃಹ ಸಾಲದ ಮೇಲಿನ ಬಡ್ಡಿ ದರದಲ್ಲಿ ಶೇ.1 ರಷ್ಟು ಹೆಚ್ಚಳ ಮಾಡಿದ ಪರಿಣಾಮ, ಮನೆ ಖರೀದಿ ಮಾಡುವ ಸಾಮರ್ಥ್ಯವನ್ನು ಶೇಕಡಾ 7.4 ರಷ್ಟು ಕಡಿಮೆ ಮಾಡುತ್ತದೆ. ಪ್ರಸ್ತುತ ಹಂತದಲ್ಲಿ, ಬಲವಾದ ಆದಾಯದ ಬೆಳವಣಿಗೆಯು ಮನೆ ಖರೀದಿದಾರರ ಕೈಗೆಟುಕುವಿಕೆ ಬೆಂಬಲಿಸುತ್ತದೆ. ಹೀರೋ ರಿಯಾಲ್ಟಿಯ ಸಿಇಒ ಧರ್ಮೇಶ್ ಶಾ ಪ್ರಕಾರ, ಹೋಮ್ ವಿಭಾಗದಲ್ಲಿ ಚಿಲ್ಲರೆ ಖರೀದಿದಾರರು ಸಾಂಕ್ರಾಮಿಕದ ನಂತರ ನಂಬಲಾಗದಷ್ಟು ಏರಿಕೆ ಕಂಡಿದ್ದಾರಂತೆ.

ಇದನ್ನೂ ಓದಿ:ಇಂಡಿಗೋ, ಸ್ಪೈಸ್​ ಜೆಟ್​ ಬೆನ್ನಲ್ಲೇ ಇದೀಗ ಏರ್​ ವಿಸ್ತಾರಾಗೂ 10 ಲಕ್ಷ ರೂ ದಂಡ ವಿಧಿಸಿದ ಡಿಜಿಸಿಎ

ರಿಯಲ್ ಎಸ್ಟೇಟ್ ಕ್ಷೇತ್ರವು ಈಗಷ್ಟೇ ಚೇತರಿಕೆ ಕಾಣಲು ಪ್ರಾರಂಭಿಸಿದೆ. ಈ ಸಮಯದಲ್ಲಿ, ಗೃಹ ಸಾಲದ ಬಡ್ಡಿದರಗಳಲ್ಲಿನ ಹೆಚ್ಚಳವು ಅತ್ಯಲ್ಪವಾಗಿದ್ದರೂ ಖರೀದಿದಾರರಿಗೆ ಮಾನಸಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇನ್‌ಪುಟ್ ವೆಚ್ಚಗಳ ಹೆಚ್ಚಳದೊಂದಿಗೆ ಡೆವಲಪರ್‌ಗಳು ಬೆಲೆಗಳನ್ನು ಹೆಚ್ಚಿಸುವಂತೆ ಮಾಡಲಾಗುತ್ತಿದೆ. ಇದು ಖರೀದಿದಾರರ ಉತ್ಸಾಹವನ್ನು ಕುಗ್ಗುವಂತೆ ಮಾಡಿದೆ. ವಿಶೇಷವಾಗಿ ಕೈಗೆಟುಕುವ ದರದಲ್ಲಿ ಮನೆಗಳನ್ನು ಹುಡುಕುವಂತೆ ಮಾಡುತ್ತದೆ ಎಂದು ಎಸ್‌ಕೆಎ ಗ್ರೂಪ್ ನಿರ್ದೇಶಕರಾದ ಸಂಜಯ್ ಶರ್ಮಾ ಹೇಳುತ್ತಾರೆ.


ABOUT THE AUTHOR

...view details