'ನಾಳೆ ನಿಮಗೆ ಸಂದರ್ಶನ ಇರುತ್ತದೆ. 9 ಗಂಟೆಗೆ ನಾವು ಹೇಳುವ ವಿಳಾಸಕ್ಕೆ ಬಂದುಬಿಡಿ'.. ಈ ಕರೆ ನಿಮ್ಮ ಮನಸ್ಸನ್ನು ಒಂದು ರೀತಿಯ ಚಿಂತೆಗೆ ದೂಡಿಬಿಡುತ್ತದೆ. 'ನಾನೇ ಇಷ್ಟಪಟ್ಟು ಇದೇ ಕಂಪನಿಯಲ್ಲಿ ಕೆಲಸ ಸಿಗಲಿ ಎಂದು ರೆಸ್ಯೂಮ್ ಕಳುಹಿಸಿದ್ದೆ. ಅದರಂತೆ ಅವಕಾಶವು ನನ್ನ ಬಳಿಯೇ ಬಂದಿದೆ. ಆದರೆ ಇಂಟರ್ವ್ಯೂ ಹೇಗೆ ಎದುರಿಸಲಿ?' ಎಂಬ ಆತಂಕ ಈ ವೇಳೆ ನಿಮ್ಮ ಮನಸ್ಸನ್ನು ಆವರಿಸಿಕೊಂಡು ಬಿಡುತ್ತದೆ. ಒಳಗೊಳಗೆ ಏನೋ ಒಂದು ರೀತಿಯ ತಳಮಳ ಶುರುವಾಗಿ ಬಿಡುತ್ತದೆ.
ಕೆಲವೊಮ್ಮೆ ಈ ಟೆನ್ಷನ್ನಿಂದ ಇಂಟರ್ವ್ಯೂನಲ್ಲಿ ಗೊತ್ತಿದ್ದ ಉತ್ತರಗಳು ತಪ್ಪಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದರಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ' ಎಂಬ ಬೇಸರ ಅವರನ್ನು ಆವರಿಸಿ ಬಿಡುತ್ತದೆ. ಹೀಗಾಗಿ ನೀವು ಇಂಟರ್ವ್ಯೂಗೆ ತೆರಳುವಾಗ ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗಬೇಡಿ. ಭಯ ಇಲ್ಲದೇ ಧೈರ್ಯದಿಂದ ಇಂಟರ್ವ್ಯೂ ಫೇಸ್ ಮಾಡಿ. ನಿಮ್ಮ ಭಯ, ಆತಂಕವನ್ನು ತೊಡೆದು ಹಾಕಲು ಈ ಕೆಳಗಿನ ಸರಳ ವಿಧಾನಗಳನ್ನು ಜೀವನದಲ್ಲಿ ಅನುಸರಿಸಿ.
ಸಲಹೆಗಳೇನು?: *ಸಂದರ್ಶನಕ್ಕೆ ಹೋಗುವ ಮುನ್ನ ಅಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಊಹಿಸಿ. ಅದಕ್ಕೆ ತಕ್ಕಂತೆ ನಿಮ್ಮ ಉತ್ತರಗಳನ್ನು ಸಿದ್ಧಪಡಿಸಿಕೊಳ್ಳಿ. ನಂತರ ನೀವು ಹೋಗುತ್ತಿರುವ ಕಂಪನಿ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಅಲ್ಲಿ ಕೆಲಸ ಮಾಡುವ ಯಾರೊಂದಿಗಾದರೂ ಮಾತನಾಡಿ. ನಿಮಗೆ ಏನಾದರೂ ಅನುಮಾನಗಳಿದ್ದರೆ ಅವರಲ್ಲಿ ಕೇಳಿ ಬಗೆಹರಿಸಿಕೊಳ್ಳಿ. ಮುಂಚಿತವಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಂಡಿದ್ದರೆ, ಯಾವುದೇ ಭಯವಿರುವುದಿಲ್ಲ.
ಇದನ್ನೂ ಓದಿ:ಎಐ ಕೌಶಲದಿಂದ ವೃತ್ತಿಜೀವನದಲ್ಲಿ ಏಳಿಗೆ: ಯುವ ಉದ್ಯೋಗಿಗಳ ಅಭಿಪ್ರಾಯ