ವಾಷಿಂಗ್ಟನ್(ಅಮೆರಿಕ):ಇ- ಕಾಮರ್ಸ್ನ ಬೃಹತ್ ಕಂಪನಿಯಾಗಿರುವ ಅಮೆಜಾನ್ ಭಾರತದಲ್ಲಿ 15 ಶತಕೋಟಿ ಡಾಲರ್‌ಗಳಷ್ಟು ಹೆಚ್ಚು ಹೂಡಿಕೆ ಮಾಡಲು ಯೋಜಿಸಿದೆ, ದೇಶದಲ್ಲಿ ಅದರ ಒಟ್ಟು ಹೂಡಿಕೆಯನ್ನು 26 ಶತಕೋಟಿ ಡಾಲರ್‌ಗೆ ಏರಿಸಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಅಮೆಜಾನ್ ಸಿಇಒ ಆಂಡಿ ಜಾಸ್ಸಿ, ಕಂಪನಿಯು ಈಗಾಗಲೇ ಭಾರತದಲ್ಲಿ 11 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಮೋದಿ ಭೇಟಿ ಬಳಿಕ ಈ ಕುರಿತು ತಿಳಿಸಿರುವ ಸಿಇಒ ಆಂಡಿ ಜಾಸ್ಸಿ, ನಾನು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಮತ್ತು ಫಲಪ್ರದವಾದ ಸಂಭಾಷಣೆಯನ್ನು ನಡೆಸಿದ್ದೇನೆ. ನಾವು ಹಲವಾರು ಗುರಿಗಳನ್ನು ಹಂಚಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ. ಅಮೆಜಾನ್ ಭಾರತದ ಅತಿದೊಡ್ಡ ಹೂಡಿಕೆದಾರರಲ್ಲಿ ಒಂದಾಗಿದೆ. ನಾವು ಇಲ್ಲಿಯವರೆಗೆ USD 11 ಶತಕೋಟಿ ಹೂಡಿಕೆ ಮಾಡಿದ್ದೇವೆ ಮತ್ತು ಮತ್ತೊಂದು USD 15 ಶತಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದ್ದೇವೆ. ಇದು ಒಟ್ಟು USD 26 ಶತಕೋಟಿ ಆಗಲಿದೆ. ಆದ್ದರಿಂದ ಪಾಲುದಾರಿಕೆಯ ಭವಿಷ್ಯಕ್ಕಾಗಿ ನಾವು ತುಂಬಾ ಎದುರು ನೋಡುತ್ತಿದ್ದೇವೆ ”ಎಂದು ಜಾಸ್ಸಿ ಶುಕ್ರವಾರ ಹೇಳಿದರು.
ಪ್ರಧಾನ ಮಂತ್ರಿ ಅಮೆಜಾನ್ ಅಧ್ಯಕ್ಷ ಮತ್ತು ಸಿಇಒ ಅವರೊಂದಿಗೆ ಉತ್ಪಾದಕ ಸಭೆ ನಡೆಸಿದರು. ಇ - ಕಾಮರ್ಸ್ ಕ್ಷೇತ್ರದ ಬಗ್ಗೆ ಮತ್ತು ಭಾರತದಲ್ಲಿ ಲಾಜಿಸ್ಟಿಕ್ಸ್ ವಲಯದಲ್ಲಿ ಅಮೆಜಾನ್ ಜೊತೆಗೆ ಮತ್ತಷ್ಟು ಸಹಯೋಗದ ಸಾಮರ್ಥ್ಯದ ಕುರಿತು ಹೆಚ್ಚು ಪ್ರಾಮುಖ್ಯತೆ ವಹಿಸಿ ಚರ್ಚಿಸಲಾಯಿತು ಎಂದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿವೆ. ಭಾರತದಲ್ಲಿ ಎಂಎಸ್‌ಎಂಇಗಳ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ) ಡಿಜಿಟಲೀಕರಣವನ್ನು ಉತ್ತೇಜಿಸುವ ಅಮೆಜಾನ್‌ನ ಉಪಕ್ರಮವನ್ನು ಮೋದಿ ಸ್ವಾಗತಿಸಿದರು.