ಕಿಚಡಿ... ಎಂದಾಕ್ಷಣ ಅದೊಂದು ಬಗೆಯ ಆಹಾರ ಎಂಬುದು ನಮ್ಮ ಕಲ್ಪನೆ. ಆದರೆ, ಇದು ಅಭಾ ವಿಷಯದಲ್ಲಿ ಅಲ್ಲ. ಕಾರಣ ಅಭಾಗೆ ಕಿಚಡಿ ಎಂದರೆ ನೆನಪು ಮತ್ತು ಸ್ನೇಹಿತರು. ಇದೇ ಕಾರಣಕ್ಕೆ ಈಕೆ ಈ ಕಿಚಡಿಯಲ್ಲಿ ಪ್ರಯೋಗಕ್ಕೆ ಇಳಿದರು. ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸಿ ಎಲ್ಲರಿಂದ ಮೆಚ್ಚುಗೆ ಪಡೆದರು. ಇದೀಗ ಇದೇ ಕಿಚಡಿ ಉದ್ಯಮದಿಂದ ಮಲ್ಟಿ ಮಿಲಿನಿಯೇರ್ ಉದ್ಯಮಿಯಾಗಿ ಬೆಳೆದಿದ್ದಾರೆ. ದೇಶಿಯ ಜೊತೆಗೆ ವಿದೇಶಿ ರುಚಿಯನ್ನು ಬೆರಸಿರುವ ಇವರ ಕಥೆ ಎಲ್ಲರಿಗೂ ಸ್ಪೂರ್ತಿ ನೀಡುವುದು ಸುಳ್ಳಲ್ಲ.
ತಾಯಿಯ ಕೈ ರುಚಿಯ ಮ್ಯಾಜಿಂಗ್ಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಇಂತಹ ರುಚಿಯನ್ನು ಜೋಪಾನ ಮಾಡುವ ಪ್ರಯತ್ನವನ್ನು ಅಭಾ ಸಿಂಗಲ್ ಮಾಡಿದ್ದಾರೆ. ಮುಂಬೈ ಮೂಲದ ಇವರು 12 ವರ್ಷಗಳ ಕಾಲ ಪೋಷಕರಿಂದ ದೂರಾಗಿ ಹಾಸ್ಟೆಲ್ ಮತ್ತು ಬೋರ್ಡಿಂಗ್ ಶಾಲೆಯಲ್ಲಿ ಕಲಿತರು. ಈ ವೇಳೆ ಹಣಕಾಸಿನ ಮುಗಟ್ಟನ್ನು ಕಂಡ ಇವರು ಮುಂದಿನ ವಿದ್ಯಾಭ್ಯಾಸಕ್ಕೆ ಸ್ಕಾಲರ್ಶಿಪ್ ಪಡೆದರು.
ಹೊಟ್ಟೆ ಪಾಡಿಗೆ ಕಂಡು ಕೊಂಡ ಪ್ರಯೋಗ: ಲಂಡನ್ನಲ್ಲಿ ಎಂಬಿಎ ಮಾಡುವಾಗ ತಮ್ಮ ಖರ್ಚಿಗೆ ಪಾರ್ಟ್ ಟೈಮ್ ಕೆಲಸವನ್ನು ಮಾಡುವ ಮೂಲಕ ತಮ್ಮ ಹಣಕಾಸಿನ ಹೊರೆ ಕಡಿಮೆ ಮಾಡಿಕೊಳ್ಳಲು ಮುಂದಾದರು. ಈ ವೇಳೆ, ತಾವೇ ಅಡುಗೆ ಮಾಡಲು ಮುಂದಾದರು. ಈ ವೇಳೆ ತಕ್ಷಣಕ್ಕೆ ತಮ್ಮಿಷ್ಟದ ಅಡುಗೆ ಮಾಡಬೇಕು ಎಂದಾಗ ಅವರಿಗೆ ನೆನಪಾಗುತ್ತಿದ್ದದ್ದು, ಕಿಚಡಿ. ಪ್ರತಿನಿತ್ಯ ಒಂದೇ ಬಗೆ ಕಿಚಡಿ ತಿನ್ನಲೂ ಆಗದೇ ಕಿಚಡಿಯಲ್ಲಿ ಅನೇಕ ಪ್ರಯೋಗವನ್ನು ನಡೆಸಿದರು. ಇದರಿಂದ ಕಿಚಡಿಯಲ್ಲಿ ಮಾಸ್ಟರ್ ಕೂಡ ಆದೆ ಎನ್ನುತ್ತಾರೆ ಅಭಾ
ಎಂಬಿಎ ಮುಗಿಸಿ ಮನೆಗೆ ಬಂದ ಅಭಾಗೆ ಕುಟುಂಬ ಮದುವೆ ಪ್ರಸ್ತಾಪವನ್ನು ಇರಿಸಿತು. ಈ ವೇಳೆ ಇದನ್ನು ತಿರಸ್ಕರಿಸಿದ ಆಕೆ ತಮ್ಮ ವೃತ್ತಿಯನ್ನು ಬದಲಾಯಿಸುವತ್ತ ಚಿಂತಿಸಿದರು. ಕುಟುಂಬದ ಮದುವೆ ಒತ್ತಡದ ಹಿನ್ನಲೆ ಮನೆಯನ್ನು ತೊರೆದರು. ಈ ವೇಳೆ, ಅವರ ಜೊತೆಗೆ ಇದ್ದದ್ದು, ನಾಲ್ಕು ಬಟ್ಟೆ ಮತ್ತು 5 ಸಾವಿರ ರೂ ಹಣ ಮಾತ್ರ. ಸ್ನೇಹಿತೆ ಜೊತೆಗೆ ಬಾಡಿಗೆ ರೂಂ ಹಂಚಿಕೊಂಡ ಅಭಾ ಕೆಲಸ ಗಿಟ್ಟಿಸುವಲ್ಲಿ ಸುಸ್ತಾದರು. ಈ ವೇಳೆ ಕೆಲವು ಕಾಲ ಮಾರ್ಕೆಟಿಂಗ್ ವೃತ್ತಿಯನ್ನು ನಿರ್ವಹಿಸಿದರು. ಜೀವನ ಹೀಗೆ ಸಾಗುತ್ತಿದ್ದಾಗ ಒಮ್ಮೆ ಅಚಾನಕ್ ಆಗಿ ಜಾಹೀರಾತು ನಿರ್ದೇಶಕರನ್ನು ಭೇಟಿಯಾದರು. ಮಾಡೆಲಿಂಗ್ಗೆ ಹೊಸವರಾದರೂ ಅದರಲ್ಲೂ ಒಂದು ಚಾನ್ಸ್ ನೋಡಿದರು. ಮಾಡೆಲಿಂಗ್ ವೃತ್ತಿಯಿಂದ ದಿನಕ್ಕೆ 40 ಸಾವಿರ ಗಳಿಸಲು ಆರಂಭಿಸಿದರು. ಮಾಡೆಲಿಂಗ್ ಜೊತೆಯಲ್ಲಿಯೇ ಕ್ಯಾಡ್ಬರಿ, ಸ್ಯಾಮ್ಸಂಗ್ನಂತಹ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದರು.
ಆ ಮಾತೇ ಉದ್ದಿಮೆಗೆ ಸ್ಪೂರ್ತಿ: ಉತ್ತಮ ಗಳಿಕೆ ಜೊತೆಗೆ ಪ್ರಶಂಸೆಯನ್ನು ಪಡೆಯುತ್ತಿದ್ದ ಅಭಾ ತಾನು ಇಷ್ಟ ಪಟ್ಟವರನ್ನು ಮದುವೆ ಕೂಡ ಆದರು. ಆದರೂ ಅವರ ಒಳಗೊಂದು ತುಡಿತ ಸದಾ ಕಾಡುತ್ತಲೇ ಇತ್ತು. ಒಂದು ದಿನ ಊಟವಾದ ಬಳಿಕ ಗಂಡ ನಿನ್ನ ಕಿಚಡಿ ಕೈ ರುಚಿ ಮತ್ತೆಲ್ಲೂ ಸಿಗದು ಎಂಬ ಮೆಚ್ಚುಗೆ ವ್ಯಕ್ತಪಡಿಸಿದರು.