ಕರ್ನಾಟಕ

karnataka

ETV Bharat / business

79 ಲಕ್ಷ ಡಿವೈಸ್​ ದಾಟಿದ Paytm; ಜೂನ್​ನಲ್ಲಿ 4 ಲಕ್ಷ ಹೊಸ ಡಿವೈಸ್​ - ಮರ್ಚ್ಂಟ್​ ಪೇಮೆಂಟ್​ ವಿಷಯದಲ್ಲಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಪೇಟಿಎಂ 79 ಲಕ್ಷ ಹೊಸ ಡಿವೈಸ್​ಗಳನ್ನು ನಿಯೋಜಿಸುವ ಮೂಲಕ ಉತ್ತಮ ವಹಿವಾಟು ನಡೆಸಿದೆ.

Paytm boosts merchant payments leadership
Paytm boosts merchant payments leadership

By

Published : Jul 5, 2023, 12:29 PM IST

ನವದೆಹಲಿ : ದೇಶದ ಪ್ರಮುಖ ಪೇಮೆಂಟ್ ಮತ್ತು ಹಣಕಾಸು ಸೇವೆಗಳ ಕಂಪನಿ Paytm 79 ಲಕ್ಷ ಹೊಸ ಡಿವೈಸ್​ಗಳನ್ನು ನಿಯೋಜಿಸುವ ಮೂಲಕ ಮರ್ಚ್ಂಟ್​ ಪೇಮೆಂಟ್​ ವಿಷಯದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ ಎಂದು ಬುಧವಾರ ಹೇಳಿದೆ. ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು ವ್ಯಾಪಾರದ ಮೌಲ್ಯ (gross merchandise value -GMV) 4.05 ಲಕ್ಷ ಕೋಟಿ ರೂ. ಆಗಿದ್ದು, ಇದು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 37ರಷ್ಟು ಬೆಳವಣಿಗೆಯಾಗಿದೆ.

ಪೇಮೆಂಟ್​ ವಿಷಯದಲ್ಲಿ ಮುನ್ನಡೆ ಸಾಧಿಸುತ್ತಿರುವ ಪೇಟಿಎಂನ ಚಂದಾದಾರಿಕೆ ಸಾಧನಗಳು, ಸೌಂಡ್‌ಬಾಕ್ಸ್ ಮತ್ತು PoS ಯಂತ್ರಗಳನ್ನು ಅಳವಡಿಸಿಕೊಳ್ಳಲು ವ್ಯಾಪಾರಿಗಳು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಮರ್ಚಂಟ್ ಪೇಮೆಂಟ್​ ವಿಭಾಗದಲ್ಲಿ ಕಂಪನಿಯು ಮಾರುಕಟ್ಟೆಯ ಮುಂಚೂಣಿ ಕಂಪನಿಯಾಗಿ ಮುಂದುವರಿದಿದೆ. ಕಂಪನಿಯ ಪೇಮೆಂಟ್ಸ್​ ಡಿವೈಸ್​ಗಳಿಗೆ ಚಂದಾದಾರಿಕೆಯನ್ನು ಪಾವತಿಸುವ ವ್ಯಾಪಾರಿಗಳ ಸಂಖ್ಯೆ ಜೂನ್ 2023 ಕ್ಕೆ 79 ಲಕ್ಷ ತಲುಪಿದೆ. ಒಂದು ತಿಂಗಳಲ್ಲಿ ಡಿವೈಸ್​ಗಳ ಸಂಖ್ಯೆ 4 ಲಕ್ಷದಷ್ಟು ಹೆಚ್ಚಾಗಿದೆ ಮತ್ತು ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ ಡಿವೈಸ್​ಗಳ ಸಂಖ್ಯೆ 11 ಲಕ್ಷದಷ್ಟು ಹೆಚ್ಚಳವಾಗಿದೆ.

ಪೇಟಿಎಂ ಸೂಪರ್ ಆ್ಯಪ್​​ ಅತ್ಯಧಿಕ ಗ್ರಾಹಕರನ್ನು ಹೊಂದಿದೆ. ಮಾಸಿಕವಾಗಿ ವಹಿವಾಟು ನಡೆಸುವ ಸರಾಸರಿ ಬಳಕೆದಾರರ ಸಂಖ್ಯೆ (MTU) 9.2 ಕೋಟಿಯಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇಕಡಾ 23 ರಷ್ಟು ಬೆಳವಣಿಗೆಯಾಗಿದೆ. "ಕಳೆದ ಕೆಲ ತ್ರೈಮಾಸಿಕಗಳಲ್ಲಿ ನಮ್ಮ ಗಮನವು ನಮಗೆ ಲಾಭದಾಯಕತೆಯನ್ನು ಉಂಟುಮಾಡುವ ನಿವ್ವಳ ಪಾವತಿಗಳ ಮಾರ್ಜಿನ್ ಮೂಲಕ ಅಥವಾ ನೇರ ಅಧಿಕ ಮಾರಾಟ ಸಾಮರ್ಥ್ಯದಿಂದ ಬರಬಹುದಾದ ಪಾವತಿಯ ಪರಿಮಾಣಗಳ ಮೇಲಿದೆ." ಎಂದು ಕಂಪನಿ ಹೇಳಿದೆ.

ದೊಡ್ಡ ಸಾಲದಾತರೊಂದಿಗೆ ಸಹಭಾಗಿತ್ವದ ಪೇಟಿಎಂ ಕ್ರೆಡಿಟ್ ವಿತರಣಾ ವ್ಯವಹಾರವು ತ್ರೈಮಾಸಿಕದಲ್ಲಿ ಒಟ್ಟು ವಿತರಣೆಗಳ ಆಧಾರದಲ್ಲಿ ದೃಢವಾದ ಬೆಳವಣಿಗೆಯನ್ನು ಕಂಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 167ರಷ್ಟು ಏರಿಕೆಯಾಗಿ 14,845 ಕೋಟಿ ರೂಪಾಯಿಗಳಿಗೆ (1.8 ಬಿಲಿಯನ್ ಡಾಲರ್) ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ 1.28 ಕೋಟಿ ಸಂಖ್ಯೆಯ ಸಾಲಗಳನ್ನು ವಿತರಿಸಲಾಗಿದೆ (ವರ್ಷದಿಂದ ವರ್ಷಕ್ಕೆ ಶೇಕಡಾ 51ರಷ್ಟು ಬೆಳವಣಿಗೆ).

ಪೇಟಿಎಂ ಪ್ರಸ್ತುತ ಏಳು ಸಕ್ರಿಯ ಸಾಲದಾತ ಕಂಪನಿಗಳೊಂದಿಗೆ ಸಹಯೋಗ ಹೊಂದಿದ್ದು, ಈ ಆರ್ಥಿಕ ವರ್ಷದಲ್ಲಿ ಮತ್ತೆ 3 ರಿಂದ 4 ಸಾಲದಾತ ಕಂಪನಿಗಳನ್ನು ಜೋಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಜೂನ್ 30 ರಂದು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ತನ್ನ ಸಾಲ ವಿತರಣೆ ಪಾಲುದಾರಿಕೆಯನ್ನು ಪೇಟಿಎಂ ಘೋಷಿಸಿತು.

ಹಣಕಾಸು ವರ್ಷ 2023 ರ ಕೊನೆಯ ತ್ರೈಮಾಸಿಕದ ಫಲಿತಾಂಶಗಳಲ್ಲಿ, ಕಾರ್ಯಾಚರಣೆಗಳಿಂದ ಬಂದ ಆದಾಯ ವರ್ಷದಿಂದ ವರ್ಷಕ್ಕೆ ಶೇಕಡಾ 51 ಏರಿಕೆಯಾಗಿ 2,334 ಕೋಟಿ ರೂಪಾಯಿಗಳಿಗೆ ತಲುಪಿದೆ ಪೇಟಿಎಂ ವರದಿ ಮಾಡಿದೆ. ಪೇಮೆಂಟ್ಸ್​ ಮತ್ತು ಸಾಲ ವಿತರಣೆ ವ್ಯವಹಾರದಲ್ಲಿನ ಬೆಳವಣಿಗೆಯಿಂದ ಆದಾಯ ಹೆಚ್ಚಾಗಿದೆ. ಹಣಕಾಸು ವರ್ಷ 2023ರ 4ನೇ ತ್ರೈಮಾಸಿಕದಲ್ಲಿ ಕಂಪನಿಯು ಎರಡನೇ ನೇರ ತ್ರೈಮಾಸಿಕದಲ್ಲಿ ಲಾಭ ಗಳಿಸಿದೆ. ಪೂರ್ಣ ವರ್ಷದ UPI ಇನ್ಸೆಂಟಿವ್ ಸೇರಿದಂತೆ 234 ಕೋಟಿ ರೂ.ಗಳ ESOP ವೆಚ್ಚದ ಮೊದಲು EBITDA ವರದಿ ಮಾಡಿದೆ.

ಇದನ್ನೂ ಓದಿ : Gravity Hole: ಹಿಂದೂ ಮಹಾಸಾಗರದಲ್ಲಿನ ಗುರುತ್ವಾಕರ್ಷಣೆಯ ರಂಧ್ರದ ಕಾರಣ ಪತ್ತೆ ಮಾಡಿದ ಭಾರತೀಯ ವಿಜ್ಞಾನಿಗಳು

ABOUT THE AUTHOR

...view details