ಕರ್ನಾಟಕ

karnataka

ETV Bharat / business

ಬೇವಲ್ಲ ಬರೀ ಬೆಲ್ಲ... ಸೆನ್ಸೆಕ್ಸ್​ ಜಿಗಿತ: ಯುಗಾದಿಗೂ ಮುನ್ನ ಹೂಡಿಕೆದಾರರಿಗೆ ಸಿಹಿ - ಭಾರ್ತಿ ಏರ್​ಟೆಲ್​

ಸೋಮವಾರದ ಆರಂಭಿಕ ವಹಿವಾಟಿನ ನಡುವೆ 400ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ಸಾಧಿಸಿ, ದಾಖಲೆಯ 39,000 ಅಂಕಗಳ ಮಟ್ಟವನ್ನು ತಲುಪಿತು. ಬಳಿಕ ಹಿಂದೆ ಸರಿದು ದಿನದ ವಹಿವಾಟನ್ನು 198.96 ಅಂಕಗಳ ಏರಿಕೆಯೊಂದಿಗೆ 38,871.87 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಬಿಎಸ್​ಇ

By

Published : Apr 2, 2019, 11:04 AM IST

Updated : Apr 2, 2019, 11:56 AM IST

ಮುಂಬೈ:ನೂತನ ಹಣಕಾಸು ವರ್ಷದ ಎರಡನೇ ದಿನವೂ ಮುಂಬೈ ಷೇರುಪೇಟೆ ಚುರುಕಾಗಿದ್ದು, ಸೆನ್ಸೆಕ್ಸ್‌ 38,988.57 ಮಟ್ಟವನ್ನು ಮುಟ್ಟಿದೆ.

ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಧನಾತ್ಮಕತೆ, ಚೀನಾ- ಅಮೆರಿಕ ವ್ಯಾಪಾರ ವಹಿವಾಟಿನ ಫಲಪ್ರದತ್ತ ಹೆಜ್ಜೆ ಇಟ್ಟಿರುವ ಸಭೆ, ವಿದೇಶಿ ಬಂಡವಾಳದ ಒಳ ಹರಿವು ಹಾಗೂ ಆರ್‌ಬಿಐ ಬಡ್ಡಿದರ ಕಡಿತದ ಸಂಭವವಿರುವ ಕಾರಣಗಳಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಏರಿಕೆಯಾಗಿದ್ದು, ಉತ್ತಮ ವಹಿವಾಟು ಆರಂಭಿಸಿದೆ.

ಸೋಮವಾರದ ಆರಂಭಿಕ ವಹಿವಾಟಿನ ನಡುವೆ 400ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ಸಾಧಿಸಿ, ದಾಖಲೆಯ 39,000 ಅಂಕಗಳ ಮಟ್ಟವನ್ನು ತಲುಪಿತು. ಬಳಿಕ ಹಿಂದೆ ಸರಿದು ದಿನದ ವಹಿವಾಟನ್ನು 198.96 ಅಂಕಗಳ ಏರಿಕೆಯೊಂದಿಗೆ 38,871.87 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಮಂಗಳವಾರದ ಬೆಳಗಿನ 10.30ರ ವೇಳೆಯ ವಹಿವಾಟಿನಲ್ಲಿ ಸೆನ್ಸೆಕ್ಸ್​ ಸೂಚ್ಯಂಕ 54.22 ಅಂಕಗಳ ಏರಿಕೆಯನ್ನು ದಾಖಲಿಸಿ 38,926.95 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 15.80 ಅಂಕಗಳ ಏರಿಕೆ ದಾಖಲಿಸಿ 11,684.95 ಮಟ್ಟದಲ್ಲೂ ವ್ಯವಹಾರ ನಿರತವಾಗಿದೆ.

ಇಂದಿನ ರಾಲಿಗೆ ಭಾರ್ತಿ ಏರ್‌ಟೆಲ್‌, ಎನ್​​ಟಿಪಿಸಿ, ಇನ್ಫಿ, ಒಎನ್​ಜಿಸಿ, ಟಿಸಿಎಸ್​, ಕೋಲ್ ಇಂಡಿಯಾ, ಪವರ್​ ಗ್ರಿಡ್​, ಮಾರುತಿ, ಎಚ್​ಡಿಎಫ್​ಸಿ, ಏಷ್ಯಾನ್ ಪೆಯಿಂಟ್ಸ್​, ಯೆಸ್ ಬ್ಯಾಂಕ್ ಷೇಋಉಗಳು ಕ್ರಿಯಾಶೀಲವಾಗಿದ್ದರೇ ಹೀರೋ ಮೋಟಾರ್​, ಸನ್ ಫಾರ್ಮಾ, ಇಂಡಸ್​ ಇಂಡ್ ಬ್ಯಾಂಕ್, ರಿಲಯನ್ಸ್​, ಎಚ್​ಸಿಎಲ್​ ಟೆಕ್​, ವೇದಲ್, ಟಾಟಾ ಮೋಟಾರ್ಸ್​ ಷೇರುಗಖ ಮೌಲ್ಯದಲ್ಲಿ ಇಳಿಕೆ ಕಂಡುಬಂತು.

Last Updated : Apr 2, 2019, 11:56 AM IST

ABOUT THE AUTHOR

...view details