ಕರ್ನಾಟಕ

karnataka

By

Published : Jul 6, 2020, 7:55 PM IST

ETV Bharat / business

ಮುಂಬೈ ಪೇಟೆಯಲ್ಲಿ ಖರೀದಿ ಭರಾಟೆ: 466 ಅಂಕ ಜಿಗಿದ ಸೆನ್ಸೆಕ್ಸ್​!

ದಿನದ ವಹಿವಾಟು ಅಂತ್ಯಂದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 466 ಅಂಶ ಅಥವಾ ಶೇ. 1.29ರಷ್ಟು ಏರಿಕೆ ಕಂಡು 36,487 ಅಂಶಗಳಿಗೆ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 156 ಅಂಶ ಅಥವಾ ಶೇ. 1.47ರಷ್ಟು ಏರಿಕೆಯಾಗಿ 10,764 ಅಂಶಗಳಿಗೆ ತಲುಪಿತು.

Sensex
ಸೆನ್ಸೆಕ್ಸ್​

ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಖರೀದಿ ಭರಾಟೆ ಕಂಡು ಬಂದಿದ್ದು, ಮಾರುಕಟ್ಟೆ ಶೇ. 1.5ರಷ್ಟು ಲಾಭದೊಂದಿಗೆ ಕೊನೆಗೊಂಡಿತು.

2021ರ ವಿತ್ತೀಯ ವರ್ಷದ ಪ್ರಥಮ ತ್ರೈಮಾಸಿಕಕ್ಕೆ ಕೆಲವು ಕಂಪನಿಗಳು ಸದೃಢವಾದ ಜಾಗತಿಕ ಸೂಚನೆ ಮತ್ತು ವ್ಯಾಪಾರ ನವೀಕರಣ ಉತ್ತೇಜಿಸುವುದು ಹೂಡಿಕೆದಾರರ ಖರೀದಿ ಮನೋಭಾವ ಹೆಚ್ಚಿಸಿವೆ. ಹೆಚ್‌ಡಿಎಫ್‌ಸಿ ಬ್ಯಾಂಕ್ 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಎಫ್‌ವೈ 2021ರ ಕ್ಯೂ1 ) ಶೇ. 21ರಷ್ಟು (ವೈಒಐ) ಬಲವಾದ ಸಾಲದ ಬೆಳವಣಿಗೆ 1.04 ಟ್ರಿಲಿಯನ್ ರೂ.ಗೆ ತಲುಪಿದೆ ಎಂದು ವರದಿ ಮಾಡಿದ ನಂತರ ಷೇರು ಮೌಲ್ಯ ಶೇ. 3ರಷ್ಟು ಹೆಚ್ಚಳವಾಗಿದೆ.

ದಿನದ ವಹಿವಾಟು ಅಂತ್ಯಂದ ವೇಳೆಗೆ ಮುಂಬೈ ಸೂಚ್ಯಂಕ ಸೆನ್ಸೆಕ್ಸ್ 466 ಅಂಶ ಅಥವಾ ಶೇ. 1.29ರಷ್ಟು ಏರಿಕೆ ಕಂಡು 36,487 ಅಂಶಗಳಿಗೆ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 156 ಅಂಶ ಅಥವಾ ಶೇ. 1.47ರಷ್ಟು ಏರಿಕೆಯಾಗಿ 10,764 ಅಂಶಗಳಿಗೆ ತಲುಪಿತು.

ನಿಫ್ಟಿಯಲ್ಲಿ ಫಾರ್ಮಾ ಶೇ. 0.6ರಷ್ಟು ಕುಸಿದಿದೆ. ಆಟೋ ಶೇ. 2.8ರಷ್ಟು, ಲೋಹ ಶೇ. 2.4ರಷ್ಟು, ರಿಯಾಲ್ಟಿ ಶೇ. 3ರಷ್ಟು, ಖಾಸಗಿ ಬ್ಯಾಂಕ್ ಶೇ. 1.5ರಷ್ಟು ಮತ್ತು ಹಣಕಾಸು ಶೇ. 1.4ರಷ್ಟು ಏರಿಕೆ ಕಂಡವು. ಮಹೀಂದ್ರಾ ಅಂಡ್​ ಮಹೀಂದ್ರಾ ಪ್ರತಿ ಷೇರಿಗೆ ಶೇ. 7.4ರಷ್ಟು ಲಾಭ ಗಳಿಸಿ 569.70 ರೂ. ಮಾರಾಟ ಆಯಿತು. ಟಾಟಾ ಮೋಟಾರ್ಸ್ ಶೇ. 5.3 ಮತ್ತು ಮಾರುತಿ ಸುಜುಕಿ ಶೇ. 3.4 ರಷ್ಟು ಏರಿಕೆ ಕಂಡಿವೆ.

ABOUT THE AUTHOR

...view details