ಕರ್ನಾಟಕ

karnataka

ETV Bharat / business

ಬಂಗಾರಕ್ಕೆ ಬೆಲೆ ಏರಿಕೆಯ ಗುನ್ನ... ಚಿನ್ನಾಭರಣ ಕೊಳ್ಳುವ ಮುನ್ನ ಒಮ್ಮೆ ಯೋಚಿಸಿ..!

ಎಂಸಿಎಕ್ಸ್​ ಫ್ಯೂಚರ್ ಮಾರುಕಟ್ಟೆಯಲ್ಲಿ ಶುಕ್ರವಾರದಂದು ಪ್ರತಿ 10 ಗ್ರಾಂ. ಚಿನ್ನದ ಮೇಲೆ ಶೇ 0.53ರಷ್ಟು ಏರಿಕೆಯಾಗಿದೆ. ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ₹ 1,100 ಏರಿದಂತಾಗಿದೆ. ಪ್ರಸ್ತುತ ₹ 39,087ಗೆ ಮಾರಾಟ ಆಗುತ್ತಿದೆ. ಬೆಳ್ಳಿಯ ಧಾರಣಿಯಲ್ಲಿ ಕೂಡು ಶೇ 0.12ರಷ್ಟು ಹೆಚ್ಚಳವಾಗಿ ಪ್ರತಿ ಕೆ.ಜಿ. ₹ 46,879ರಲ್ಲಿ ಖರೀದಿಯಾಗುತ್ತಿದೆ.

Gold
ಚಿನ್ನ

By

Published : Dec 28, 2019, 5:51 PM IST

ಮುಂಬೈ: ಜಾಗತಿಕ ಚಿನಿವಾರ ಪೇಟೆಯಲ್ಲಿನ ಅನಿಶ್ಚಿತ ಬೆಳವಣಿಗೆಯಿಂದ ಭಾರತೀಯ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆಯಾಗಿದೆ.

ಎಂಸಿಎಕ್ಸ್​ ಫ್ಯೂಚರ್ ಮಾರುಕಟ್ಟೆಯಲ್ಲಿ ಶುಕ್ರವಾರದಂದು ಪ್ರತಿ 10 ಗ್ರಾಂ. ಚಿನ್ನದ ಮೇಲೆ ಶೇ 0.53ರಷ್ಟು ಏರಿಕೆಯಾಗಿದೆ. ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ₹ 1,100 ಏರಿದಂತಾಗಿದೆ. ಪ್ರಸ್ತುತ ₹ 39,087ಗೆ ಮಾರಾಟ ಆಗುತ್ತಿದೆ. ಬೆಳ್ಳಿಯ ಧಾರಣೆಯಲ್ಲಿ ಕೂಡ ಶೇ 0.12ರಷ್ಟು ಹೆಚ್ಚಳವಾಗಿ ಪ್ರತಿ ಕೆ.ಜಿ. ₹ 46,879ರಲ್ಲಿ ಖರೀದಿಯಾಗುತ್ತಿದೆ.

ನ್ಯೂಯಾರ್ಕ್​​ನಲ್ಲಿ ಪ್ರತಿ ಔನ್ಸ್​ ಚಿನ್ನದ ಮೇಲೆ ಶೇ 0.2ರಷ್ಟು ಹೆಚ್ಚಳವಾಗಿ 1,518.10 ಡಾಲರ್​ನಲ್ಲಿ ಮಾರಾಟ ಆಗುತ್ತಿದೆ. ಕಳೆದ ಆಗಸ್ಟ್​ 9ರಿಂದ ಇದುವರೆಗೂ ಶೇ 2.5ರಷ್ಟು ದರ ಏರಿಕೆಯಾಗಿದೆ. ಜಾಗತಿಕ ಪೇಟೆ0ಯಲ್ಲಿ ಪ್ರಸಕ್ತ ವರ್ಷದಲ್ಲಿ ಚಿನ್ನವು ಶೇ 18ರಷ್ಟು ದರ ವೃದ್ಧಿಸಿಕೊಂಡಿದೆ.

ABOUT THE AUTHOR

...view details