ಕರ್ನಾಟಕ

karnataka

By

Published : Apr 29, 2021, 8:44 PM IST

ETV Bharat / business

RBIನಿಂದ ಒನ್​ ಡೇ ಓಪನ್​ ಮಾರ್ಕೆಟ್​ ಆಪರೇಷನ್: ₹ 10,000 ಕೋಟಿ ಸೆಕ್ಯೂರಿಟಿಸ್ ಮಾರಾಟ

ಪ್ರಸ್ತುತ ದ್ರವ್ಯತೆ ಮತ್ತು ಹಣಕಾಸಿನ ಸ್ಥಿತಿಗತಿಗಳ ಪರಿಶೀಲನೆಯ ಮೇರೆಗೆ 2021ರ ಮೇ 6ರಂದು ತಲಾ 10,000 ಕೋಟಿ ರೂ.ಗಳಿಗೆ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (ಒಎಂಒ) ಅಡಿಯಲ್ಲಿ ಸರ್ಕಾರಿ ಭದ್ರತೆಗಳನ್ನು ಏಕಕಾಲದಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.

RBI
RBI

ಮುಂಬೈ:ದ್ರವ್ಯತೆ ಹೆಚ್ಚಿಸಲು ಸರ್ಕಾರಿ ಭದ್ರತೆಗಳನ್ನು ಏಕಕಾಲದಲ್ಲಿ ಖರೀದಿ ಹಾಗೂ ಮಾರಾಟ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮೇ 6ರಂದು ಒಂದು ದಿನದ 'ಮುಕ್ತ ಮಾರುಕಟ್ಟೆ ಕಾರ್ಯಾಚರಣೆ' ನಡೆಸಲಿದೆ.

ಒಎಂಒ ಸೇಷನ್​​ ವೇಳೆ 10,000 ಕೋಟಿ ರೂ. ಮೌಲ್ಯದ ಸರ್ಕಾರಿ ಭದ್ರತೆಗಳನ್ನು ಏಕಕಾಲದಲ್ಲಿ ಖರೀದಿಸಿ ಮಾರಾಟ ಮಾಡಲಾಗುತ್ತದೆ.

ಕಾರ್ಯದರ್ಶಿ ಈ ಒಎಂಒ ಅಡಿ, ಆರ್‌ಬಿಐ ಮುಂದಿನ ವರ್ಷ ಪ್ರಸಕ್ತ ಬ್ಯಾಂಡ್‌ನಲ್ಲಿ ಮುಕ್ತಾಯಗೊಳ್ಳುವ 10,000 ಕೋಟಿ ರೂ. ಅಲ್ಪಾವಧಿಯ ಸೆಕ್ಯೂರಿಟಿಗಳನ್ನು ಮಾರಾಟ ಮಾಡುತ್ತದೆ. 2026 ಮತ್ತು 2030ರ ನಡುವೆ ಸಮಾನ ಮೊತ್ತದ ದೀರ್ಘಕಾಲೀನ ಸೆಕ್ಯೂರಿಟಿಗಳನ್ನು ಖರೀದಿಸುತ್ತದೆ.

ಪ್ರಸ್ತುತ ದ್ರವ್ಯತೆ ಮತ್ತು ಹಣಕಾಸಿನ ಸ್ಥಿತಿಗತಿಗಳ ಪರಿಶೀಲನೆಯ ಮೇರೆಗೆ 2021ರ ಮೇ 6ರಂದು ತಲಾ 10,000 ಕೋಟಿ ರೂ.ಗಳಿಗೆ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (ಒಎಂಒ) ಅಡಿಯಲ್ಲಿ ಸರ್ಕಾರಿ ಭದ್ರತೆಗಳನ್ನು ಏಕಕಾಲದಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details