ಕರ್ನಾಟಕ

karnataka

ETV Bharat / business

ಮುಂಬೈನಲ್ಲಿ 80 ರೂ. ದಾಟಿದ ಪೆಟ್ರೋಲ್​ ದರ... ಬೆಂಗಳೂರಲ್ಲಿ ಎಷ್ಟು? - ಪೆಟ್ರೋಲ್​

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್​ನಲ್ಲಿ 19 ಪೈಸೆ ಏರಿಕೆಯಾಗಿ ₹ 74.61ರಲ್ಲಿ ಮಾರಾಟ ಆಗುತ್ತಿದೆ. ಸೋಮವಾರದಂದು ಇದು ₹ 74.42ರಲ್ಲಿ ಖರೀದಿ ಆಗುತ್ತಿತ್ತು. ಡೀಸೆಲ್​ ದರದಲ್ಲಿ ಸಹ 16 ಪೈಸೆ ಹೆಚ್ಚಳವಾಗಿ 67.49 ವಹಿವಾಟು ನಡೆಸುತ್ತಿದ್ದು, ನಿನ್ನೆ ₹ 67.33 ನೀಡಿ ಗ್ರಾಹಕರು ಕೊಳ್ಳುತ್ತಿದ್ದರು.

ಸಾಂದರ್ಭಿಕ ಚಿತ್ರ

By

Published : Oct 1, 2019, 12:48 PM IST

ನವದೆಹಲಿ:ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಮಂಗಳವಾರದಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13-19 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್​ ದರದಲ್ಲಿ 10-16 ಪೈಸೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್​ನಲ್ಲಿ 19 ಪೈಸೆ ಏರಿಕೆಯಾಗಿ ₹ 74.61ರಲ್ಲಿ ಮಾರಾಟ ಆಗುತ್ತಿದೆ. ಸೋಮವಾರ ಇದು ₹ 74.42ರಲ್ಲಿ ಖರೀದಿ ಆಗುತ್ತಿತ್ತು. ಡೀಸೆಲ್​ ದರದಲ್ಲಿ ಸಹ 16 ಪೈಸೆ ಹೆಚ್ಚಳವಾಗಿ 67.49 ವಹಿವಾಟು ನಡೆಸುತ್ತಿದ್ದು, ನಿನ್ನೆ ₹ 67.33 ನೀಡಿ ಗ್ರಾಹಕರು ಕೊಳ್ಳುತ್ತಿದ್ದರು.

ಸೋಮವಾರ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರಮುಖ ನಗರಗಳಲ್ಲಿನ ಇಂಧನ ಮಾರುಕಟ್ಟೆಯ ಚಿಲ್ಲರೆ ದರದಲ್ಲಿ ಹೆಚ್ಚಳ ಮಾಡಿದ್ದನ್ನು ಇಂದು ಕೂಡ ಮುಂದುವರಿಸಿವೆ. ಮುಂಬೈನ ನಾಗರಿಕರು ಲೀಟರ್​ ಪೆಟ್ರೋಲ್​ಗೆ ₹ 80.21 ಪೈಸೆ ಕೊಟ್ಟು ಖರೀದಿಸುತ್ತಿದ್ದಾರೆ. ಡೀಸೆಲ್​ಗೆ 70.76 ಪೈಸೆ ನೀಡುತ್ತಿದ್ದು, ಎರಡೂ ಕ್ರಮವಾಗಿ 13 ಪೈಸೆ ಮತ್ತು 12 ಪೈಸೆಯಷ್ಟು ಏರಿಕೆಯಾಗಿದೆ.

ಉಳಿದಂತೆ ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಲ್ಲಿ ಲೀಟರ್​ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 77.50 & ₹ 71.30, ₹ 77.23 & ₹ 69.85 ಹಾಗೂ ₹ 77.10 & ₹ 69.74 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ.

ABOUT THE AUTHOR

...view details