ನವದೆಹಲಿ :ಸ್ಮಾರ್ಟ್‌ಫೋನ್ ಬ್ರಾಂಡ್ ಒಪ್ಪೋ ತನ್ನ ಉತ್ಪನ್ನಗಳನ್ನು ವಾಟ್ಸ್‌ಆ್ಯಪ್ ಅಪ್ಲಿಕೇಷನ್‌ನಲ್ಲಿ ಆರ್ಡರ್ ಪಡೆದು ಗ್ರಾಹಕರ ಮನೆಗೆ ತಲುಪಿಸುವುದಾಗಿ ತಿಳಿಸಿದೆ.
ಮೇ 24 ರಿಂದ ಗ್ರಾಹಕರು ಯಾವುದೇ ಒಪ್ಪೋ ಉತ್ಪನ್ನವನ್ನು ವಾಟ್ಸ್ಆ್ಯಪ್ ಮೂಲಕ ಆರ್ಡರ್ ಮಾಡಬಹುದು. 91-9871502777ಗೆ ಪಿನ್ ಕೋಡ್ ನಮೂದಿಸಿ ಮತ್ತು ಹತ್ತಿರದ ಚಿಲ್ಲರೆ ಅಂಗಡಿಗಳಿಂದ ಕರೆ ಸ್ವೀಕರಿಸಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಾರಾಟ ಕ್ರಮವು ದೀರ್ಘಕಾಲೀನ ಓಮ್ನಿಚಾನಲ್ ಕಾರ್ಯತಂತ್ರಕ್ಕೆ ಅನುಗುಣವಾಗಿದೆ. ಸ್ಥಳೀಯ ಅಂಗಡಿ ಮತ್ತು ಮುಖ್ಯ ಪಾಲುದಾರರಿಗೆ ಒಪ್ಪೋ ಉತ್ಪನ್ನಗಳನ್ನು ವಾಟ್ಸ್ಆ್ಯಪ್ ಮೂಲಕ ಮಾರಾಟ ಮಾಡಲು ಮತ್ತು ಮನೆಯಲ್ಲಿ ಕುಳಿತ ಗ್ರಾಹಕರ ಕೈಸೇರಿಸುವ ಪ್ರಯತ್ನದ ಭಾಗವಾಗಿದೆ ಎಂದಿದೆ.