ಕರ್ನಾಟಕ

karnataka

ETV Bharat / business

ಒಮ್ಮೆ ಚಾರ್ಜ್​ ಮಾಡಿದ್ರೆ 452 ಕಿ.ಮೀ. ಚಲಿಸುವ ಎಲೆಕ್ಟ್ರಿಕ್ ಕಾರು ಲೋಕಾರ್ಪಣೆ

ಕೇವಲ 57 ನಿಮಿಷಗಳಲ್ಲಿ ಶೇ 80ರಷ್ಟು ಚಾರ್ಜ್‌ ಆಗಬಲ್ಲುದು. ಒಂದು ಸಲ ರಿಚಾರ್ಜ್‌ ಆದ ಬಳಿಕ 452 ಕಿ.ಮೀ. ಕ್ರಮಿಸಬಲ್ಲುದು. ಹೈಟೆಕ್‌ ಇಂಟೀರಿಯರ್‌, ಎರಡು ವಿಧದ ಚಾರ್ಜರ್‌ ಸಿಗಲಿದ್ದು, ಹೈ ವೋಲ್ಟೇಜ್‌ ಬ್ಯಾಟರಿಗೆ 8 ವರ್ಷ ಹಾಗೂ 1,60,000 ಕಿ.ಮೀ.ವರೆಗೆ ವಾಯ್ದೆ ನೀಡಲಾಗಿದೆ.

ಸಂಗ್ರಹ ಚಿತ್ರ

By

Published : Jul 10, 2019, 4:08 PM IST

ನವದೆಹಲಿ:ಹುಂಡೈ ಮೋಟಾರ್ ಇಂಡಿಯಾ ಭಾರತದಲ್ಲಿ ಪ್ರಥಮ ಬಾರಿಗೆ ಪರಿಪೂರ್ಣ ವಿದ್ಯುತ್​ ಬ್ಯಾಟರಿ ಚಾಲಿತ 'ಎಸ್​ಯುವಿ ಕೋನಾ ಎಲೆಕ್ಟ್ರಿಕ್​' ಕಾರನ್ನು ಪರಿಚಯಿಸಿದೆ.

ಅತ್ಯಾಕರ್ಷಕ ವಿನ್ಯಾಸ, ಸ್ಟೈಲ್​, ಮಾಡರ್ನ್‌​ ಟೆಕ್ನಾಲಜಿ ಫೀಚರ್​ಗಳನ್ನು ಈ ಕಾರು ಒಳಗೊಂಡಿದೆ. ಒಮ್ಮೆ ಬ್ಯಾಟರಿ ರಿಚಾರ್ಜ್‌ ಮಾಡಿದರೆ 452 ಕಿ.ಮೀ.ವರೆಗೂ ಈ ಕಾರು ಚಲಾಯಿಸಬಹುದು ಎಂದು ಕಂಪನಿ ತಿಳಿಸಿದೆ.

ಭಾರತದಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ ₹ 25.30 ಲಕ್ಷದಲ್ಲಿ (ಎಕ್ಸ್​ ಶೋರೂಮ್​) ಲಭ್ಯವಾಗುತ್ತಿದೆ. ಫಾಂಟಾಮ್‌ ಬ್ಲ್ಯಾಕ್‌, ಪೋಲಾರ್‌ ವೈಟ್‌, ಮರಿನಾ ಬ್ಲೂ, ತೈಫೂನ್‌ ಸಿಲ್ವರ್‌ ಸೇರಿದಂತೆ ಇತರೆ ಬಣ್ಣಗಳಲ್ಲಿ ಕಾರುಗಳು ಮಾರುಕಟ್ಟೆಯಲ್ಲಿ ಸಿಗಲಿದೆ.

ಕೇವಲ 57 ನಿಮಿಷಗಳಲ್ಲಿ ಶೇ 80ರಷ್ಟು ಬ್ಯಾಟರಿ ಚಾರ್ಜ್‌ ಆಗಬಲ್ಲುದು. ಒಂದು ಸಲ ರಿಚಾರ್ಜ್‌ ಆದ ಬಳಿಕ 452 ಕಿ.ಮೀ. ದೂರ ಕಾರು ಕ್ರಮಿಸಬಲ್ಲುದು. ಹೈಟೆಕ್‌ ಇಂಟೀರಿಯರ್‌, ಎರಡು ವಿಧದ ಚಾರ್ಜರ್‌ ಸಿಗಲಿದ್ದು, ಹೈ ವೋಲ್ಟೇಜ್‌ ಬ್ಯಾಟರಿಗೆ 8 ವರ್ಷ ಹಾಗೂ 1,60,000 ಕಿ.ಮೀ.ವರೆಗೆ ವಾಯ್ದೆ ನೀಡಲಾಗಿದೆ.

For All Latest Updates

TAGGED:

ABOUT THE AUTHOR

...view details