ನವದೆಹಲಿ:ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ತನ್ನ, ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅಲ್ಕಾಜಾರ್‌ನ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದಾಗಿ ತಿಳಿಸಿದೆ.
6 ಮತ್ತು 7 ಆಸನಗಳ ಆಯ್ಕೆಗಳಲ್ಲಿ ಬರಲಿರುವ ಪ್ರೀಮಿಯಂ ಎಸ್‌ಯುವಿಯನ್ನು ಕಂಪನಿಯ ಮಾರಾಟಗಾರರಲ್ಲಿ ಅಥವಾ ಆನ್‌ಲೈನ್‌ನಲ್ಲಿ 25 ಸಾವಿರ ರೂ. ಪಾವತಿಯೊಂದಿಗೆ ಕಾಯ್ದಿರಿಸಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಕಾಜಾರ್ 2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ನ ಎರಡು ಎಂಜಿನ್ ಆಯ್ಕೆಗಳಲ್ಲಿ ಆರು-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಎಚ್‌ಎಂಐಎಲ್ ನಿರ್ದೇಶಕ (ಮಾರಾಟ, ಮಾರ್ಕೆಟಿಂಗ್ & ಸೇವೆ) ತರುಣ್ ಗರ್ಗ್ ಮಾತನಾಡಿ, ಕಂಪನಿಯು 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ತಯಾರಕ ಕಂಪನಿಯಾಗಿದೆ. ಅದರ ಶ್ರೇಣಿಯ ಎಸ್ಯುವಿಗಳಾದ ಕ್ರೆಟಾ, ವೆನ್ಯೂ, ಟಕ್ಸನ್ ಮತ್ತು ಕೋನಾ ಎಲೆಕ್ಟ್ರಿಕ್ ಸೇರಿವೆ ಎಂದರು.