ನವದೆಹಲಿ:ಗೂಗಲ್ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಹೆಸರಿಡುವ ಸಂಪ್ರದಾಯವನ್ನು ಬ್ರೇಕ್ ಮಾಡಿದ್ದು, ಆ್ಯಂಡ್ರಾಯ್ಡ್ Q ಸಿಹಿತಿಂಡಿ ಹೆಸರನ್ನಿಡದಿರಲು ತೀರ್ಮಾನಿಸಿದೆ.
ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಈ ಮೊದಲು ಆಂಗ್ಲಪದಕ್ಕೆ ಸರಿಹೊಂದುವ ಸಿಹಿತಿಂಡಿಗಳ ಹೆಸರನ್ನು ಇಡಲಾಗುತ್ತಿತ್ತು. ಆದ್ರೆ ಆ್ಯಂಡ್ರಾಯ್ಡ್ Q ಮೂಲಕ ಹೊಸತನಕ್ಕೆ ನಾಂದಿ ಹಾಡಲಿದ್ದು, ಇದಕ್ಕೆ ಆ್ಯಂಡ್ರಾಯ್ಡ್ 10 ಎಂದು ಹೆಸರಿಸಿದೆ.
ಪ್ರತಿ ಬಾರಿ ಆವೃತ್ತಿ ಬಿಡುಗಡೆ ವೇಳೆ ಯಾವುದಾದರೊಂದು ತಿಂಡಿಯ ಹೆಸರನ್ನಿಟ್ಟು ರಿಲೀಸ್ ಮಾಡುತ್ತಿದ್ದೆವು. ಈ ಸಂಪ್ರದಾಯ ಒಂದರ್ಥದಲ್ಲಿ ಖುಷಿಯ ವಿಚಾರವೂ ಆಗಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಈ ಹೆಸರುಗಳು ಜಾಗತಿಕವಾಗಿ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ ಎನ್ನುವ ಪ್ರತಿಕ್ರಿಯೆಗಳು ಬಂದಿತ್ತು. ಇದನ್ನು ಪರಗಣಿಸಿ ಸಂಪ್ರದಾಯಕ್ಕೆ ಕೊನೆ ಹಾಡಿದ್ದೇವೆ ಎಂದು ಕಂಪನಿ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದೆ.
ಎಲ್ಲಿಂದ ಶುರುವಾಯ್ತು ಹೆಸರಿನ ಪಯಣ:
ಗೂಗಲ್ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗೆ ಹೆಸರಿಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಕಪ್ಕೇಕ್ ಮೂಲಕ. ನಂತರದಲ್ಲಿ ಡೋನಟ್, ಎಕ್ಲೈರ್, ಫ್ರೊಯೋ, ಜಿಂಜರ್ಬ್ರೆಡ್, ಹನಿಕಾಂಬ್, ಐಸ್ಕ್ರೀಮ್, ಜೆಲ್ಲಿಬೀನ್, ಕಿಟ್ಕ್ಯಾಟ್, ಲಾಲಿಪಾಪ್, ಮಾರ್ಶ್ಮೆಲ್ಲೋ, ನೋಗಟ್, ಓರಿಯೋ ಹಾಗೂ ಕೊನೆಯದಾಗಿ ಪೈ ಹೆಸರಿನಲ್ಲಿ ಆ್ಯಂಡ್ರಾಯ್ಡ್ ಆವೃತ್ತಿಗಳು ಬಿಡುಗಡೆಯಾಗಿದ್ದವು.