ಸಿಯೋಲ್ :ಕೊರೊನಾ ವೈರಸ್ನಿಂದ ಮುಂದೂಡಿಕೆ ಆಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 21ಸರಣಿಯು ಜನವರಿ 14ರಂದು ಬಿಡುಗಡೆಯಾಗಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್12 ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಗ್ಯಾಲಕ್ಸಿ ಎಸ್21, ಗ್ಯಾಲಕ್ಸಿ ಎಸ್ 21 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್21 ಅಲ್ಟ್ರಾ ಎಂದು ಹೆಸರಿಡಲಾಗಿದೆ.
ದಕ್ಷಿಣ ಕೊರಿಯಾ ಮೂಲದ ಇಟಿ ನ್ಯೂಸ್ ಪ್ರಕಾರ, ಗ್ಯಾಲಕ್ಸಿ ಎಸ್ 21 ಬೆಲೆ 916 ಡಾಲರ್, ಗ್ಯಾಲಕ್ಸಿ ಎಸ್ 21 ಪ್ಲಸ್ 1,025 ಡಾಲರ್ ಹಾಗೂ ಟಾಪ್-ಎಂಡ್ ಗ್ಯಾಲಕ್ಸಿ ಎಸ್ 21 ಅಲ್ಟ್ರಾ 1,329 ಡಾಲರ್ಗೆ ಲಭ್ಯವಾಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಟೇಕ್ಆಪ್ ಆಗದ ಎಲೆಕ್ಟ್ರಿಕ್ ವಾಹನ ಮಾರಾಟ : ಸಬ್ಸಿಡಿ ಕೊಟ್ಟರೂ ಕೇಳುವವರಿಲ್ಲ ಏಕೆ?
ಗ್ಯಾಲಕ್ಸಿ ಎಸ್ 21 6.2 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಇದಲ್ಲದೆ ಫೋನ್ನಲ್ಲಿ ಪಂಚ್-ಹೋಲ್ ಕಟೌಟ್ ಸಹ ಲಭ್ಯ ಇರುತ್ತದೆ. ಎಲ್ಲಾ ಮೂರು ರೂಪಾಂತರಗಳಲ್ಲಿ 5ಜಿ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಎಸ್ 21 ಸ್ಮಾರ್ಟ್ಫೋನ್ 8 ಜಿಬಿ RAM ಹಾಗೂ 128 ಜಿಬಿ ಮೆಮೊರಿ ಸಂಗ್ರಹ ಇರಲಿದೆ.
ಗ್ಯಾಲಕ್ಸಿ ಎಸ್ 21 ಪ್ಲಸ್ 8 ಜಿಬಿ RAM ಹಾಗೂ 256 ಜಿಬಿ ಮೆಮೊರಿ ಸಂಗ್ರಹ ಹೊಂದಿರಲಿದೆ. ಗ್ಯಾಲಕ್ಸಿ ಎಸ್ 21 ಅಲ್ಟ್ರಾ 12 ಜಿಬಿ RAM 512 ಜಿಬಿ ಮೆಮೊರಿ ಸಾಮರ್ಥ್ಯ ಇರಲಿದೆ ಎಂದು ಹೇಳಲಾಗುತ್ತಿದೆ.