ಕರ್ನಾಟಕ

karnataka

ETV Bharat / business

One district, One product' ಅಜೆಂಡಾ: ರಾಜ್ಯಗಳೊಂದಿಗೆ ಕೈಜೋಡಿಸಲು ಬ್ಯಾಂಕ್​ಗಳಿಗೆ ವಿತ್ತ ಸಚಿವೆ ಮನವಿ - ಸಾರ್ವಜನಿಕ ವಲಯದ ಬ್ಯಾಂಕ್​ಗಳು

ಸಾರ್ವಜನಿಕ ವಲಯದ ಬ್ಯಾಂಕ್​ಗಳು ರಾಜ್ಯ ಸರ್ಕಾರಗಳೊಂದಿಗೆ ಸಹಕರಿಸಿದಾಗ ಮಾತ್ರ one district, one product' ಅಜೆಂಡಾ ಯಶಸ್ವಿಯಾಗಲು ಸಾಧ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Nirmala Sitharaman
Nirmala Sitharaman

By

Published : Aug 25, 2021, 4:45 PM IST

ಮುಂಬೈ:One district, One product' ಅಜೆಂಡಾ ಸಹಕಾರಕ್ಕಾಗಿ ಸಾರ್ವಜನಿಕ ವಲಯದ ಬ್ಯಾಂಕ್​ಗಳು ಅಲ್ಲಿನ ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ಬ್ಯಾಂಕ್​ಗಳು ರಾಜ್ಯಗಳೊಂದಿಗೆ ಸಹಕಾರ ನೀಡಿದಾಗ ಮಾತ್ರ ಈ ಕಾರ್ಯಸೂಚಿ ಯಶಸ್ವಿಯಾಗಿ ಜಾರಿಗೊಳ್ಳಲು ಸಾಧ್ಯ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಎರಡು ದಿನಗಳ ಮುಂಬೈ ಪ್ರವಾಸ ಕೈಗೊಂಡಿದ್ದು, ಅಲ್ಲಿನ ವಿವಿಧ ಬ್ಯಾಂಕ್​ಗಳ ಪ್ರಮುಖರೊಂದಿಗೆ ಸಭೆ ನಡೆಸಿದರು.

ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ಬ್ಯಾಂಕ್​​ಗಳಲ್ಲಿ ನಾನು ಈಗಾಗಲೇ ಮನವಿ ಮಾಡಿಕೊಂಡಿದ್ದು, ಅದಕ್ಕೆ ಸಕಾರಾತ್ಮಕ ಸ್ಪಂದನೆಯೂ ವ್ಯಕ್ತವಾಗಿದೆ ಎಂದು. ಜೊತೆಗೆ ವಾಣಿಜ್ಯ ಮಂಡಳಿ ಹಾಗೂ ಉದ್ಯಮದಾರರೊಂದಿಗೆ ಸಂವಾದ ನಡೆಸಲು ವಿನಂತಿಸಲಾಗಿದೆ ಎಂದರು.

ದೇಶದಲ್ಲಿನ ವಿತ್ತೀಯ ಕೊರತೆ ನಿಗ್ಗಿಸುವ ಉದ್ದೇಶದಿಂದ ಈಗಾಗಲೇ ರಾಷ್ಟ್ರೀಯ ನಗದೀಕರಣ ಯೋಜನೆ ಘೋಷಣೆ ಮಾಡಿರುವ ನಿರ್ಮಲಾ ಸೀತಾರಾಮನ್​​ ಇದರ ಮೂಲಕ 6 ಲಕ್ಷ ಕೋಟಿ ರೂ. ಬಂಡವಾಳ ಶೇಖರಣೆ ಮಾಡುವ ಇರಾದೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿರಿ: ಸರ್ಕಾರ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸುತ್ತಿದೆ: ಕೇಂದ್ರದ ವಿರುದ್ಧ ರಾಹುಲ್​ ಕೆಂಡಾಮಂಡಲ

ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ

ಕೇಂದ್ರ ಸರ್ಕಾರದ monetisation Pipeline ಯೋಜನೆ ವಿರುದ್ಧ ರಾಹುಲ್​ ಗಾಂದಿ ವಾಗ್ದಾಳಿ ನಡೆಸಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರಿಗೆ monetisation ಎಂದರೆ ಏನೆಂದು ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.

ABOUT THE AUTHOR

...view details