ಕರ್ನಾಟಕ

karnataka

ETV Bharat / business

ಕೇಂದ್ರ ಸರ್ಕಾರಿ ನೌಕರರಿಗೆ ವರ್ಷದಲ್ಲಿ 15 ದಿನ ವರ್ಕ್​ ಫ್ರಮ್​ ಹೋಮ್​!

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ವರ್ಷದಲ್ಲಿ 15 ದಿನಗಳವರೆಗೆ ಮನೆಯಿಂದಲೇ ಕೆಲಸ ಮಾಡುವ ಅರ್ಹ ಅಧಿಕಾರಿ/ಸಿಬ್ಬಂದಿಗೆ ಆಯ್ಕೆಯನ್ನು ಒದಗಿಸಬಹುದು ಎಂದು ಹೇಳಿದೆ. ಪ್ರಸ್ತುತ, 48,34,000 ಕೇಂದ್ರ ಸರ್ಕಾರಿ ನೌಕರರಿದ್ದಾರೆ.

Work from home
ವರ್ಕ್ ಫ್ರಮ್ ಹೋಮ್

By

Published : May 14, 2020, 11:16 PM IST

ನವದೆಹಲಿ: ಕೊರೊನಾ ವೈರಸ್​ ನಿಯಂತ್ರಣದ ಹಿನ್ನೆಲೆಯಲ್ಲಿ ಬಹುತೇಕರು ವರ್ಕ್​​ ಫ್ರಮ್​ ಹೋಮ್​ ಮಾಡುವಂತಾಗಿದೆ. ಕೊರೊನಾ ಬಳಿಕವೂ ಕೇಂದ್ರ ಸರ್ಕಾರ ತನ್ನ ನೌಕರರಿಗೆ ವರ್ಷದಲ್ಲಿ ನಿಗದಿತ ದಿನ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಕಲ್ಪಿಸುವ ಕರಡು ಸಿದ್ಧಪಡಿಸುತ್ತಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ವರ್ಷದಲ್ಲಿ 15 ದಿನಗಳವರೆಗೆ ಮನೆಯಿಂದಲೇ ಕೆಲಸ ಮಾಡುವ ಅರ್ಹ ಅಧಿಕಾರಿ/ಸಿಬ್ಬಂದಿಗೆ ಆಯ್ಕೆಯನ್ನು ಒದಗಿಸಬಹುದು ಎಂದು ಹೇಳಿದೆ. ಪ್ರಸ್ತುತ, 48,34,000 ಕೇಂದ್ರ ಸರ್ಕಾರಿ ನೌಕರರಿದ್ದಾರೆ.

ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೆ ನೀಡಿದ ಸಂವಹನದಲ್ಲಿ ಸಿಬ್ಬಂದಿ ಸಚಿವಾಲಯವು, ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಹಿನ್ನೆಲೆ ಮನೆಯಿಂದ ಕಾರ್ಯನಿರ್ವಹಿಸಲು ಅನೇಕ ಸಚಿವಾಲಯಗಳಿಗೆ ಅನಿವಾರ್ಯಗೊಳಿಸಿದೆ.

ಮುಂಬರುವ ದಿನಗಳಲ್ಲಿ ಕಚೇರಿಯಲ್ಲಿ ಅಂತರ ಕಾಯ್ದುಕೊಳ್ಳಲು ಈ ವ್ಯವಸ್ಥೆಯನ್ನು ತರಲು ಚಿಂತಿಸಲಾಗಿದೆ. ಇದರ ಕರುಡನ್ನು ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ದೂರುಗಳ ಇಲಾಖೆ ರೂಪಿಸಿದೆ.

ಲಾಕ್​ಡೌನ್​ ಅವಧಿಯಲ್ಲಿ ಕೇಂದ್ರ ಸರ್ಕಾರದ ಅನೇಕ ಸಚಿವಾಲಯಗಳು / ಇಲಾಖೆಗಳು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಇ-ಆಫೀಸ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡಿವೆ. ಜೊತೆಗೆ ಅನುಕರಣೀಯ ಫಲಿತಾಂಶಗಳನ್ನು ನೀಡಿವೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಈ ರೀತಿಯ ಕಾರ್ಯ ವಿಧಾನದ ಅನುಭವ ಪಡೆದಿದೆ ಎಂದು ಸಚಿವಾಲಯ ಹೇಳಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಕಾರ್ಯದರ್ಶಿಯು ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಜರಾತಿ ಮತ್ತು ವೇರಿಯಬಲ್ ಕೆಲಸದ ಸಮಯ ಮುಂದುವರಿಸಲಿದೆ ಎಂದು ತಿಳಿಸಿದೆ.

ABOUT THE AUTHOR

...view details